ಕರ್ನಾಟಕ

karnataka

ETV Bharat / business

ಅರ್ಬನ್ ಬ್ಯಾಂಕ್​ಗಳ ಬುಲೆಟ್​ ಚಿನ್ನದ ಸಾಲಮಿತಿ 4 ಲಕ್ಷಕ್ಕೆ ದ್ವಿಗುಣ - ನಗರ ಸಹಕಾರಿ ಬ್ಯಾಂಕುಗಳಿಗೆ

ಬುಲೆಟ್​ ಮರುಪಾವತಿ ಯೋಜನೆಯಡಿಯಲ್ಲಿ ನೀಡಲಾಗುವ ಸಾಲದ ಪ್ರಮಾಣವನ್ನು ಆರ್​ಬಿಐ ದ್ವಿಗುಣಗೊಳಿಸಿದೆ.

RBI doubles bullet repayment gold loan limits for urban co-op banks to Rs 4 lakh
RBI doubles bullet repayment gold loan limits for urban co-op banks to Rs 4 lakh

By ETV Bharat Karnataka Team

Published : Oct 6, 2023, 3:31 PM IST

ಮುಂಬೈ: ನಗರ ಸಹಕಾರಿ ಬ್ಯಾಂಕುಗಳು ನೀಡುವ ಬುಲೆಟ್ ಮರುಪಾವತಿ ಯೋಜನೆಯಡಿ ಚಿನ್ನದ ಸಾಲದ ಮಿತಿಯನ್ನು 4 ಲಕ್ಷ ರೂ.ಗೆ ದ್ವಿಗುಣಗೊಳಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಪ್ರಕಟಿಸಿದೆ. ಮಾರ್ಚ್ 31, 2023 ರವರೆಗೆ ಆದ್ಯತಾ ವಲಯದ ಸಾಲದ (ಪಿಎಸ್ಎಲ್) ಅಡಿಯಲ್ಲಿ ಒಟ್ಟಾರೆ ಗುರಿ ಮತ್ತು ಉಪ ಗುರಿಗಳನ್ನು ಪೂರೈಸಿದ ನಗರ ಸಹಕಾರಿ ಬ್ಯಾಂಕುಗಳಿಗೆ (ಯುಸಿಬಿ) ಸಂಬಂಧಿಸಿದಂತೆ ಬುಲೆಟ್ ಮರುಪಾವತಿ ಯೋಜನೆಯಡಿ ಚಿನ್ನದ ಸಾಲಗಳಿಗೆ ಅಸ್ತಿತ್ವದಲ್ಲಿರುವ ಮಿತಿಯನ್ನು 2 ಲಕ್ಷ ರೂ.ಗಳಿಂದ 4 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಬುಲೆಟ್ ಮರುಪಾವತಿ ಯೋಜನೆ ಎಂದರೆ ಸಾಲಗಾರನು ಸಾಲದ ಅವಧಿಯಲ್ಲಿ ಯಾವುದೇ ಮರುಪಾವತಿ ಮಾಡದೆ ನೇರವಾಗಿ ಸಾಲದ ಅವಧಿಯ ಕೊನೆಯಲ್ಲಿ ಬಡ್ಡಿ ಮತ್ತು ಅಸಲು ಮೊತ್ತವನ್ನು ಮರುಪಾವತಿ ಮಾಡುತ್ತಾನೆ. ಇತ್ತೀಚೆಗೆ ಯುಸಿಬಿಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ದಾಸ್, ನಿಗದಿತ ಪಿಎಸ್ಎಲ್ ಗುರಿಗಳನ್ನು ಪೂರೈಸಿದ ಯುಸಿಬಿಗಳಿಗೆ ಸೂಕ್ತ ಪ್ರೋತ್ಸಾಹಕಗಳನ್ನು ಒದಗಿಸುವ ಆರ್​ಬಿಐನ ಹಿಂದಿನ ಘೋಷಣೆಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ದ್ವೈಮಾಸಿಕ ನೀತಿ ಪರಾಮರ್ಶೆಯನ್ನು ಘೋಷಿಸಿದ ನಂತರ ಮಾತನಾಡಿದ ದಾಸ್, ಆರ್​ಬಿಐ ಯೋಜನಾ ಹಣಕಾಸು ಕುರಿತು ಸಮಗ್ರ ನಿಯಂತ್ರಣ ಚೌಕಟ್ಟನ್ನು ಹೊರಡಿಸಲಿದೆ ಎಂದು ಘೋಷಿಸಿದರು. "ಯೋಜನಾ ಹಣಕಾಸು ನಿಯಂತ್ರಿಸುವ ಅಸ್ತಿತ್ವದಲ್ಲಿರುವ ನಿಯಂತ್ರಕ ಚೌಕಟ್ಟನ್ನು ಬಲಪಡಿಸುವ ಮತ್ತು ಎಲ್ಲಾ ನಿಯಂತ್ರಿತ ಘಟಕಗಳಲ್ಲಿನ ಸೂಚನೆಗಳನ್ನು ಸಮನ್ವಯಗೊಳಿಸುವ ದೃಷ್ಟಿಯಿಂದ, ಅನುಷ್ಠಾನದಲ್ಲಿರುವ ಯೋಜನೆಗಳಿಗೆ ಅಸ್ತಿತ್ವದಲ್ಲಿರುವ ಮಾನದಂಡಗಳನ್ನು ಪರಿಶೀಲಿಸಲಾಗಿದೆ" ಎಂದು ಅವರು ಹೇಳಿದರು.

ಸಾರ್ವಜನಿಕರ ಅಭಿಪ್ರಾಯ ಪಡೆಯಲು ವಿವರವಾದ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು. 'ಮಧ್ಯಮ ಮತ್ತು ಮೂಲ ಹಂತಗಳಲ್ಲಿ' ಬ್ಯಾಂಕೇತರ ಸಾಲದಾತರಿಗೆ ಕ್ರೆಡಿಟ್ ಸಾಂದ್ರತೆಯ ಮಾನದಂಡಗಳ ಅಡಿಯಲ್ಲಿ ತಮ್ಮ ಕೌಂಟರ್ ಪಾರ್ಟಿ ಮಾನ್ಯತೆಯನ್ನು ಕಡಿಮೆ ಮಾಡಲು ಕ್ರೆಡಿಟ್ ರಿಸ್ಕ್ ಮಿಟಿಗೇಶನ್ ಸಾಧನಗಳನ್ನು ಬಳಸಲು ಅನುಮತಿ ನೀಡಲಾಗುವುದು ಎಂದು ದಾಸ್ ಘೋಷಿಸಿದರು. ಕಾರ್ಡ್ ಡೇಟಾದ ಟೋಕನೈಸೇಶನ್​ನ ಹೆಚ್ಚುತ್ತಿರುವ ಬಳಕೆ ಮತ್ತು ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಡ್-ಆನ್-ಫೈಲ್ ಟೋಕನೈಸೇಶನ್ (ಸಿಒಎಫ್​ಟಿ) ರಚನೆ ಸೌಲಭ್ಯಗಳನ್ನು ನೇರವಾಗಿ ವಿತರಕ ಬ್ಯಾಂಕ್ ಮಟ್ಟದಲ್ಲಿ ಪರಿಚಯಿಸಲು ಆರ್​ಬಿಐ ಮುಂದಾಗಿದೆ.

ಇದನ್ನೂ ಓದಿ : ಫೋರ್ಬ್ಸ್​ ಅಮೆರಿಕ ಸಿರಿವಂತರ ಪಟ್ಟಿ: ಅಗ್ರಸ್ಥಾನದಲ್ಲಿ ಮಸ್ಕ್​, 2ನೇ ಸ್ಥಾನದಲ್ಲಿ ಬೆಜೋಸ್​

ABOUT THE AUTHOR

...view details