ಹೈದರಾಬಾದ್: ಹೂಡಿಕೆದಾರರು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಡ್ಡಿದರಗಳನ್ನು ಪರಿಗಣಿಸಿ ತಮ್ಮ ಆಯ್ಕೆಗಳನ್ನು ಮಾಡುವಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ವಿಶೇಷವಾಗಿ ಒಂದರಿಂದ ಐದು ವರ್ಷಗಳ ಅಲ್ಪಾವಧಿಯ ಹೂಡಿಕೆಯನ್ನು ಮಾಡುವಾಗ ಎಚ್ಚರಿಕೆಯಿಂದ ಸರಿಯಾದ ಯೋಜನೆಗಳನ್ನೆ ಆಯ್ಕೆ ಮಾಡಬೇಕು. ಆಗ ಮಾತ್ರ ಕಷ್ಟಪಟ್ಟು ಗಳಿಸಿದ ಹಣಕ್ಕೆ ಯಾವುದೇ ನಷ್ಟವಾಗದೆ ಗ್ಯಾರಂಟಿ ರಿಟರ್ನ್ಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಅಲ್ಪಾವಧಿಯ ಹೂಡಿಕೆಯ ಆಯ್ಕೆ ಬಹಳ ಮುಖ್ಯ:ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡುವ ಮೊದಲು ಪ್ರತಿಯೊಬ್ಬ ಹೂಡಿಕೆದಾರನು ತಮ್ಮ ಒಟ್ಟಾರೆ ಅಗತ್ಯಗಳನ್ನು ಪರಿಗಣಿಸಿ ನಂತರ ಆರ್ಥಿಕ ಗುರಿಗಳನ್ನು ಸಿದ್ದಪಡಿಸಿಕೊಳ್ಳಬೇಕು. ದೀರ್ಘಕಾಲೀನ ಯೋಜನೆಗಳು ಉತ್ತಮ ಆದಾಯ ನೀಡುತ್ತವೆ. ಆದರೆ, ಅಲ್ಪಾವಧಿಯ ಹೂಡಿಕೆಗಳು ನಮಗೆ ಅಗತ್ಯವೆನಿಸಿದಾಗಲೆಲ್ಲಾ ಹಣ ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಒದಗಿಸುತ್ತವೆ. ಆದ್ದರಿಂದ ಸುರಕ್ಷಿತ ಅಲ್ಪಾವಧಿ ಹೂಡಿಕೆಗಳನ್ನು ಮಾತ್ರ ಆಯ್ಕೆ ಮಾಡುವುದು ಬಹಳ ಮುಖ್ಯವಾಗುತ್ತದೆ.
'ಲಿಕ್ವಿಡ್ ಫಂಡ್‌ಗಳು' ಒಂದು ರೀತಿಯ ಆಕಸ್ಮಿಕ ನಿಧಿಯಾಗಿದೆ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದರಿಂದ ಅಲ್ಪಾವಧಿಯ ಹೂಡಿಕೆಗೆ ಆಯ್ಕೆ ಮಾಡಕೊಳ್ಳಬಹುದಾಗಿದೆ. ಬ್ಯಾಂಕ್ಗಳ ಉಳಿತಾಯ ಠೇವಣಿಗಳಿಗೆ ಹೋಲಿಸಿದರೆ ಈ ಹೂಡಿಕೆಯು ಸ್ವಲ್ಪ ಉತ್ತಮ ಆದಾಯ ನೀಡುತ್ತದೆ. ಲಿಕ್ವಿಡ್ ಫಂಡ್‌ಗಳನ್ನು ಸುರಕ್ಷಿತ ಹೂಡಿಕೆ ಆಗಿದೆ. ಹೂಡಿಕೆಯ ದಿನಾಂಕದಿಂದ ಯಾವುದೇ ಸಮಯದಲ್ಲಿ ಹಣ ಹಿಂಪಡೆಯಬಹುದು. ಹಿಂಪಡೆಯುವಾಗ ತೆರಿಗೆಯ ಕಳೆದು ನಾಲ್ಕರಿಂದ ಏಳು ಶೇಕಡಾದಷ್ಟು ಬಡ್ಡಿ ಪಡೆಯಬಹುದು.
ಲಾಭದಾಯಕ ಹೂಡಿಕೆಗೆ ಹಲವು ದಾರಿ:ಲಿಕ್ವಿಡ್ ಫಂಡ್ಗಳ ಅವಧಿಯು ಒಂದರಿಂದ 90 ದಿನಗಳವರೆಗೆ ಇರುತ್ತದೆ. ಅತ್ಯಂತ ಗಮನಾರ್ಹ ಅಂಶ ಎಂದರೆ ಲಿಕ್ವಿಡ್ ಫಂಡ್ಗಳ ಎನ್ಎವಿ ಸ್ಥಿರವಾಗಿದ್ದು, ಇದು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಕಡಿಮೆಯಾಗುತ್ತದೆ. ಈ ಹೂಡಿಕೆ ಷೇರುಗಳನ್ನು ಮಾರಾಟ ಮಾಡಿದ ಎರಡ ರಿಂದ ಮೂರು ದಿನಗಳಲ್ಲಿ ನಮ್ಮ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಇದು ಹೂಡಿಕೆದಾರರ ಸ್ನೇಹಿಯಾಗಿರುವುದು ಇದರ ಮತ್ತೊಂದು ವೈಶಿಷ್ಟ್ಯವಾಗಿದೆ.