ಕರ್ನಾಟಕ

karnataka

By

Published : Sep 24, 2021, 11:48 PM IST

ETV Bharat / city

2 ವರ್ಷದ ಬಾಲಕಿಯನ್ನು ಸುಟ್ಟು ಎಸೆದು ಹೋಗಿದ್ದ ಪ್ರಕರಣ: ಆರೋಪಿಗಳ ಪತ್ತೆಗೆ 6 ತಂಡ ರಚನೆ

ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕಬ್ಬಿನ ತೋಟದಲ್ಲಿ 2 ವರ್ಷದ ಬಾಲಕಿಯನ್ನು ಸುಟ್ಟು ಎಸೆದು ಹೋಗಿದ್ದ ಪ್ರಕರಣವನ್ನು ಭೇದಿಸಲು ಅಥಣಿ ಡಿವೈಎಸ್​ಪಿ ಎಸ್.ವಿ ಗಿರೀಶ್ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಲಾಗಿದೆ.

Athani
ಅಥಣಿ

ಅಥಣಿ:ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕಬ್ಬಿನ ತೋಟದಲ್ಲಿ 2 ವರ್ಷದ ಬಾಲಕಿಯನ್ನು ಸುಟ್ಟು ಎಸೆದು ಹೋಗಿದ್ದ ಪ್ರಕರಣವನ್ನು ಬೆಳಗಾವಿ ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ.

ಸ್ಥಳಕ್ಕೆ ಎಸ್​ಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಅಥಣಿಯಲ್ಲಿ ಪೊಲೀಸ್​​ ಅಧಿಕಾರಿಗಳ ಜತೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಪ್ರಕರಣ ಭೇದಿಸಲು ಅಥಣಿ ಡಿವೈಎಸ್​ಪಿ ಎಸ್.ವಿ ಗಿರೀಶ್ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ಹಂತದಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ತನಿಖೆಗಾಗಿ ಪಕ್ಕದ ಮಹಾರಾಷ್ಟ್ರ ರಾಜ್ಯಕ್ಕೆ ಪೊಲೀಸರ ಒಂದು ತಂಡ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈವರೆಗೆ ಬಾಲಕಿಯ ಗುರು ಪತ್ತೆಯಾಗಿಲ್ಲ. ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಸೋಮವಾರ ಹುಣ್ಣಿಮೆ, ವಾಮಾಚಾರಕ್ಕೆ ಮಗುವಿಗೆ ಚಿತ್ರ ಹಿಂಸೆ?:

ಅಥಣಿ ಭಾಗದಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದೆ. ಪಕ್ಕದ ರಾಜ್ಯದ ಮಹಾರಾಷ್ಟ್ರದಿಂದ ಜನರು ಬಂದು ನಿಧಿ ಶೋಧ ಕಾರ್ಯ ನಡೆಸುತ್ತಾರೆ. ಈ ಮಗುವಿನ ಮೇಲೆ ವಾಮಾಚಾರ ಮಾಡಿ ನರ ಬಲಿ ನೀಡುವ ಪ್ರಯತ್ನ ಮಾಡಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ

ಇದನ್ನೂ ಓದಿ: ಸುಟ್ಟ ಗಾಯದೊಂದಿಗೆ ಕೃಷ್ಣಾ ನದಿ ದಂಡೆಯಲ್ಲಿ 2 ವರ್ಷದ ಬಾಲಕಿ ಪತ್ತೆ: ವಾಮಾಚಾರಕ್ಕೆ ಬಳಕೆ ಶಂಕೆ

ABOUT THE AUTHOR

...view details