ಕರ್ನಾಟಕ

karnataka

ETV Bharat / business

ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತ ಕಂಡ ಹಳದಿ ಲೋಹ; ಬಂಗಾರದ ಬೆಲೆ 345 ರೂ. ಇಳಿಕೆ - ಬಲಗೊಂಡ ರೂಪಾಯಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಔನ್ಸ್​ಗೆ 1,982 ಡಾಲರ್​ ಇಳಿಕೆ ಕಂಡಿದ್ದರೆ, ಬೆಳ್ಳಿ ಔನ್ಸ್​ಗೆ 24.95 ಡಾಲರ್​ ತಗ್ಗಿದೆ

Yellow metal slumps in global market; Gold rate 345 decrease
Yellow metal slumps in global market; Gold rate 345 decrease

By

Published : Apr 25, 2023, 12:28 PM IST

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹ ಕುಸಿತ ಗೊಂಡಿದ್ದು, ಪರಿಣಾಮವಾಗಿ ರಾಷ್ಟ್ರ ರಾಜಧಾನಿಯಲ್ಲೂ ಚಿನ್ನದ ಬೆಲೆ 345 ರೂ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 60,065 ರೂ ಆಗಿದೆ ಎಂದು ಎಚ್​ಡಿಎಫ್​ಸಿ ಸೆಕ್ಯೂರಿಟಿ ದೃಢಪಡಿಸಿದೆ. ಕಳೆದ ವಹಿವಾಟಿನಲ್ಲಿ 10ಗ್ರಾಂ ಚಿನ್ನದ ದರ 60,410ಗಳೊಂದಿಗೆ ಮುಕ್ತಾಯಗೊಂಡಿದೆ. ಇನ್ನು ಬಂಗಾರದ ಬೆಲೆ ಜೊತೆಗೆ ಬೆಳ್ಳಿ ಬೆಲೆ ಕೂಡ 675 ರೂ ಇಳಿಕೆ ಕಂಡಿದ್ದು, ಕೆಜಿ ಬೆಳ್ಳಿ ದರ 74,400 ರೂ ಆಗಿದೆ.

ಇನ್ನು ಈ ಕುರಿತು ಮಾತನಾಡಿರುವ ಎಚ್​ಡಿಎಫ್​ಸಿ ಸೆಕ್ಯೂರಿಟಿ ಹಿರಿಯ ವಿಶ್ಲೇಷಕ ಸೌಮಿಲ್​ ಗಾಂಧಿ, ದೆಹಲಿಯಲ್ಲಿ ಚಿನ್ನ 345 ದರ ಇಳಿಕೆ ಕಂಡಿದ್ದು, 10 ಗ್ರಾಂಗೆ 60,065 ರೂ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಔನ್ಸ್​ಗೆ 1,982 ಡಾಲರ್​ ಇಳಿಕೆ ಕಂಡಿದ್ದರೆ, ಬೆಳ್ಳಿ ಔನ್ಸ್​ಗೆ 24.95 ಡಾಲರ್​ ತಗ್ಗಿದೆ. ಸೋಮವಾರ ಏಷಿಯನ್​ ಟ್ರೇಡಿಂಗ್​​ ಸಮಯದಲ್ಲಿ ಬಂಗಾರದ ಬಲೆ ಇಳಿಕೆಕಂಡಿದೆ. 30 ಶೇರ್​​ನ ಬಿಎಸ್​ಇ ಸೆನ್ಸೆಕ್ಸ್​​ 60,056ಕ್ಕೆ ಮುಕ್ತಾಯ ಕಂಡಿದೆ. ಷೇರು ಮಾರುಕಟ್ಟೆ ದತ್ತಾಂಶ ಪ್ರಕಾರ, ವಿದೇಶಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದರು. 412.27 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.

ಬಲಗೊಂಡ ರೂಪಾಯಿ :ದೇಶಿಯ ಈಕ್ವಿಟಿ ಮಾರುಕಟ್ಟೆಯಲ್ಲಿ ಡಾಲರ್​ ಕುಸಿತಗೊಂಡ ಹೂಡಿಕೆದಾರರ ವ್ಯಾಪಾರವನ್ನು ಬಲಗೊಳಿಸಿದವರು. ಇದರಿಂದಾಗಿ ಸೋಮವಾರ ಇಂಟರ್​ ಬ್ಯಾಂಕ್​ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್​ ವಿರುದ್ಧ ರೂಪಾಯಿ 14 ಪೈಸೆ ಏರಿಕೆಕಂಡಿತು. ಅಂತರ ವ್ಯಾಂಕ್​ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್​ ಎದುರು ರೂಪಾಯಿ 82.08ಕ್ಕೆ ಆರಂಭ ಕಂಡಿದ್ದು, 14 ಪೈಸೆ ಏರಿಕೆ ಕಾಣುವ ಮೂಲಕ ದಿನದ ಅಂತ್ಯಕ್ಕೆ 81.92ರೊಂದಿಗೆ ಮುಕ್ತಾಯ ಕಂಡಿದೆ.

ವಹಿವಾಟಿನ ವೇಳೆ ರೂಪಾಯಿ 81.88 ಮತ್ತು ಕಡಿಮೆಯ 82.9 ನಡುವೆ ಏರಿಳಿತ ಕಂಡಿತು. ಶುಕ್ತವಾರ ರೂಪಾಯಿ 82.06 ಡಾಲರ್​ ವಿರುದ್ಧ ಕೊನೆಕೊಂಡಿತು. ಶರೆಖಾನ್​ ಬಿಎನ್​ಪಿ ಪರಿಬಾಸ್​ ಸಂಶೋಧನಾ ವಿಶ್ಲೇಷಕ ಅನೂಚ್​ ಚೌದರಿ ಹೇಳುವಂತೆ, ದೇಶಿಯ ಷೇರು ಮಾರುಕಟ್ಟೆ ಬಲಗೊಂಡಿದ್ದು, ಸೋಮವಾರ ದುರ್ಬಲ ಡಾಲರ್​ ರೂಪಾಯಿಯನ್ನು ಬಲಗೊಳಿಸಿದೆ. ಆದರೆ, ಕಚ್ಛಾ ತೈಲದ ದರಗಳ ದುರ್ಬಲ ಪ್ರವೃತ್ತಿ ರೂಪಾಯಿಯಲ್ಲಿ ಏರಿಕೆ ಸೀಮಿತಗೊಳಿಸಿತು.

ಬ್ರೆಂಟ್​ ಕಚ್ಚಾ ತೈಲ: ಜಾಗತಿಕ ಕಚ್ಛಾ ಬೆಲೆಗಳು ಮತ್ತು ಬಲವಾದ ಸ್ಥಳೀಯ ಇಕ್ವಿಟಿ ಮಾರುಕಟ್ಟೆಯ ವಹಿವಾಟಿಯಲ್ಲಿ ರೂಪಾಯಿ ಬಲಪಡಿಸಿತು. ಡಾಲರ್​ ದುರ್ಬಲವಾಗಿದ್ದು, ಆರ್ಥಿಕ ಹಿಂಜರಿತದ ಬಗ್ಗೆ ಆತಂಕ ಹೆಚ್ಚಿಸಿದೆ. ವಿಶ್ವದ ಆರು ಪ್ರಮುಖ ಕರೆನ್ಸಿ ವಿರುದ್ಧ ಅಮೆರಿಕ ಡಾಲರ್​ ಸೂಚ್ಯಂಕ 0.35ರಷ್ಟು ಕುಸಿತ ಕಂಡಿದ್ದು, 101.47ಕ್ಕೆ ತಲುಪಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್​ ಕ್ರೂಡ್​​ ಪ್ಯೂಚರ್ಸ್​ ಪ್ರತಿ ಬ್ಯಾರೆಲ್​ಗೆ 0.60 ರೊಂದಿಗೆ 82.15 ಡಾಲರ್​​ಗೆ ಇಳಿಕೆ ಕಂಡಿದೆ.

ಇದನ್ನೂ ಓದಿ: ಕ್ರಿಪ್ಟೊಕರೆನ್ಸಿ ನಿರ್ಬಂಧಕ್ಕೆ ಜಾಗತಿಕ ಒಮ್ಮತ ಅಗತ್ಯ: ಸಚಿವೆ ಸೀತಾರಾಮನ್

ABOUT THE AUTHOR

...view details