ಬೆಳಗಾವಿ:ಮಳೆ ಸೇರಿದಂತೆ ಅತಿವೃಷ್ಟಿಯಂತ ಪರಿಸ್ಥಿತಿಯಿಂದಾಗಿ ಲಿಂಗಾಯತ ಪಂಚಮಸಾಲಿ ಸಮುದಾಯ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡಲೇಬೇಕು ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದರು.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಲಿಂಗಾಯತ ಸಮಾಜದಲ್ಲಿ 90ಕ್ಕೂ ಹೆಚ್ಚಿನ ಜನರು ಎಲ್ಲರೂ ಕೃಷಿಯನ್ನು ನಂಬಿಕೊಂಡು ಜೀವನ ನಡೆಸುತ್ತಾರೆ. ಹೀಗಾಗಿ ಸಮಾಜಕ್ಕೆ ಶೈಕ್ಷಣಿಕವಾಗಿ, ಉದ್ಯೋಗದ ದೃಷ್ಟಿಯಿಂದ ಮೀಸಲಾತಿ ನೀಡಬೇಕು. 2ಎ ಮೀಸಲಾತಿ ಅಷ್ಟೇ ನೀಡದೇ ಸಮಾಜದ ಅಂಕಿ ಅಂಶಗಳ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಎಂದರು.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹ ಇದರ ಜೊತೆಗೆ ಕ್ಷೇತ್ರದ ಓಬಿಸಿ ಪಟ್ಟಿಯಲ್ಲಿಯೂ ಸೇರ್ಪಡೆ ಮಾಡಬೇಕು. ಇದು ಮೊದಲ ಹೋರಾಟದ ಆರಂಭವಷ್ಟೇ. ನಮ್ಮ ಸಮುದಾಯ ಎದ್ದು ಬಂದ್ರೆ ಇಡೀ ಬೆಳಗಾವಿಯಲ್ಲಿ ಜಾಗ ಸಾಲಲ್ಲ. ಹೋರಾಟ ಇಷ್ಟಕ್ಕೆ ಬಿಡದೇ ಮೀಸಲಾತಿ ಸಿಗುವವರೆಗೂ ಮುಂದುವರೆಸಬೇಕು. ಪ್ರಸಂಗ ಬಂದ್ರೆ ಬೆಳಗಾವಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆಗೂ ಸಿದ್ಧವಿರುವುದಾಗಿ ಜನರನ್ನು ಹುರುದುಂಬಿಸಿದರು.
ಇದೇ ವೇಳೆ ತಮ್ಮ ಸೋಲಿಗೆ ಬಗ್ಗೆ ಮಾತನಾಡಿದ ಅವರು, ಷಡ್ಯಂತ್ರದಿಂದ ಸೋಲು ಕಾಣಬೇಕಾಯಿತು. ಆದ್ರೆ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಹಾಗೂ ಹಲವಾರು ಜನರಿಗೆ ಒಳ್ಳೆಯದನ್ನು ಬಯಸಿದರೂ ಸೋತಿದ್ದೇನೆ. ಆದ್ರೆ ನಾನೊಬ್ಬನೇ ಸಚಿವನಾಗಿ ಬೆಳೆಯೋದು ದೊಡ್ಡದಲ್ಲ, ಸಮಾಜದ ಜನರು ಬೆಳೆಯಬೇಕು. ಹೀಗಾಗಿ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದರು.