ಕರ್ನಾಟಕ

karnataka

ETV Bharat / business

ನೀವು 15 ಲಕ್ಷದೊಳಗಿನ ಕಾರು ಖರೀದಿಸಬೇಕೇ?: ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿರುವ ಟಾಪ್ 5 ಮಾಡೆಲ್‌ಗಳಿವು! - ಟೊಯೊಟಾ ರೂಮಿಯಾನ್

Upcoming Cars Under 15 Lakhs in India 2023 : ನೀವು 15 ಲಕ್ಷದೊಳಗಿನ ಕಾರನ್ನು ಖರೀದಿಸಲು ಬಯಸುತ್ತಿದ್ದರೆ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಈ ಕಾರುಗಳ ಬಗ್ಗೆ ತಿಳಿದುಕೊಳ್ಳಿ.

Cars Under 15 Lakhs
15 ಲಕ್ಷದೊಳಗಿನ ಕಾರುಗಳು

By ETV Bharat Karnataka Team

Published : Aug 28, 2023, 10:53 AM IST

ಭಾರತದ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಅನೇಕ ಕಂಪನಿಗಳು ಕೈಗೆಟುಕುವ ಬೆಲೆಯಲ್ಲಿ ಕಾರುಗಳನ್ನು ವಿನ್ಯಾಸಗೊಳಿಸುತ್ತಿವೆ. ಹೊಸ ಮಾದರಿಯ ಕಾರುಗಳನ್ನು ಕಡಿಮೆ ಬೆಲೆಯಲ್ಲಿ ಹಾಗೂ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ತಯಾರಿಸಲಾಗುತ್ತಿದೆ. 2023ರ ಅಂತ್ಯದ ವೇಳೆಗೆ ಮಾರುಕಟ್ಟೆಯಲ್ಲಿ ಅಂತಹ ಕಾರುಗಳನ್ನು ಪರಿಚಯಿಸಲು ಕಂಪನಿಗಳು ಯೋಜನೆ ರೂಪಿಸುತ್ತಿವೆ. ಅಷ್ಟೇ ಅಲ್ಲದೆ, ತಯಾರಿಕಾ ಕಂಪನಿಗಳು ಈ ಕಾರುಗಳ ಬೆಲೆಯನ್ನು 15 ಲಕ್ಷ ರೂ. ಒಳಗೆ ಮಾರಾಟ ಮಾಡಲು ನಿರ್ಧರಿಸಿವೆ. ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್, ಟೊಯೊಟಾ ರೂಮಿಯಾನ್ ಸೇರಿದಂತೆ ಇತರ ಕೆಲ ಕಾರುಗಳು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿವೆ. ಈ ಕುರಿತಾದ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ (Tata Nexon Facelift Price ):ನೆಕ್ಸಾನ್ ಕಾರಿನ ಒಳಗೆ ಮತ್ತು ಹೊರಗೆ ಕೆಲವು ಬದಲಾವಣೆಗಳನ್ನು ಮಾಡಿದ ಕಂಪನಿಯು ನೆಕ್ಸಾನ್ ಫೇಸ್‌ಲಿಫ್ಟ್ ಪರಿಚಯಿಸಿದೆ. ಟಾಟಾ ಕಂಪನಿಯ ಈ ಕಾರನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ನೆಕ್ಸಾನ್ ಫೇಸ್‌ಲಿಫ್ಟ್ ಕಾರು 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್‌ಗಳನ್ನು ಹೊಂದಿದೆ. ಈ ಕಾರು 5 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ಟೊಯೊಟಾ ರೂಮಿಯಾನ್ (Toyota Rumion Launch Date ): ಟೊಯೊಟಾ ರೂಮಿಯಾನ್ ಬೆಲೆ 9 ಲಕ್ಷದಿಂದ 13 ಲಕ್ಷ ರೂ. ವರೆಗೆ ಇರುತ್ತದೆ. ಇದು ಮಾರುತಿ ಸುಜುಕಿಯ ರೀಬ್ಯಾಡ್ಜ್ ಮಾಡಿದ ಆವೃತ್ತಿಯಾಗಿದೆ. 1.5 ಲೀಟರ್ ಸಾಮರ್ಥ್ಯದ ನಾಲ್ಕು ಸಿಲಿಂಡರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರನ್ನು ಟೊಯೊಟಾ ಕಂಪನಿ ತಯಾರಿಸಿದೆ. ಇದು ಆಟೋ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಸೌಲಭ್ಯಗಳನ್ನು ಹೊಂದಿದೆ.

ಹೋಂಡಾ ಎಲಿವೇಟ್ (Honda Elevate Price in India 2023): ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ ಸುಮಾರು 11 ಲಕ್ಷದಿಂದ 18 ಲಕ್ಷ ರೂ. ನಿಖರವಾದ ಬೆಲೆಗಳನ್ನು ಸೆಪ್ಟೆಂಬರ್ 4 ರಂದು ಬಹಿರಂಗಪಡಿಸುವ ಸಾಧ್ಯತೆ ಇದೆ. ಕಂಪನಿಯು ಹೋಂಡಾ ಎಲಿವೇಟ್ ಕಾರನ್ನು 1.5 ಲೀಟರ್ ಡೀಸೆಲ್ ಎಂಜಿನ್ ಸಾಮರ್ಥ್ಯದೊಂದಿಗೆ ತಯಾರಿಸಿದೆ. ಇಲೆಕ್ಟ್ರಿಕ್ ಸನ್‌ರೂಫ್, 10.25 ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು ಮತ್ತು ADAS ಅನ್ನು ಹೊಂದಿದೆ. ಮತ್ತು 6-ಸ್ಪೀಡ್ ಮ್ಯಾನುವಲ್ ಮತ್ತು CVT ಟ್ರಾನ್ಸ್‌ಮಿಷನ್‌ಗಳೊಂದಿಗೆ ಜೋಡಿಸಲಾದ 121PS ಹೊಂದಿದೆ.

ಸಿಟ್ರೊಯೆನ್ C3 ಏರ್‌ಕ್ರಾಸ್ (Citroen c3 Aircross ): 5 ಆಸನಗಳ ಸಾಮರ್ಥ್ಯದೊಂದಿಗೆ ಹೊರ ತಂದ ಸಿಟ್ರೊಯೆನ್ C3 ಏರ್‌ಕ್ರಾಸ್ ಆರಂಭಿಕ ಬೆಲೆಯು ಸುಮಾರು 10 ಲಕ್ಷ ರೂ.ಗಳು. ಈ ಮಾದರಿಯ ಕಾರು ಏಳು ಆಸನ ಸಾಮರ್ಥ್ಯದೊಂದಿಗೆ ಸಹ ಲಭ್ಯವಿದೆ. ಕಂಪನಿಯು ಇದನ್ನು 1.2 ಟರ್ಬೊ ಪೆಟ್ರೋಲ್ ಎಂಜಿನ್ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಿದೆ. ಇದು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಸೌಲಭ್ಯವನ್ನು ಹೊಂದಿದೆ.

ಇದನ್ನೂ ಓದಿ :ಭಾರತದಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಕೆ : ಸರ್ಕಾರದೊಂದಿಗೆ ಟೆಸ್ಲಾ ಮಾತುಕತೆ

ಟಾಟಾ ಪಂಚ್ ಇವಿ (Tata Punch Ev Price): ಟಾಟಾ ಕಂಪನಿಯು ಟಾಟಾ ಪಂಚ್ ಇವಿ ಕಾರನ್ನು ಹಲವು ಬಾರಿ ಟೆಸ್ಟ್ ಡ್ರೈವ್ ಮಾಡಿದೆ. ಇದು 2023 ರ ಕೊನೆಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಲಗ್ಗೆ ಇಡುವ ಸಾಧ್ಯತೆಯಿದೆ. ಟಾಟಾ ಪಂಚ್ EV ಒಂದೇ ಚಾರ್ಜ್‌ನಲ್ಲಿ 350 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸುತ್ತದೆ. ಇದು ಟಾಟಾ ಟಿಯಾಗೊ ಇವಿ ಮತ್ತು ಟಾಟಾ ಟಿಗೊರ್ ಇವಿ ಕಾರುಗಳಿಗಿಂತ ಉತ್ತಮವಾಗಿರಬಹುದು ಎಂಬ ಅಭಿಪ್ರಾಯಗಳು ಮಾರುಕಟ್ಟೆಯಲ್ಲಿ ಕೇಳಿಬರುತ್ತಿವೆ. ಟಾಟಾ ಪಂಚ್ ಇವಿ ಕಾರು ಜಿಪ್ಟ್ರಾನ್ ತಂತ್ರಜ್ಞಾನವನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ.

ABOUT THE AUTHOR

...view details