ನವದೆಹಲಿ: ಭಾರತದ ಮೊದಲ ಡಿಜಿಟಲ್ ರೂಪಾಯಿ ಪೈಲಟ್ ಯೋಜನೆ ಇಂದಿನಿಂದ ಆರಂಭವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇಂದು ನವೆಂಬರ್ 1 ರಂದು ಸಗಟು ವಿಭಾಗದಲ್ಲಿ ಕೇಂದ್ರ ಬ್ಯಾಂಕ್ ಬೆಂಬಲಿತ ಡಿಜಿಟಲ್ ರೂಪಾಯಿಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ.
ಡಿಜಿಟಲ್ ರೂಪಾಯಿ - ಚಿಲ್ಲರೆ ವಿಭಾಗದಲ್ಲಿ ಮೊದಲ ಪೈಲಟ್ ಅನ್ನು ಗ್ರಾಹಕರು ಮತ್ತು ವ್ಯಾಪಾರಿಗಳ ನಿಕಟ ಬಳಕೆದಾರರ ಗುಂಪುಗಳಲ್ಲಿ ಆಯ್ದ ಸ್ಥಳಗಳಲ್ಲಿ ಒಂದು ತಿಂಗಳೊಳಗೆ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು RBI ಘೋಷಿಸಿದೆ.
ಒಂಬತ್ತು ಬ್ಯಾಂಕ್ ಗುರುತಿಸಲಾಗಿದೆ: ಡಿಜಿಟಲ್ ರೂಪಾಯಿ ಸಗಟು ವಿಭಾಗದಲ್ಲಿ ಆರಂಭಿಸಲಾಗುತ್ತಿರುವ ಪ್ರಾಯೋಗಿಕ ಯೋಜನೆಗೆ ಒಂಬತ್ತು ಬ್ಯಾಂಕ್ ಗಳನ್ನು ಗುರುತಿಸಲಾಗಿದೆ. ಈ ಒಂಬತ್ತು ಬ್ಯಾಂಕ್‌ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಡಿಜಿಟಲ್ ರೂಪಾಯಿ ಎಂದರೇನು?:ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅಥವಾ ಡಿಜಿಟಲ್ ರೂಪಾಯಿ ಎಂಬುದು ಕೇಂದ್ರೀಯ ಬ್ಯಾಂಕ್ ನೀಡುವ ಕರೆನ್ಸಿ ನೋಟುಗಳ ಡಿಜಿಟಲ್ ರೂಪವಾಗಿದೆ. ಡಿಜಿಟಲ್ ಕರೆನ್ಸಿ ಅಥವಾ ರೂಪಾಯಿ ಹಣದ ಎಲೆಕ್ಟ್ರಾನಿಕ್ ರೂಪವಾಗಿರುತ್ತದೆ. ಇದನ್ನು ಸಂಪರ್ಕವಿಲ್ಲದ ವಹಿವಾಟುಗಳಲ್ಲಿ ಬಳಸಬಹುದು. ಕೇಂದ್ರ ಬಜೆಟ್ 2022 ಅನ್ನು ಪ್ರಸ್ತುತಪಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್‌ಬಿಐ ಶೀಘ್ರದಲ್ಲೇ ತನ್ನದೇ ಆದ ಡಿಜಿಟಲ್ ಕರೆನ್ಸಿ ಪ್ರಾರಂಭಿಸಲಿದೆ ಎಂದು ಘೋಷಿಸಿದ್ದರು.
- ಎರಡು ವಿಧಗಳಾಗಿ CBDC ವಿಂಗಡಣೆ: 1- ಚಿಲ್ಲರೆ (CBDC-R)- ಚಿಲ್ಲರೆ ಡಿಜಿಟಲ್ ಕರೆನ್ಸಿ ಎಲ್ಲರಿಗೂ ಲಭ್ಯವಿರುತ್ತದೆ
- ಸಗಟು ಡಿಜಿಟಲ್ ಕರೆನ್ಸಿ(CBDC-W) ಅನ್ನು ಆಯ್ದ ಹಣಕಾಸು ಸಂಸ್ಥೆಗಳಿಗೆ ಸೀಮಿತ ಪ್ರವೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ