ಹೈದರಾಬಾದ್:ಆನ್ಲೈನ್ ಖರೀದಿ ಮತ್ತು ಡಿಜಿಟಲ್ ವಹಿವಾಟು ನಿತ್ಯದ ಜೀವನದ ಪ್ರಮುಖ ಭಾಗವಾಗಿದೆ. ಪರಿಣಾಮವಾಗಿ ವಂಚನೆ ಮತ್ತು ಸೈಬರ್ ಕಳ್ಳತನ ಪ್ರಕರಣಗಳ ಸಂಖ್ಯೆ ಕೂಡ ಏರಿಕೆ ಕಾಣುತ್ತಿದೆ. ಜನರ ವೈಯಕ್ತಿಕ ದತ್ತಾಂಶ ಮತ್ತು ಅವರ ಹಣಕ್ಕೆ ಸುಲಭವಾಗಿ ಕನ್ನ ಹಾಕಲಾಗುತ್ತಿದೆ. ಈ ಬೆದರಿಕೆ ಹಿನ್ನೆಲೆ ಡಿಜಿಟಲ್ ಸೇವೆಗಳ ಆನಂದವನ್ನು ಸವಿಯದೇ ಇರಲು ಸಾಧ್ಯವಿಲ್ಲ.
ಡಿಜಿಟಲ್ ವಹಿವಾಟು ನಡೆಸುವಾಗ ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಸಣ್ಣ ತಪ್ಪುಗಳು ಇಲ್ಲಿ ನಿಮಗೆ ಭಾರೀ ಹೊರೆಯನ್ನು ಮೂಡಿಸಲಿದೆ. ನಿಮ್ಮ ಒಟಿಪಿಗಳನ್ನು ವಂಚಕರೊಂದಿಗೆ ಹಂಚಿಕೊಳ್ಳುವುದರಿಂದ ನಿಮ್ಮ ಹಣವನ್ನು ಕಳೆದುಕೊಳ್ಳಬಹುದು. ನಿಮ್ಮ ರಹಸ್ಯ ಬ್ಯಾಂಕ್ ಮಾಹಿತಿಗಳನ್ನು ವಂಚನೆಯ ವೆಬ್ಸೈಟ್ಗಳೊಂದಿಗೆ ಹಂಚಿಕೊಳ್ಳುವುರಿಂದ ಆನ್ಲೈನ್ ಕಳ್ಳತನಕ್ಕೆ ದಾರಿಯಾಗುತ್ತದೆ. ಈ ರೀತಿ ವಂಚನೆ ತಪ್ಪಿಸಲು ಫಿಂಗರ್ಪ್ರಿಂಟ್ನಂತಹ ಪರ್ಯಾಯ ರಕ್ಷಣಾ ಮಾದರಿಗಳನ್ನು ಬಳಸಬೇಕು.
ಪಾಸ್ವರ್ಡ್ ಬಗ್ಗೆ ಇರಲಿ ಗಮನ: ಇತ್ತೀಚಿನ ದಿನಗಳಲ್ಲಿ ನಾವು ಅನೇಕ ಗ್ಯಾಡ್ಜೆಟ್ಗಳನ್ನು ಮತ್ತು ಆನ್ಲೈನ್ ಅಕೌಂಟ್ಗಳನ್ನು ಬಳಸುತ್ತಿದ್ದೇವೆ. ಇವುಗಳ ಪಾಸ್ವರ್ಡ್ ನೆನಪಿನಲ್ಲಿಟ್ಟುಕೊಳ್ಳುವುದು ಸುಲಭವಲ್ಲ. ಅವುಗಳನ್ನು ಆಗ್ಗಿಂದಾಗ್ಗೆ ಬದಲಾಯಿಸದಿದ್ದರೆ, ವಂಚಕರು ಅದನ್ನು ಸುಲಭವಾಗಿ ಪತ್ತೆ ಮಾಡುತ್ತಾರೆ. ಈ ಹಿನ್ನಲೆ ಆಗ್ಗಿಂದಾಗ್ಗೆ ಪಾಸ್ವರ್ಡ್ಗಳನ್ನು ಬದಲಾಯಿಸುವುದು ಉತ್ತಮ ಅಭ್ಯಾಸವಾಗಿದೆ. ಇದರ ಬದಲಿಗೆ ಪಿಂಗರ್ ಪ್ರಿಂಟ್ನಂತಹ ಬಯೋಮೆಟ್ರಿಜ್ ಮತ್ತು ಇ - ಸಹಿಯನ್ನು ಬಳಸಬಹುದಾಗಿದೆ. ಗ್ರಾಹಕರ ರಕ್ಷಣಾ ದೃಷ್ಟಿಯಿಂದ ಬ್ಯಾಂಕ್ಗಳು ಆ್ಯಪ್ಗಳ ಲಾಗಿನ್ಗೆ ಪಾಸ್ವರ್ಡ್ ಮತ್ತು ಫಿಂಗರ್ಪ್ರಿಂಟ್ ಅನ್ನು ನೀಡುತ್ತಿದೆ. ಇದು ವಹಿವಾಟಿನ ರಕ್ಷಣೆಯನ್ನು ಹೆಚ್ಚಿಸುತ್ತದೆ.
ಸೈಬರ್ ಅಪರಾಧಿಗಳು ಗ್ರಾಹಕರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಅವರನ್ನು ಮೋಸ ಮಾಡಲು ಹೊಸ ತಂತ್ರಗಳನ್ನು ಬಳಸುತ್ತಾರೆ. ಅವರ ಟ್ರಾಪ್ನಲ್ಲಿ ಬೀಳುವುದು ಯಾವಾಗಲೂ ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ. ಹಾಗಾಗಿ ಬ್ಯಾಂಕ್ಗಳು ಎರಡಯ ಅಥವಾ ಮೂರು ಅಥಾರೈಸೆಷನ್ ಅನ್ನು ಕೆಲವು ವಹಿವಾಟಿಗೆ ಕೇಳುತ್ತದೆ. ಬಹು ಹಂತದ ದೃಢೀಕರಣಗಳಿಂದ ಖಾತೆಗಳಿಗೆ ಕನ್ನ ಹಾಕುವುದು ಕಷ್ಟಕರವಾಗಲಿದೆ. ಗ್ರಾಹಕರು ಕೂಡ ಕೆಲವೊಮ್ಮೆ ಈ ಬಗ್ಗೆ ಚಿಂತಿಸಬೇಕು. ಪಾಸ್ವರ್ಡ್ ಬಳಕೆ, ಫಿಂಗರ್ಪ್ರಿಂಟ್ ಮತ್ತು ಒಟಿಪಿ ದೊಡ್ಡ ಸೆಕ್ಯೂರಿಟಿ ಆಗಿದ್ದು, ಯಾವುದೇ ಅನುಮಾನ ಬಂದರೂ ಗ್ರಾಹಕರು ತಕ್ಷಣಕ್ಕೆ ಬ್ಯಾಂಕ್ಗೆ ಮಾಹಿತಿ ನೀಡಬೇಕು.