ಬೆಳಗಾವಿ:ಕಿಲ್ಲರ್ ಕೊರೊನಾಗೆ ಆರು ಸೋಂಕಿತರು ಮೃತಪಟ್ಟಿದ್ದು, ಈವರೆಗೂ ಕೋವಿಡ್-19ನಿಂದ ಮೃತಪಟ್ಟವರ ಸಂಖ್ಯೆ 52ಕ್ಕೆ ಏರಿದೆ. ಅಲ್ಲದೇ ಜಿಲ್ಲೆಯಲ್ಲಿಂದು 155 ಜನರಿಗೆ ಸೋಂಕು ವಕ್ಕರಿಸಿದೆ.
ಬೆಳಗಾವಿಯಲ್ಲಿ ಕೊರೊನಾಗೆ 6 ಸಾವು; 155 ಜನರಿಗೆ ವಕ್ಕರಿಸಿದ ಸೋಂಕು - ಬೆಳಗಾವಿ ಕೊರೊನಾ ನ್ಯೂಸ್
ಬೆಳಗಾವಿ ಜಿಲ್ಲೆಯಲ್ಲಿ ಇಂದು 155 ಜನರಿಗೆ ಕೊರೊನಾ ವೈರಸ್ ವಕ್ಕರಿಸಿದ್ದರೆ, 6 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 2,304ಕ್ಕೆ ಏರಿಕೆಯಾಗಿದೆ.
![ಬೆಳಗಾವಿಯಲ್ಲಿ ಕೊರೊನಾಗೆ 6 ಸಾವು; 155 ಜನರಿಗೆ ವಕ್ಕರಿಸಿದ ಸೋಂಕು Belgaum District Hospital](https://etvbharatimages.akamaized.net/etvbharat/prod-images/768-512-8194779-806-8194779-1595858606115.jpg)
ಬೆಳಗಾವಿ ಜಿಲ್ಲಾಸ್ಪತ್ರೆ
38 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ ದಾಖಲಾದ ಒಟ್ಟು 2304 ಕೊರೊನಾ ಪ್ರಕರಣಗಳ ಪೈಕಿ 680 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, 1572 ಸಕ್ರಿಯ ಪ್ರಕರಣಗಳಿವೆ.