ಹೈದರಾಬಾದ್: ಭಾರತದಲ್ಲಿ ಇಂದಿಗೂ ಪಿತೃತ್ವ ಕುಟುಂಬ ಮಾದರಿಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಅದರ ಅನುಸಾರ ಕುಟುಂಬದ ಮುಖ್ಯಸ್ಥ ಪುರುಷ. ಈ ಸಂಪ್ರದಾಯದಲ್ಲಿ ಮಹಿಳೆ ಮನೆಗೆ ಸೀಮಿತವಾಗಿ, ಮನೆಯ ಸಂಪಾದನೆ ಮೂಲ ಗಂಡು ಆಗಿರಲಿದ್ದಾನೆ. ಈ ಕಲ್ಪನೆ ಇದೀಗ ಬದಲಾವಣೆ ಕಾಣುತ್ತಿದೆ. ಅದರಲ್ಲೂ ವಿಶೇಷವಾಗಿ ಯುವಜನರಲ್ಲಿ. ಯುವ ಜನತೆ ಪಾಶ್ವಿಮಾತ್ಯ ಸಂಸ್ಕೃತಿಯಂತೆ ಮನೆಯ ಕಠಿಣ ಕೆಲಸಗಳಲ್ಲೂ ಭಾಗಿಯಾಗುತ್ತಿದ್ದಾರೆ. ಜೀವನ ಮಟ್ಟ ಏರಿಕೆಯಾಗುತ್ತಿರುವುದು ಇದಕ್ಕೆ ಕಾರಣ ಎಂದರೆ ತಪ್ಪಾಗಲಾರದು.
ಎಷ್ಟೇ ಸಂಪ್ರದಾಯ ಕಟ್ಟುಪಾಡುಗಳ ನಡುವೆಯೂ ಮಹಿಳೆಯರು ಕುಟುಂಬ ಕಾರಣಕ್ಕೆ ಗಂಡನ ಗುರಿ ಸಾಧನೆಯ ಪೂರೈಸಲು ಅವರ ಪರವಾಗಿ ನಿಂತು ಬೆಂಬಲಿಸುತ್ತಾರೆ. ಪುರುಷರು ತಮ್ಮ ಗುರಿ ಸಾಧಿಸುವ ವೃತ್ತಿಯಲ್ಲಿ ಬ್ಯುಸಿಯಾದರೆ, ಕುಟುಂಬದ ಜವಾಬ್ದಾರಿ ಹೊರುವ ಬಗ್ಗೆ ಕೇಳುತ್ತೇವೆ. ಗಂಡನ ಕನಸುಗಳ ನನಸು ಮಾಡಲು ಕನಸುಗಳನ್ನು ತ್ಯಾಗ ಮಾಡಿರುವುದನ್ನು ಕೇಳುತ್ತೇವೆ. ಪುರುಷರ ಯಶಸ್ಸಿನ ಆರಂಭಕ್ಕೆ ಅವರ ಉದ್ಯಮಕ್ಕಾಗಿ ಮಹಿಳೆಯರು ಆರಂಭದಲ್ಲಿ ಬಂಡವಾಳ ನೀಡುತ್ತಾರೆ ಎಂಬುದರ ಕುರಿತು ರಿಚಾ ಸಿಂಗ್ ಎಂಬುವವರು ಇತ್ತೀಚಿಗೆ ಟ್ವಿಟರ್ನಲ್ಲಿ ನೆನಪಿಸಿದ್ದರು.
ಆಕೆ ದುಡಿಯುತ್ತಾಳೆ... ನಾನು ಖರ್ಚು ಮಾಡುತ್ತೇನೆ:ನನ್ನ ಹೆಂಡತಿ ದುಡಿಯುತ್ತಾಳೆ. ನಾನು ಖರ್ಚು ಮಾಡುತ್ತೇನೆ ಎಂದು ಸಂಕೋಚದಿಂದಲೇ ತಿಳಿಸಿದ್ದಾರೆ ಫ್ಲಟ್ಹೆಡ್ಸ್ ಸಹ ಸಂಸ್ಥಾಪಕ ಗಣೇಶ್ ಬಾಲಕೃಷ್ಣನ್. ನಿಮ್ಮ ಹೆಂಡತಿಯ ಸಂಬಳದಲ್ಲಿ ನೀವು ಜೀವನ ಮಾಡುತ್ತಿದ್ದರೆ, ಭಾರತೀಯ ಸಮಾಜ ನಿಮ್ಮನ್ನು ಯಾವ ದೃಷ್ಟಿಕೋನದಿಂದ ನೋಡುತ್ತದೆ ಎಂಬುದನ್ನು ನಾನು ಅರ್ಥೈಸಿಕೊಳ್ಳುತ್ತೇವೆ ಎನ್ನುತ್ತಾರೆ ರಿಚಾ. ಅಲ್ಲದೇ, ಇಬ್ಬರು ಪ್ರಮುಖ ಉದ್ಯಮಿಗಳು ತಮ್ಮ ಹೆಂಡತಿಯರಿಂದ ಆರ್ಥಿಕ ಸಹಾಯ ಪಡೆದು ಹೇಗೆ ಯಶಸ್ವಿಯಾದರು ಎಂಬುದನ್ನು ಉಲ್ಲೇಖಿಸಿದ್ದಾರೆ.
ಸುಧಾಮೂರ್ತಿ ಬಂಡವಾಳ:ಇನ್ಫೋಸಿಸ್ ಸಹ ಸಂಸ್ಥಾಪರಾದ ನಾರಾಯಣಮೂರ್ತಿ ತಮ್ಮ ಕಂಪನಿಯನ್ನು ಆರಂಭದಲ್ಲಿ ಕಟ್ಟಿದ್ದು, ಸುಧಾಮೂರ್ತಿ ನೀಡಿದ ಬಂಡವಾಳದಲ್ಲಿ. ಈ ಮೊದಲು ಈ ಸಂಬಂಧ ಮಾತನಾಡಿದ ನಾರಾಯಣ ಮೂರ್ತಿ, ನನ್ನ ಉದ್ಯಮದಲ್ಲಿ ನಾನು ವಿಫಲನಾದೆ. ಆ ಸಮಯದಲ್ಲಿ ಸುಧಾಮೂರ್ತಿ 10 ಸಾವಿರ ರೂಗಳನ್ನು ಸಾಲದ ರೂಪದಲ್ಲಿ ಇನ್ಫೋಸಿಸ್ ಸಂಸ್ಥೆಗೆ ಮೊದಲ ಬಂಡವಾಳವಾಗಿ ನೀಡಿದರು ಎಂದಿದ್ದರು.