ಬೆಳಗಾವಿ: ಮಹಾಮಾರಿ ಕೊರೊನಾ ವೈರಸ್ಗೆ ಕುಂದಾನಗರಿ ಬೆಚ್ಚಿಬಿದ್ದಿದೆ. ಕಳೆದ ಏಂಟು ದಿನಗಳ ಅವಧಿಯಲ್ಲಿ ಒಂದೇ ಕುಟುಂಬದ ಮೂವರು ಕೊರೊನಾಗೆ ಬಲಿಯಾಗಿದ್ದಾರೆ.
ಬೆಳಗಾವಿಯಲ್ಲಿ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ ಕೊರೊನಾ - ಒಂದೇ ಕುಟುಂಬದ ಮೂವರು ಕೊರೊನಾಗೆ ಬಲಿ
ಬೆಳಗಾವಿಯಲ್ಲಿ ಕೊರೊನಾದಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.
corona died
ನಗರದ ಬಾಕ್ಸೈಟ್ ರಸ್ತೆಯ ವಿದ್ಯಾನಗರದಲ್ಲಿ ತಂದೆ, ತಾಯಿ ಹಾಗೂ ಮಗ ಸೇರಿ ಮೂವರು ಮೃತಪಟ್ಟಿದ್ದಾರೆ. ನಿವೃತ್ತ ಉಪ ನೋಂದನಾಧಿಕಾರಿ ಕೃಷ್ಣಾ ತೇರಗಾಂವ (80), ಪಾರ್ವತಿ ತೇರಗಾಂವ (76) ಹಾಗೂ ಮಗ ಪ್ರಶಾಂತ ತೇರಗಾಂವ (49) ಕೊರೊನಾಗೆ ಬಲಿಯಾದವರು.
ಮೃತರು ಪೈಕಿ ಪಾರ್ವತಿ ಏ.24ರಂದು, ಕೃಷ್ಣಾ ಏ. 29ರಂದು ಹಾಗೂ ಪ್ರಶಾಂತ ಮೇ 3ರಂದು ಮೃತರಾಗಿದ್ದಾರೆ. ಕೋವಿಡ್ನಿಂದ ಒಂದೇ ಕುಟುಂದ ಮೂವರು ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.