ಕರ್ನಾಟಕ

karnataka

ETV Bharat / city

ನೋಟು ಮುದ್ರಣ ಯಂತ್ರ ಇಟ್ಟುಕೊಂಡು ಜನರಿಗೆ ವಂಚಿಸುತ್ತಿದ್ದ ಗ್ಯಾಂಗ್ ಪತ್ತೆ

ನೋಟು ಮುದ್ರಣ ಯಂತ್ರ ಇಟ್ಟುಕೊಂಡು ಹಣ ಡಬಲ್, ತ್ರಿಬಲ್ ಮಾಡುವುದಾಗಿ ಹೇಳಿ ವಂಚಿಸುತ್ತಿದ್ದ ನಾಲ್ವರು ರಾಯಬಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Raibag fraud case
ರಾಯಬಾಗ ವಂಚನೆ ಪ್ರಕರಣ

By

Published : Oct 20, 2021, 12:36 PM IST

ಚಿಕ್ಕೋಡಿ:ನೋಟು ಮುದ್ರಣ ಯಂತ್ರ ಇಟ್ಟುಕೊಂಡು ಹಣವನ್ನು ಎರಡು ಪಟ್ಟು, ಮೂರು ಪಟ್ಟು ಮಾಡುವುದಾಗಿ ಹೇಳಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ರಾಯಬಾಗ ‌ಪೊಲೀಸರು ಬಂಧಿಸಿದ್ದಾರೆ.

ಕೊಲ್ಲಾಪುರ ಮೂಲದ ಮೇಹರುನ್ ಸರ್ಕಾವಾಸ್ (72), ಗೋಕಾಕ ತಾಲೂಕಿನ ಘಟಪ್ರಭಾ ನಿವಾಸಿಗಳಾದ ಆಸೀಫ್ ಬಳೆಗಾರ್(26), ಗಜಾನನ ನಾಯಕ್ (31) ಹಾಗೂ ಸಲೀಲ್ ಸೈಯದ್ (25) ಬಂಧಿತರು. ಆರೋಪಿಗಳು ಬಳಕೆ ಮಾಡುತ್ತಿದ್ದ ನೋಟು ಮುದ್ರಣ ಯಂತ್ರ, ಕಟ್ಟಿಗೆ ಬಾಕ್ಸ್, ವಿದ್ಯುತ್ ಸಂಬಂಧಿತ ವಸ್ತುಗಳು ಹಾಗೂ ನೋಟು ಮಾಡಲು ಬಳಸುತ್ತಿದ್ದ ಬಿಳಿ ಕಾಗದ ಪತ್ರ, 59,000 ಹಣ, ಮೊಬೈಲ್ ಫೋನ್​ಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಮಂಗಳೂರಲ್ಲಿ ನವಜಾತ ಶಿಶು ಅದಲು-ಬದಲು ಆರೋಪ​: DNA ಮಾದರಿ ಹೈದರಾಬಾದ್‌ಗೆ ರವಾನೆ

ಆರೋಪಿಗಳು ಹಣ ಡಬಲ್ ಮಾಡುವುದಾಗಿ ಹೇಳಿ ಕೊಲ್ಲಾಪುರ ಮೂಲದ ರಮೇಶ ಘೋರ್ಪಡೆ ಎಂಬುವವರ ಬಳಿ ಲಕ್ಷಾಂತರ ರೂ. ಹಣ ಪಡೆದು ವಂಚನೆ ಮಾಡಿದ್ದರು. ಈ ಕುರಿತು ವಂಚನೆಗೊಳಗಾಗಿದ್ದ ರಮೇಶ ರಾಯಬಾಗ ‌ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ABOUT THE AUTHOR

...view details