ಚಿಕ್ಕೋಡಿ (ಬೆಳಗಾವಿ):ಮನೆಯಿಂದ ಹೊರಗೆ ಬರಬೇಡಿ ಎಂದು ಪೊಲೀಸರು ಮನವಿ ಮಾಡಿಕೊಂಡರೂ ಕೇಳದೆ ಅನಾವಶ್ಯಕವಾಗಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿದ ಓಡಾಡುತ್ತಿದ್ದವರ 240 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಗವಾಡ ಠಾಣೆಯ ಪಿಐ ಹಣಮಂತ ಧರ್ಮಟ್ಟಿ ತಿಳಿಸಿದ್ದಾರೆ.
ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಕಾಗವಾಡ, ಐನಾಪೂರ, ಉಗಾರ, ಶಿರಗುಪ್ಪಿ, ಮಂಗಸೂಳಿ, ಮೋಳೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಿಯಮ ಉಲ್ಲಂಘಿಸಿ ಅನಾವಶ್ಯಕವಾಗಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದೆ.