ಹೈದರಾಬಾದ್: ನಿಮ್ಮ ಆರ್ಥಿಕತೆ ಯೋಜನೆಗಳು ಎಷ್ಟು ವ್ಯವಸ್ಥಿತವಾಗಿದೆ ಎಂಬುದನ್ನು ನಿಮ್ಮ ಆರೋಗ್ಯ ವಿಮೆಗಳು ತಿಳಿಸುತ್ತದೆ. ಸಮಗ್ರ ಆರೋಗ್ಯ ವಿಮೆಯನ್ನು ಪಡೆದರೆ, ಇದು ನಿಮಗೆ ತುರ್ತು ಸಮಯದಲ್ಲಿ ಆರೋಗ್ಯ ಸಹಾಯ ನೀಡುತ್ತದೆ. ಇದಕ್ಕೆ ಮುನ್ನ ನೀವು ಈ ಆರೋಗ್ಯ ವಿಮೆಗಳ ಕುರಿತು ನಿಯಮಗಳ ಬಗ್ಗೆ ಸರಿಯಾಗಿ ತಿಳಿಯುವುದು ಅವಶ್ಯ. ಬಹುತೇಕ ಜನರು ಈ ಆರೋಗ್ಯ ವಿಮೆಗಳು ಕೊಂಡಾಕ್ಷಣವೇ ವೈದ್ಯಕೀಯ ವೆಚ್ಚ ಭರಿಸುತ್ತದೆ ಎಂದು ಭಾವಿಸುತ್ತಾರೆ.
ಇದು ಕೇವಲ ಅಪಘಾತಕ್ಕೆ ಮಾತ್ರ ಅನ್ವಯವಾಗುತ್ತದೆ. ವೈದ್ಯಕೀಯ ವೆಚ್ಚ ಭರಿಸಲು ಕಂಪನಿಗಳು ಕೆಲವು ನಿರ್ದಿಷ್ಟ ಸಮಯವನ್ನು ಇಟ್ಟಿರುತ್ತದೆ. ಈ ಸಮಯದ ಬಳಿಕ ಈ ವಿಮೆ ಪಡೆಯಲು ಮಾತ್ರ ಅರ್ಹ. ಈ ಹಿನ್ನೆಲೆ ಈ ಕುರಿತು ಮಾಹಿತಿ ತಿಳಿಯುವುದು ಅವಶ್ಯವಾಗಿದೆ.
ಆರೋಗ್ಯ ನಿಯಮಗಳು ವಿಮೆ ಪ್ರಾರಂಭದ ನಂತರ ಕಾಯುವ ಅವಧಿಗಳು ತಕ್ಷಣವೇ ಜಾರಿಗೆ ಬರುತ್ತವೆ. ಇದು ಕಾಯಿಲೆಯಿಂದ ಕಾಯಿಲೆಗೆ ಭಿನ್ನವಾಗಿರುತ್ತದೆ. ವಿಮೆ ತೆಗೆದುಕೊಂಡಾಕ್ಷಣ ವಿಮೆದಾರರು ಆಸ್ಪತ್ರೆಗೆ ದಾಖಲಾದರೆ, ಇದು ನಿಮ್ಮ ಚಿಕಿತ್ಸಾ ವೆಚ್ಚವನ್ನು ಭರಿಸುವುದಿಲ್ಲ. ಕಾಯುವಿಕೆ ಅವಧಿಯಲ್ಲಿ ಮಾತ್ರ ಈ ಇದನ್ನು ಭರಿಸಬಹುದಾಗಿದೆ. ಇದನ್ನು ಕೂಲಿಂಗ್ ಆಫ್ ಪಿರಿಯಡ್ ಎನ್ನಲಾಗುವುದು.
ಪಾಲಿಸಿ ಪಡೆದು ಕನಿಷ್ಟ 30 ದಿನಗಳು ಆದ ಬಳಿಕವೇ ವಿಮೆ ಪಡೆಯಬಹುದು. ಈ ಕಾಯುವಿಕೆ ಅವಧಿಯಲ್ಲಿ ಅಪಘಾತವಾದರೆ ಮಾತ್ರ ವಿಮೆ ಪಡೆಯಬಹುದು. ವಿಮೆ ಮಾಡಿಸುವ ಸಮಯಕ್ಕೆ ಮೊದಲೇ ಕೆಲವು ರೋಗಗಳಿದ್ದರೆ, ಅದು ಕೂಡ ತಕ್ಷಣಕ್ಕೆ ಕವರ್ ಆಗುವುದಿಲ್ಲ. ಇದೇ ಕಾರಣಕ್ಕೆ ಈ ಮೊದಲೇ ಇರುವ ರೋಗದ ಬಗ್ಗೆ ವಿಮೆ ಕಂಪನಿಗಳು ಮಾಹಿತಿ ಪಡೆದು, ಅದಕ್ಕೆ ಪ್ರತ್ಯೇಕ ಷರತ್ತು ವಿಧಿಸುತ್ತದೆ. ಅಂತಹ ಕಾಯಿಲೆಗಳೆಂದರೆ, ಹೈಪರ್ಟೆನ್ಷನ್, ಡಯಾಬೀಟಿಸ್, ಅಸ್ತಮಾ. ಥೈರಯ್ಡ್. ಇದರ ಚಿಕಿತ್ಸಾ ವೆಚ್ಚ ಭರಿಸಲು ಕನಿಷ್ಟ 2 ರಿಂದ 4 ವರ್ಷಗಳು ಕಾಯಬೇಕು.
ವಿಶೇಷ ಕಾಯುವಿಕೆ:ಹರ್ನಿಯಾ, ಕ್ಯಾಟರಾಕ್ಟ್, ಮಂಡಿ ಶಸ್ತ್ರ ಚಿಕಿತ್ಸೆಯಂತವುಗಳಿಗೆ ವಿಮೆ ಕಂಪನಿಗಳಿ ವಿಶೇಷ ಕಾಯುವಿಕೆ ಅವಧಿಯನ್ನು ಹೊಂದಿರುತ್ತದೆ. ಈ ಅವಧಿ 2-4 ವರ್ಷವಾಗಿದೆ. ವಿಮೆ ಪಾಲಿಸಿಗಳಲ್ಲಿ ಈ ಆರೋಗ್ಯ ಷರತ್ತುಗಳು ಹೊಂದಿರುತ್ತವೆ. ಜೊತೆಗೆ ನಿರ್ದಿಷ್ಟ ರೋಗಗಳಿಗೆ ಎಷ್ಟು ಸಮಯಗಳ ಕಾಲಬೇಕು ಎಂಬುದನ್ನು ತಿಳಿಸಲಾಗಿರುತ್ತದೆ. ಇವುಗಳ ಕುರಿತು ಎರಡು ಬಾರಿ ಪರಿಶೀಲನೆ ನಡೆಸಬೇಕು.
ಇಂತಹ ಕಾಯುವಿಕೆ ಅವಧಿಯನ್ನು ಕಡಿತಗೊಳಿಸುವುದು ಹೇಗೆ ಎಂಬ ಬಗ್ಗೆ ಕೂಡ ಚಿಂತಿಸಬಹುದು. ಇದಕ್ಕೆ ಕೂಡ ಮಾರ್ಗ ಇದೆ. ಇದಕ್ಕಾಗಿ ನೀವು ಹೆಚ್ಚುವರಿ ಪ್ರೀಮಿಯಂ ಅನ್ನು ಕಟ್ಟಬೇಕಿದೆ. ವಿಮಾ ಕಂಪನಿ ಮತ್ತು ಯಾವ ರೀತಿಯ ವಿಮೆ ತೆಗೆದುಕೊಂಡಿದ್ದೀರ ಎಂಬುದ ಆಧಾರದ ಮೇಲೆ ಇದು ಕಾಯುವಿಕೆ ಅವಧಿಯನ್ನು ಕಡಿತಮಾಡಬಹುದು. ಈ ಸಂಬಂಧ ಮೊದಲು ವಿಮಾ ಕಂಪನಿಯೊಂದಿಗೆ ಮಾತನಾಡಬೇಕು. ಆರೋಗ್ಯ ವಿಮಾ ಪಾಲಿಸಿಯ ದಾಖಲೆಯನ್ನು ಎಚ್ಚರದಿಂದ ಪರಿಶೀಲಿಸಬೇಕು.
ಪ್ರತಿ ಪಾಲಿಸಿಯಲ್ಲಿಯೂ ಯಾವುದು ಅನ್ವಯವಾಗುತ್ತದೆ. ಯಾವುದು ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿರುತ್ತದೆ. ವಿಮೆದಾರರಿಗೆ ಅರ್ಥವಾಗುವಂತೆ ಈ ನಿಯಮ ಮತ್ತು ಷರತ್ತು ಹೊಂದಿರುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಇದ್ದರೆ, ವಿಮೆ ಕಂಪನಿಯ ಸಹಾಯವಾಣಿಗೆ ಕರೆ ಮಾಡಬಹುದು ಎನ್ನುತ್ತಾರೆ ಬಜಾಜ್ ಅಲೆಯನ್ಸ್ ಜನರಲ್ ಇನ್ಸೂರೆನ್ಸ್ ಆರೋಗ್ಯ ಆಡಳಿತದ ಮುಖ್ಯಸ್ಥ ಭಾಸ್ಕರ್ ನೆರುರ್ಕರ್.
ಕೆಲವು ವಿಮಾ ಪಾಲಿಸಿಗಳು ಪ್ರಸವ ಪೂರ್ವ ವೆಚ್ಚವನ್ನು ಭರಿಸುತ್ತವೆ. ಇದರ ಕಾಯುವಿಕೆ ಅವಧಿ 9 ತಿಂಗಳಿನಿಂದ 6 ವರ್ಷ. ಈ ಕುರಿತು ನಿಯಮಗಳನ್ನು ಪರಿಶೀಲಿಸಬೇಕು. ಕಾಯುವಿಕೆ ಅವಧಿ ಮುಗಿದ ಬಳಿಕವೇ ಈ ಪ್ರಸವಪೂರ್ವ ವೆಚ್ಚ ಭರಿಸಲಾಗುವುದು. ವಿಮಾ ನಿಯಂತ್ರಣ ಮಾರ್ಗದರ್ಶನ ಅನುಸಾರ, ಮಾನಸಿಕ ಕಾಯಿಲೆಗಳ ವೆಚ್ಚವನ್ನು ಭರಿಸುತ್ತದೆ ಈ ವಿಮೆ ಕಂಪನಿಗಳು. ವಿಮೆಗಳ ಚಿಕಿತ್ಸೆ ವೆಚ್ಚ ಕಾಯುವಿಕೆ ಅವಧಿ ಎರಡು ವರ್ಷವಾಗಿದೆ. ವಿಮೆ ಆಧಾರದ ಮೇಲೆ ಇದರ ಕಾಯುವಿಕೆ ಕೂಡ ನಿಂತಿದೆ. ಈ ಕುರಿತು ವಿವರಣೆಯನ್ನು ಕೂಡ ಪಾಲಿಸಿ ಡಾಕ್ಯುಮೆಂಟ್ನಲ್ಲಿ ಪಡೆಯಬಹುದಾಗಿದೆ.
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ 750ರ ಮೇಲೆ ಇಟ್ಟುಕೊಳ್ಳುವುದು ಹೇಗೆ? ಇಲ್ಲಿವೆ ಟಿಪ್ಸ್..