ಕರ್ನಾಟಕ

karnataka

ETV Bharat / city

ಬೆಳಗಾವಿಯ ಕಣಕುಂಬಿ ಅರಣ್ಯ ಪ್ರದೇಶದಲ್ಲಿ 18 ಸೆಂ.ಮೀ ಮಳೆ ದಾಖಲು - undefined

ಬೆಳಗಾವಿ ಜಿಲ್ಲೆಯ ಕಣಕುಂಬಿ ಅರಣ್ಯ ಪ್ರದೇಶದಲ್ಲಿ 18 ಸೆಂ.ಮೀ ಮಳೆ ದಾಖಲಾಗಿದ್ದು, ಸತತ ಧಾರೆಯಿಂದಾಗಿ ಮಲಪ್ರಭೆ ಹಾಗೂ ಮಹದಾಯಿ ಜೀವಕಳೆ ತುಂಬಿಕೊಂಡು ಮೈದುಂಬಿ ಹರಿಯುತ್ತಿವೆ.

ಕಣಕುಂಬಿ ಅರಣ್ಯ ಪ್ರದೇಶದಲ್ಲಿ 18 ಸೆಂ.ಮೀ ಮಳೆ ದಾಖಲು

By

Published : Jun 30, 2019, 1:17 PM IST

ಬೆಳಗಾವಿ:ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಹಾಗೂ ಪಶ್ಚಿಮ ಘಟ್ಟಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದೆರಡು ದಿನದಿಂದ ಬೆಂಬಿಡದೆ ಉತ್ತಮ ಮಳೆಯಾಗುತ್ತಿದೆ.

ಕಣಕುಂಬಿ ಅರಣ್ಯ ಪ್ರದೇಶದಲ್ಲಿ 18 ಸೆಂ.ಮೀ ಮಳೆ ದಾಖಲಾಗಿದ್ದು, ಸತತ ಧಾರೆಯಿಂದಾಗಿ ಮಲಪ್ರಭೆ ಹಾಗೂ ಮಹದಾಯಿ ಜೀವಕಳೆ ತುಂಬಿಕೊಂಡು ಮೈದುಂಬಿ ಹರಿಯುತ್ತಿವೆ. ಇದಲ್ಲದೇ ವರುಣನ ಆರ್ಭಟದಿಂದ ಕಾಡಿನಂಚಿನ ಕೆಲ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

ಕಣಕುಂಬಿ ಅರಣ್ಯ ಪ್ರದೇಶದಲ್ಲಿ 18 ಸೆಂ.ಮೀ ಮಳೆ ದಾಖಲು

ಇನ್ನು ಮಳೆಯಿಂದ ಹಬ್ಬನಹಟ್ಟಿ ಆಂಜನೇಯ ದೇವಾಲಯದಲ್ಲಿ ಮಲಪ್ರಭಾ ನದಿ ನೀರು ನುಗ್ಗಿದ್ದು, ಪೂಜೆ, ದರ್ಶನ ಸ್ಥಗಿತಗೊಳಿಸಲಾಗಿದೆ‌.

For All Latest Updates

TAGGED:

ABOUT THE AUTHOR

...view details