ವಾಷಿಂಗ್ಟನ್: ಅಮೆರಿಕ ಪಡೆಗಳು ಹಾಗೂ ಪ್ರಮುಖ ಭಯೋತ್ಪಾದಕರು ಹಾಗೂ ಮಧ್ಯ ಪ್ರಾಚ್ಯ ಮತ್ತು ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡಿದ ಅಮೆರಿಕನ್ ಪಡೆಗಳ ಬಯೋಮೆಟ್ರಿಕ್ ಡೇಟಾವನ್ನು ಇಬೇ (eBay) ಯಲ್ಲಿ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಅಮೆರಿಕದ ಮಿಲಿಟರಿಯ ಹಳೆ ಉಪಕರಣಗಳ ಜತೆ ಈ ದತ್ತಾಂಶ ಮಾರಾಟ ಮಾಡಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಹ್ಯಾಕರ್ಸ್ ಗುಂಪು ಈ ಸಾಧನವನ್ನು ಖರೀದಿಸಿದ್ದು, ಇದರಲ್ಲಿ ಫಿಂಗರ್ಪ್ರಿಂಟ್, ಕಣ್ಣಿನ ಐರಿಸ್ ಸ್ಕಾನ್, ಫೋಟೋ ಮತ್ತು ವಿವರಣೆ ಸೇರಿದಂತೆ ಡಿಫಾಲ್ಟ್ ಪಾಸ್ವರ್ಡ್ ಸೇರಿದಂತೆ ಎಲ್ಲ ದಾಖಲೆ ಹೊಂದಿದೆ ಎಂದು ದಿ ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಆಫ್ಘಾನಿಸ್ತಾನದಿಂದ ನಾಟೋ ಪಡೆಗಳನ್ನು ಹಿಂದಿರುಗಿಸಿಕೊಂಡ ಸಂದರ್ಭದಲ್ಲಿ ಕೆಲವು ಉಪಕರಣಗಳನ್ನು ಬಿಟ್ಟು ಬರಲಾಗಿದೆ. ಈ ರೀತಿಯ ಸಾಧನವನ್ನು ಜರ್ಮನ್ ಮೂಲದ ಸಿಸಿಸಿ ಸಂಶೋಧಕರು ಪರೀಕ್ಷೆ ಮಾಡಿದಾಗ, ಅದರಲ್ಲಿ ದೊಡ್ಡಮಟ್ಟದ ಬಯೋಮೆಟ್ರಿಕ್ ಸೇರಿದಂತೆ ಇತರ ವೈಯಕ್ತಿಕ ದಾಖಲೆಗಳು ಪತ್ತೆಯಾಗಿದೆ. ಈ ದತ್ತಾಂಶಗಳು ಅಫ್ಘಾನಿಸ್ತಾನ ಮತ್ತು ಇರಾಕ್ನ ಜನರಿಗೆ ಪ್ರಾಣಾಪಾಯ ತಂದೊಡ್ಡಿದೆ ಎಂದು ಬ್ಲಾಗ್ನಲ್ಲಿ ತಿಳಿಸಲಾಗಿದೆ.