ಕರ್ನಾಟಕ

karnataka

ETV Bharat / business

ಕೇವಲ 5 ಪೈಸೆಗೆ ಅನ್​ಲಿಮಿಟೆಡ್​ ತಾಲಿ; ರೆಸ್ಟೋರೆಂಟ್​ಗೆ ಮುಗಿಬಿದ್ದ ಗ್ರಾಹಕರು

ವಿಜಯವಾಡದ ರಾಜ್​ಭೋಗ್​ ರೆಸ್ಟೋರೆಂಟ್​ ಈ ಬಂಪರ್​ ಆಫರ್​ ಅನ್ನು ಗುರುವಾರದಿಂದ ಘೋಷಿಸಿದೆ. ಈ ಕುರಿತು ಮಾತನಾಡಿರುವ ರೆಸ್ಟೋರೆಂಟ್​ ಮಾಲೀಕ ಮೋಹಿತ್​, 5 ಪೈಸೆ ಆಫರ್​ ಅನ್ನು ಮೂರು ದಿನದ ಹಿಂದೆ ಘೋಷಿಸಿದ್ದೆವು. ಇದಕ್ಕಾಗಿ ವಿಶೇಷ ಪ್ರಚಾರವನ್ನು ಮಾಡಿದ್ದೆವು.

5ಪೈಸೆಗೆ ಅನ್​ಲಿಮಿಟೆಡ್​ ತಾಲಿ; ಆಂಧ್ರ ಪ್ರದೇಶದ ರೆಸ್ಟೋರೆಂಟ್​ಗೆ ಮುಗಿಬಿದ್ದ ಗ್ರಾಹಕರು
Unlimited meals for 5paise in Andhra Pradesh restaurant

By

Published : Dec 3, 2022, 10:11 AM IST

ವಿಜಯವಾಡ: ಗ್ರಾಹಕರನ್ನು ಸೆಳೆಯಲು ಉದ್ಯಮಿಗಳು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಅಂತೆಯೇ ಆಂಧ್ರಪ್ರದೇಶ ಮೂಲದ ರೆಸ್ಟೋರೆಂಟ್​ ಒಂದು ಕೇವಲ 5 ಪೈಸೆಗೆ ಅನ್​ಲಿಮಿಟೆಡ್​ನ ತಾಲಿ(ಊಟ)ಯ ಆಫರ್​ ಅನ್ನು ಗ್ರಾಹಕರಿಗೆ ನೀಡುವ ಮೂಲಕ ಸುದ್ದಿಯಾಗಿದೆ. ಸುಮಾರು 500 ರೂಪಾಯಿ ಮೌಲ್ಯದ ಊಟವನ್ನು 5 ಪೈಸೆಯಲ್ಲಿ ಹಾಕ್ತಾರೆ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೊಲ್ಲ ಹೇಳಿ..

ಹೌದು, ಈ ಆಫರ್​ ಬಗ್ಗೆ ತಿಳಿದ ಜನರು ರೆಸ್ಟೋರೆಂಟ್​ಗೆ ಮುಗಿಬಿದಿದ್ದಾರೆ. ಈ ತಾಲಿಯಲ್ಲಿ 35 ವಿವಿಧ ಬಗೆಯ ರುಚಿಕರ ಆಹಾರಗಳನ್ನು ಗ್ರಾಹಕರಿಗೆ ನೀಡಲಾಗಿದೆ. ವಿಜಯವಾಡದ ರಾಜ್​ಭೋಗ್​ ರೆಸ್ಟೋರೆಂಟ್​ ಈ ಬಂಪರ್​ ಆಫರ್​ ಅನ್ನು ಗುರುವಾರದಿಂದ ಘೋಷಿಸಿದೆ.

ಈ ಕುರಿತು ಮಾತನಾಡಿರುವ ರೆಸ್ಟೋರೆಂಟ್​ ಮಾಲೀಕ ಮೋಹಿತ್​, 5 ಪೈಸೆ ಆಫರ್​ ಅನ್ನು ಮೂರು ದಿನದ ಹಿಂದೆ ಘೋಷಿಸಿದ್ದೆವು. ಇದಕ್ಕಾಗಿ ವಿಶೇಷ ಪ್ರಚಾರವನ್ನು ಸಹ ಮಾಡಿದ್ದೆವು. ನಮ್ಮ ಈ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಶುಕ್ರವಾರದ ಕಾರ್ಯಕ್ರಮ ಅದ್ಬುತ ಯಶಸ್ಸು ಕಂಡಿತು. 300-400ಜನರನ್ನು ನಾವು ನಿರೀಕ್ಷೆಸಿದ್ದೆವು. ಆದರೆ, ನಿರೀಕ್ಷೆ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. 5 ಪೈಸೆ ತಂದವರಿಗೆ ನಾವು ಉಚಿತವಾಗಿ ಊಟ ನೀಡಿದೆವು. 1000ಕ್ಕೂ ಹೆಚ್ಚು ಗ್ರಾಹರಿಗೆ ಶೇ 50 ರಷ್ಟು ರಿಯಾಯ್ತಿಯಲ್ಲಿ ಆಹಾರ ನೀಡಲಾಯಿತು. ಗುಜರಾತಿ, ರಾಜಸ್ಥಾನ ಮತ್ತು ಉತ್ತರ ಭಾರತ ಶೈಲಿಯ 35 ಬಗೆಯ ರುಚಿಕರ ತಿನಿಸುಗಳು ಈ ತಾಲಿಯಲ್ಲಿತ್ತು.

ಒಂದೇ ದಿನಕ್ಕೆ ಸೀಮಿತ ಈ ಆಫರ್..ರಾಜ್​ಭೋಗ್​ ಸಹ ಮಾಲೀಕರಾಗಿರುವ ದೀಪ್ತಿ ಮಾತನಾಡಿ, ಇಲ್ಲಿನ ಜನರಿಗೆ ಗುಜರಾತಿ, ರಾಜಸ್ಥಾನ ಮತ್ತು ಉತ್ತರ ಭಾರತ ಶೈಲಿಯ ಆಹಾರ ನೀಡಬೇಕು ಎಂಬುದು ಈ ಆಫರ್​ನ ಮುಖ್ಯ ಉದ್ದೇಶವಾಗಿತ್ತು. ವಿಜಯವಾಡದಲ್ಲಿ ಸಾಕಷ್ಟು ದಕ್ಷಿಣ ಭಾರತೀಯರಿದ್ದು, ಭಾರಿ ಸಂಖ್ಯೆಯಲ್ಲಿ ಅವರು ಭಾಗಿಯಾಗಿದ್ದರು. ಗುರುವಾರ ಒಂದೇ ದಿನಕ್ಕೆ ಈ ಆಫರ್​ ಅನ್ನು ಘೋಷಿಸಲಾಗಿತ್ತು. ಮೊದಲು ಬಂದ 50 ಗ್ರಾಹಕರಿಗೆ ಉಚಿತವಾಗಿ ತಾಲಿ ನೀಡಿದೆವು.

ಮಿಕ್ಕ ಗ್ರಾಹಕರಿಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ನೀಡಲಾಯಿತು. ನಮ್ಮಲ್ಲಿ ಒಂದು ತಾಲಿ ಬೆಲೆ 420 ಆಗಿದ್ದು, ಗುರುವಾರ 210ಕ್ಕೆ ನೀಡಿದೆವು. ನಮ್ಮ ಹೋಟೆಲ್​ ಮೊದಲ ಮಹಡಿಯಲ್ಲಿ ಮಂಡಪ್​ ಎಂಬ ಕನ್ವೆಷನಲ್​ ಹಾಲ್​ ನಿರ್ಮಿಸಲಾಗಿದೆ. ಅಲ್ಲಿ ಈ ಆಹಾರಗಳನ್ನು ಇರಿಸಿ ನಾವು ಯಾವ ರೀತಿಯ ಆಹಾರ ಸೇವೆ ಒದಗಿಸುತ್ತೇವೆ ಎಂಬುದನ್ನು ಜನರಿಗೆ ಪರಿಚಯಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು ಎಂದು ವಿವರಿಸಿದರು.

ಇದನ್ನೂ ಓದಿ: ಲಾಕ್‌ಡೌನ್‌ನಲ್ಲಿ ಕೋಟಿ ವ್ಯವಹಾರ ಮಾಡಿದ ಫಿಟ್​ನೆಸ್​ ದಂಪತಿ!

ABOUT THE AUTHOR

...view details