ಕರ್ನಾಟಕ

karnataka

ETV Bharat / business

ಜೊಮ್ಯೊಟೊ ಸಹ ಸಂಸ್ಥಾಪಕ ಗುಂಜನ್​ ಪಾಟೀದಾರ್​​ ರಾಜೀನಾಮೆ - 10 ವರ್ಷಗಳ ಬಳಿಕ ಸಂಸ್ಥೆ

ಜೊಮ್ಯೊಟೊ ಸಹಸಂಸ್ಥಾಪಕ ಮತ್ತು ಸಿಟಿಒ ಗುಂಜನ್​ ಪಾಟೀದಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಜೊಮ್ಯೊಟೊ ಸಹ ಸಂಸ್ಥಾಪಕ ಗುಂಜನ್​ ಪಾಟೀದಾರ್​​ ರಾಜೀನಾಮೆ
zomato-co-founder-gunjan-patidar-has-left-the-company

By

Published : Jan 3, 2023, 11:30 AM IST

ನವದೆಹಲಿ: ಆನ್​ಲೈನ್​ ಫುಡ್​ ಡೆಲಿವರಿ ಫ್ಲಾಟ್​ಫಾರ್ಮ್​ ಜೊಮ್ಯೊಟೊ ಸಹ ಸಂಸ್ಥಾಪಕ ಮತ್ತು ಸಿಟಿಒ ಗುಂಜನ್​ ಪಾಟೀದಾರ್ 10 ವರ್ಷಗಳ ಬಳಿಕ ಸಂಸ್ಥೆಯನ್ನು ತೊರೆದಿದ್ದಾರೆ ಎಂದು ಕಂಪನಿ ತಿಳಿಸಿದೆ. ಕಳೆದ ನವೆಂಬರ್​ನಲ್ಲಿ ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್​​ ಗುಪ್ತಾ ರಾಜೀನಾಮೆ ನೀಡಿದ ಬಳಿಕ ಇದೀಗ ಗುಂಜನ್​ ಪಾಟೀದಾರ್​ ಸಂಸ್ಥೆಯಿಂದ ಹೊರ ಬಂದಿದ್ದಾರೆ. ಹೀಗಾಗಿ, ಸಂಸ್ಥೆ ಬಿಟ್ಟುಬಂದ ಎರಡನೇ ಹೈ ಪ್ರೊಫೈಲ್​ ಸಿಬ್ಬಂದಿ ಇವರಾಗಿದ್ದಾರೆ.

ಕಂಪನಿಯ ಕೋರ್​ ಟೆಕ್​ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಮೊದಲ ಕೆಲವು ಉದ್ಯೋಗಿಗಳಲ್ಲಿ ಪಾಟೀದಾರ್​ ಒಬ್ಬರು. ಕಳೆದ 10 ವರ್ಷಗಳಲ್ಲಿ, ತಂತ್ರಜ್ಞಾನದ ಅಭಿವೃದ್ಧಿ ಕಾರ್ಯವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಟೆಕ್​ ನಾಯಕತ್ವದ ತಂಡವನ್ನು ಸಹ ಇವರು ಘೋಷಿಸಿದ್ದರು. ಜೊಮ್ಯೊಟೊ ನಿರ್ಮಾಣಕ್ಕೆ ಅವರ ಕೊಡುಗೆ ಅಮೂಲ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕ್ರಾಸ್​ ಕಟಿಂಗ್​ ಅಡಿ ಜೊಮ್ಯೊಟೊ ಕಳೆದ ನವೆಂಬರ್​ನಲ್ಲಿ ಶೇ 3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಇದನ್ನೂ ಓದಿ: ಶೌಚಾಲಯದಲ್ಲಿ ಸಿಕ್ಕ ಚಿನ್ನವನ್ನ ಅಧಿಕಾರಿಗಳಿಗೆ ಹಸ್ತಾಂತರಿಸಿದ ಕೆಲಸಗಾರ

ABOUT THE AUTHOR

...view details