ಬೆಳಗಾವಿ:ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ನೂಪುರ್ ಶರ್ಮಾ ಪ್ರತಿಕೃತಿ ನಡುರಸ್ತೆಯಲ್ಲೇ ನೇತು ಹಾಕಿದ ಪ್ರಕರಣ ಸಂಬಂಧ ಬೆಳಗಾವಿ ಪೊಲೀಸರು ಮೂವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ. ದೇಶಪಾಂಡೆ ಗಲ್ಲಿಯ ಮೊಹ್ಮದ್ ಶೋಯೆಬ್ ಅಬ್ದುಲ್ ಗಫರ್ ಹಕೀಮ್, ಅಮನ್ ಮೊಕಾಶಿ ಹಾಗು ಅರ್ಬಾಜ್ ಮೊಕಾಶಿ ವಶಕ್ಕೆ ಪಡೆಯಲಾದ ಆರೋಪಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನೂಪುರ್ ಶರ್ಮಾ ಅಣಕು ಪ್ರತಿಕೃತಿ ನೇಣು ಹಾಕಿದ ಮೂವರು ಕಿಡಿಗೇಡಿಗಳು ಪೊಲೀಸ್ ವಶಕ್ಕೆ - ಬೆಳಗಾವಿಯಲ್ಲಿ ನೂಪುರ್ ಶರ್ಮಾ ಅಣಕು ಪ್ರತಿಕೃತಿ ನೇಣಿಗೆ
ಬೆಳಗಾವಿಯಲ್ಲಿ ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಿದ್ದ ಪ್ರಕರಣ ಸಂಬಂಧ ಮೂವರು ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೂಪುರ್ ಶರ್ಮಾ ಅಣಕು ಪ್ರತಿಕೃತಿ ನೇಣಿಗೆ
ದೇಶಪಾಂಡೆ ಗಲ್ಲಿಯ ಕಾಂಪ್ಲೆಕ್ಸ್ಗೆ ನುಗ್ಗಿ ಹಗ್ಗ ಕಟ್ಟಿ ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಲಾಗಿತ್ತು. ಕಾಂಪ್ಲೆಕ್ಸ್ ಒಳಗೆ ನುಗ್ಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೂನ್ 9ರ ರಾತ್ರಿ 10.54ಕ್ಕೆ ಕಾಂಪ್ಲೆಕ್ಸ್ ನುಗ್ಗಿ ಮಧ್ಯರಾತ್ರಿ ವೇಳೆ ಹಗ್ಗ ಕಟ್ಟಿ ಪ್ರತಿಕೃತಿ ನೇತು ಹಾಕಿದ್ದರು. ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಮೊಬೈಲ್ ಟವರ್ ಲೋಕೇಶನ್ ಆಧರಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾ ಅಣಕು ಪ್ರತಿಕೃತಿ ಗಲ್ಲಿಗೆ: ಬೆಳಗಾವಿಯಲ್ಲಿ ಬಿಗುವಿನ ವಾತಾವರಣ!
Last Updated : Jun 12, 2022, 1:51 PM IST