ಹೈದರಾಬಾದ್: ಯಾವುದೇ ಸಂದರ್ಭದಲ್ಲೂ ತೆರಿಗೆ ಲೆಕ್ಕಾಚಾರವನ್ನು ನಿರ್ಲಕ್ಷಿಸಬಾರದು. ನೀವು ಎಷ್ಟು ತೆರಿಗೆ ಪಾವತಿಸಬೇಕು ಮತ್ತು ಹಳೆಯ ಅಥವಾ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಯಾವುದು ನಮಗೆ ಪ್ರಯೋಜನಕಾರಿ ಎಂಬ ಬಗ್ಗೆ ಯೋಚಿಸಿ ಮುಂದುವರಿಯುವುದು ಲೇಸು. ಹೀಗಂತಾ ಅದರಲ್ಲೇ ಸಮಯ ವ್ಯರ್ಥ ಮಾಡುವುದು ಬೇಡ. ತೆರಿಗೆ ಪಾವತಿದಾರರಿಗೆ ಸಹಾಯ ಮಾಡಲು, ಆದಾಯ ತೆರಿಗೆ (ಐಟಿ) ಇಲಾಖೆ ತನ್ನ ಪೋರ್ಟಲ್‌ನಲ್ಲಿ ತೆರಿಗೆ ಕ್ಯಾಲ್ಕುಲೇಟರ್ ಅನ್ನು ಹೊಸದಾಗಿ ಪರಿಚಯಿಸಿದೆ. ಇದನ್ನು ಬಳಸುವುದರಿಂದ ಯಾವ ವ್ಯವಸ್ಥೆಯಲ್ಲಿ ಎಷ್ಟು ತೆರಿಗೆ ಅನ್ವಯವಾಗುತ್ತದೆ. ಯಾವುದು ಪ್ರಯೋಜನಕಾರಿ ಎಂಬಂತಹ ವಿಷಯಗಳನ್ನು ಸುಲಭವಾಗಿ ಕಂಡುಹಿಡಿಯಬಹುದು.
ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ ತೆರಿಗೆ ರಿಟರ್ನ್ಸ್ ಸಲ್ಲಿಸಲು ಏಪ್ರಿಲ್ 1 ರಿಂದ ಅನುಮತಿಸಲಾಗುವುದು. ಈಗಾಗಲೇ ರಿಟರ್ನ್ಸ್ ಫಾರ್ಮ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರಲ್ಲಿ ತೆರಿಗೆ ಅರಿವು ಹೆಚ್ಚಿಸಲು ಐಟಿ ತೆರಿಗೆ ಕ್ಯಾಲ್ಕುಲೇಟರ್ ಅನ್ನು ರೂಪಿಸಿದೆ. ಹೊಸ ಮತ್ತು ಹಳೆಯ ವ್ಯವಸ್ಥೆಗಳಲ್ಲಿ ನಿಮ್ಮ ಅನ್ವಯವಾಗುವ ತೆರಿಗೆ ಬಗ್ಗೆ ತಿಳಿಯಲು, ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ - www.incometax.gov.in ಲಾಗಿನ್ ಆಗಿ, ಐಟಿ ತೆರಿಗೆ ಕ್ಯಾಲ್ಕುಲೇಟರ್ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.
ಏನೆಲ್ಲ ಮಾಹಿತಿ ಪಡೆಯಬಹುದು:ತ್ವರಿತ ಲಿಂಕ್‌ಗಳಲ್ಲಿ ನೀವು 'ಆದಾಯ ತೆರಿಗೆ ಕ್ಯಾಲ್ಕುಲೇಟರ್' ಅನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿದರೆ ಎರಡು ಆಯ್ಕೆಗಳು ಕಾಣಿಸುತ್ತವೆ. 1) ಮೂಲ ಕ್ಯಾಲ್ಕುಲೇಟರ್. 2) ಸುಧಾರಿತ ಕ್ಯಾಲ್ಕುಲೇಟರ್. ಎರಡನ್ನೂ ಬಳಸಿ, ಎಷ್ಟು ತೆರಿಗೆ ಅನ್ವಯವಾಗುತ್ತದೆ ಎಂದು ತಿಳಿಯಬಹುದು. ಮೂಲ ಕ್ಯಾಲ್ಕುಲೇಟರ್‌ನಲ್ಲಿ, ನೀವು ಮೌಲ್ಯಮಾಪನದ ವರ್ಷ, ತೆರಿಗೆದಾರರ ವರ್ಗ (ವೈಯಕ್ತಿಕ, HUF, LLP ನಂತಹ), ತೆರಿಗೆದಾರರ ವಯಸ್ಸು, ವಸತಿ ಸ್ಥಿತಿ ಇತ್ಯಾದಿಗಳನ್ನು ಆಯ್ಕೆ ಮಾಡಬೇಕು. ನಿಮ್ಮ ವಾರ್ಷಿಕ ಆದಾಯ ಮತ್ತು ನಿಮ್ಮ ಒಟ್ಟು ಕಡಿತಗಳನ್ನು ನಮೂದಿಸಿ. ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳ ಅಡಿ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬುದು ನಮಗೆ ನೇರವಾಗಿ ತಿಳಿಯುತ್ತದೆ.