ಆನ್ಲೈನ್ ಪಾವತಿ ಆ್ಯಪ್ಗಳಾದ ಗೂಗಲ್ ಪೇ, ಫೋನ್ ಪೇ, ಅಮೆಜಾನ್ ಪೇ, ಪೇಟಿಎಂನಲ್ಲಿ ನಿಮಗೆ ಕ್ಯಾಶ್ ಬ್ಯಾಕ್ ಬರುತ್ತಿಲ್ಲವೇ? ಹಾಗಾದರೆ, ವಾಟ್ಸ್ ಆ್ಯಪ್ ಪೇಯನ್ನು ಬಳಸಿ ಕ್ಯಾಶ್ಬ್ಯಾಕ್ ಪಡೆದುಕೊಳ್ಳಿ.
ಹೌದು, ಸಾಮಾಜಿಕ ಮಾಧ್ಯಮ ದೈತ್ಯ ವಾಟ್ಸ್ ಆ್ಯಪ್ ತನ್ನ ಆನ್ಲೈನ್ ಪೇ ಮೂಲಕ ಪಾವತಿಯನ್ನು ಹೆಚ್ಚಿಸಲು ಗ್ರಾಹಕರಿಗೆ ಬಂಪರ್ ಕ್ಯಾಶ್ಬ್ಯಾಕ್ ಆಫರ್ ಘೋಷಿಸಿದೆ. ವಾಟ್ಸಾಪ್ ಮೂಲಕ ವ್ಯಾಪಾರ ಪಾವತಿಗಳನ್ನು ಹೆಚ್ಚಿನ ರೀತಿಯಲ್ಲಿ ತರಲು ಕಸರತ್ತು ನಡೆಸುತ್ತಿದೆ. ದೇಶದಲ್ಲಿ ಯುಪಿಐ ವಹಿವಾಟಿನಲ್ಲಿ ಮುಂಚೂಣಿಯಲ್ಲಿರುವ ಗೂಗಲ್ ಪೇ ಮತ್ತು ಫೋನ್ ಪೇನೊಂದಿಗೆ ಸ್ಪರ್ಧಿಸಲು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಅಲ್ಲದೇ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಇತ್ತೀಚೆಗೆ ವಾಟ್ಸ್ಆ್ಯಪ್ ಪಾವತಿ ಸೇವೆಯ ಮಿತಿಯನ್ನು 100 ಮಿಲಿಯನ್ ಬಳಕೆದಾರರಿಗೆ ಹೆಚ್ಚಿಸಲು ನಿರ್ಧರಿಸಿದೆ. ದೇಶದಲ್ಲಿ ವಾಟ್ಸ್ಆ್ಯಪ್ ಈಗಾಗಲೇ 400 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ದೊಡ್ಡ ಲಾಭವಾಗುವ ಸಾಧ್ಯತೆಯಿದೆ.