ಕರ್ನಾಟಕ

karnataka

ETV Bharat / city

ಬೆಳಗಾವಿ ಜಿಲ್ಲೆಯಲ್ಲಿ 2,446 ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು - ಬೆಳಗಾವಿ ಸುದ್ದಿ

ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 2,446 ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2,446 students absent for SSLC examination in Belgaum district
ಬೆಳಗಾವಿ ಜಿಲ್ಲೆಯಲ್ಲಿ 2,446 ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

By

Published : Jun 25, 2020, 10:58 PM IST

ಬೆಳಗಾವಿ:ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 32,356 ವಿದ್ಯಾರ್ಥಿಗಳ ಪೈಕಿ‌ 31,568 ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗಿದ್ದು, 788 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 2,446 ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 40,436 ವಿದ್ಯಾರ್ಥಿಗಳ ಪೈಕಿ 38,778 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,658 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 2,446 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಇನ್ನು, ಯಾವ ವಿದ್ಯಾರ್ಥಿಗಳು ಕೂಡ ಮೊದಲ ಪರೀಕ್ಷೆಯಲ್ಲಿ ಡಿಬಾರ್ ಆಗದೇ ಇರುವುದು ವಿಶೇಷ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಎಸ್​ಎಸ್​ಎಲ್​ಸಿ ಪರೀಕ್ಷೆ ಮುಕ್ತಾಯವಾದ ಹಿನ್ನೆಲೆ, ನಗರದ ಸರ್ದಾರ್ ಹೈಸ್ಕೂಲ್ ಆವರಣವನ್ನ ಸ್ಯಾನಿಟೈಸ್​ ಮಾಡುವ ಮೂಲಕ ಮಹಾನಗರ ಪಾಲಿಕೆ‌ ಸಿಬ್ಬಂದಿ ಸ್ವಚ್ಚತೆ ಕೈಗೊಂಡರು. ಕೊರೊನಾ ವೈರಸ್ ಹಿನ್ನೆಲೆ, ನಾಳೆ ಬೆಳಿಗ್ಗೆ ಕೂಡ ಮಕ್ಕಳ ಸುರಕ್ಷತೆ ದೃಷ್ಟಿಯಿಂದ‌‌ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳನ್ನ ಸ್ಯಾನಿಟೈಸ್​ ಮಾಡಲಿದ್ದಾರೆ.

ABOUT THE AUTHOR

...view details