ನವದೆಹಲಿ:ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸಂಪನ್ಮೂಲಗಳನ್ನು ಹೆಚ್ಚಿಸಲು ಭಾರತದಲ್ಲಿ ನಡೆಯಲಿರುವ ಜಿ ಶೃಂಗಸಭೆಯಲ್ಲಿ ಮಹತ್ವದ ಸಮಾಲೋಚನೆ ಹಾಗೂ ಕಾರ್ಯಸೂಚಿಗಳನ್ನು ರೂಪಿಸಲು ಹಾಗೂ ಕೆಲಸ ಮಾಡಲು ಆದ್ಯತೆ ನೀಡಲಾಗುವುದು ಎಂದು ಅಮೆರಿಕ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಹೇಳಿದ್ದಾರೆ. ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೆಹಲಿಗೆ ಆಗಮಿಸಿರುವ ಅವರು ಈ ವಿಷಯ ತಿಳಿಸಿದ್ದಾರೆ. IMF ಕೋಟಾಕ್ಕೆ ಹೊಸ ಸಂಪನ್ಮೂಲ ಒಳಗೊಂಡಂತೆ ಬಹು ಜಾಗತಿಕ ಸವಾಲುಗಳನ್ನು ಎದುರಿಸಲು, ಸದಸ್ಯ ರಾಷ್ಟ್ರಗಳ ಬೆಂಬಲ ಪಡೆದು ವಿಶ್ವಬ್ಯಾಂಕ್ ಹಾಗೂ ಐಎಂಎಫ್ ಬಲಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಅಮೆರಿಕ-ಭಾರತ ಸಂಬಂಧದ ಪ್ರಗತಿಗೆ ಆದ್ಯತೆ ನೀಡಲಾಗುವುದು ಎಂದು ಇದೇ ವೇಳೆ ಯೆಲೆನ್ ಹೇಳಿದ್ದಾರೆ. "ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧವನ್ನು ನಾವು ಹೆಚ್ಚು ಗೌರವಿಸುತ್ತೇವೆ. ಕಳೆದ ಜೂನ್ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ಜೊತೆ ಮಹತ್ವದ ಮಾತುಕತೆ ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿದ್ದೇವೆ, ಭಾರತವು ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
G20 ಸದಸ್ಯ ರಾಷ್ಟ್ರಗಳು ಸುಮಾರು 85 ಪ್ರತಿಶತದಷ್ಟು ಜಿಡಿಪಿಯನ್ನು ಹೊಂದಿವೆ. ಜಾಗತಿಕ ವ್ಯಾಪಾರದ 75 ಪ್ರತಿಶತಕ್ಕಿಂತ ಹೆಚ್ಚಿನ ಬಂಡವಾಳದ ಬಳಕೆ ಈ ರಾಷ್ಟ್ರಗಳಿಂದಲೇ ಆಗುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವದ ಆರ್ಥಿಕ ಅಭಿವೃದ್ಧಿ ಸಂಬಂಧ ಈ G-20 ಸಭೆಯಲ್ಲಿ ಬಂಡವಾಳದ ಸಮರ್ಪಕತೆ ಹಂಚಿಕೆ ಬಗ್ಗೆ ಸಮಾಲೋಚನೆ ಮಾಡಲಾಗುವುದು ಎಂದು ಅವರು ಹೇಳಿದರು.