ನವದೆಹಲಿ: ವೈದ್ಯಕೀಯ ವಲಯದಲ್ಲಿ ಧರಿಸಬಹುದಾದ ತಂತ್ರಜ್ಞಾನದ ಮಾರುಕಟ್ಟೆಯು ಈ ವರ್ಷಾಂತ್ಯಕ್ಕೆ ಅಂದರೆ 2023ರಲ್ಲಿ 100 ಬಿಲಿಯನ್ ಡಾಲರ್ ತಲುಪಲಿದೆ. ಅಲ್ಲದೇ ಇದು 2030ರ ಹೊತ್ತಿಗೆ ವಾರ್ಷಿಕ ಬೆಳವಣಿಗೆ ದರ ಶೇ 15ರಷ್ಟಿದೆ ಎಂದು ವರದಿ ತಿಳಿಸಿದೆ.
ಧರಿಸಬಹುದಾದ ಸಾಧನಗಳ ಜೊತೆಗಿನ ಆರೋಗ್ಯ ಸೆನ್ಸರ್ಗಳು ಆರೋಗ್ಯ ವಲಯದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿವೆ. ಅಲ್ಲದೇ ಗ್ರಾಹಕರು ತಮ್ಮ ಆರೋಗ್ಯದ ಮೇಲೆ ನಿಯಂತ್ರಣ ಹೊಂದಿ ಸಬಲರನ್ನಾಗಿಸಲು ಇದು ಸಹಾಯಕವಾಗಲಿದೆ.
ದೂರದ ರೋಗಿಗಳ ನಿರ್ವಹಣೆ ಮತ್ತು ಟೆಲಿಹೆಲ್ತ್ ಸರ್ವೀಸ್ ಪತ್ತೆಗೆ ಮತ್ತು ಹೃದಯ ಬಡಿತ, ಗ್ಲುಕೋಸ್ ಮಟ್ಟ ಮತ್ತು ರಕ್ತದೊತ್ತಡದಂತಹ ಪ್ರಮುಖ ಸೂಚನೆ ನಿರ್ವಹಣೆ ಸೇರಿದಂತೆ ಹಲವು ವೈದ್ಯಕೀಯ ಉದ್ದೇಶದಿಂದ ಈ ಸಾಧನಗಳನ್ನು ಬಳಕೆ ಮಾಡಲಾಗುತ್ತಿದೆ. ಫಿಟ್ನೆಸ್ ಟ್ರ್ಯಾಕರ್ ಮತ್ತು ಆರೋಗ್ಯ ನಿರ್ವಹಣೆ ಸೇರಿದಂತೆ ವೈದ್ಯಕೀಯ ಎಲ್ಲ ಉದ್ದೇಶಕ್ಕಾಗಿ ಎಲ್ಲ ಬಗೆಯ ಬಳಕೆದಾರರಲ್ಲಿ ಈ ಸಾಧನಗಳು ಜನಪ್ರಿಯಾಗುತ್ತಿದೆ ಎಂದು ಗ್ಲೋಬಲ್ ಡಾಟಾದ ವೈದ್ಯಕೀಯ ಸಾಧನದ ಹಿರಿಯ ವಿಶ್ಲೇಷಕ ಬ್ರೈನ್ ಹಿಕ್ಸ್ ತಿಳಿಸಿದ್ದಾರೆ.
ಸ್ಮಾರ್ಟ್ ವಾಚ್:ಈ ಸಾಧನಗಳನ್ನು ದೇಹದಲ್ಲಿ ಧರಿಸಬಹುದಾಗಿದೆ. ಅದರಲ್ಲಿ ಸಾಮಾನ್ಯವಾಗಿ ಜನಪ್ರಿಯ ಆಗಿರುವುದು ಮೊಣಕೈಗೆ ಕಟ್ಟುತ್ತಿರುವ ಸ್ಮಾರ್ಟ್ವಾಚ್ ಆಗಿದೆ. ಇದು ಮೊಬೈಲ್ ಹೆಲ್ತ್ ಜೊತೆಗೆ ಬಳಕೆಯ ಸಂಯೋಜನೆಯನ್ನು ಹೊಂದಿದೆ. ಈ ಸಾಧನಗಳಲ್ಲಿನ ದತ್ತಾಂಶವನ್ನು ನೈಜ ಸಮಯವನ್ನು ಆರೋಗ್ಯ ಕಾರ್ಯಕರ್ತರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಇದರಿಂದ ಅವರಿಗೆ ರಿಮೋಟ್ ನಿರ್ವಹಣೆ ಮತ್ತು ಸಮಯಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.