ಕರ್ನಾಟಕ

karnataka

ETV Bharat / business

ದೇಶದ ಜೈವಿಕ ಆರ್ಥಿಕತೆ 8 ವರ್ಷಗಳಲ್ಲಿ 8 ಪಟ್ಟು ಅಭಿವೃದ್ಧಿ: ಕೇಂದ್ರ ಸರ್ಕಾರ - ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್

ದೇಶದ ಜೈವಿಕ ಆರ್ಥಿಕತೆಯು 8 ವರ್ಷಗಳಲ್ಲಿ 80 ಬಿಲಿಯನ್ ಅಮೆರಿಕನ್​ ಡಾಲರ್​ಗೆ ಏರಿಕೆ ಕಂಡಿದ್ದು, ಈ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

indias-bio-economy
ದೇಶದ ಜೈವಿಕ ಆರ್ಥಿಕತೆ

By

Published : Dec 4, 2022, 7:59 AM IST

ಜಮ್ಮು- ಕಾಶ್ಮೀರ:ದೇಶದ ಜೈವಿಕ ಆರ್ಥಿಕತೆಯು ಕಳೆದ 8 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 8 ಪಟ್ಟು ಬೆಳವಣಿಗೆ ಸಾಧಿಸಿದೆ. 10 ಬಿಲಿಯನ್ ಅಮೆರಿಕನ್​ ಡಾಲರ್​ಗಳಿಂದ 80 ಬಿಲಿಯನ್ ಡಾಲರ್​ಗೆ ಏರಿಕೆ ಕಂಡಿದೆ. ಇದು ದೇಶ ಅಭಿವೃದ್ಧಿ ಹೊಂದುತ್ತಿರುವ ಸೂಚಕವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕತ್ರಾದ ಮಾತಾ ವೈಷ್ಣೋದೇವಿ ವಿಶ್ವವಿದ್ಯಾನಿಲಯದಲ್ಲಿ ಜೈವಿಕ ವಿಜ್ಞಾನ ಮತ್ತು ರಾಸಾಯನಿಕ ತಂತ್ರಜ್ಞಾನದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಕಳೆದ 8 ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆಯು ನಿರೀಕ್ಷೆಗಿಂತ ಏರಿಕೆ ಕಂಡಿದೆ ಎಂದರು.

ಬಯೋಟೆಕ್ ಸ್ಟಾರ್ಟಪ್‌ಗಳು 8 ವರ್ಷಗಳಲ್ಲಿ 52 ರಿಂದ 5300 ದಷ್ಟು ಹೆಚ್ಚಾಗಿ 100 ಪಟ್ಟು ಬೆಳವಣಿಗೆ ಕಂಡಿವೆ. 2021ರಲ್ಲಿ ಮಾತ್ರ 1,128 ಬಯೋಟೆಕ್ ಸ್ಟಾರ್ಟಪ್‌ಗಳು ಆರಂಭವಾಗಿವೆ. ಇದು ದೇಶದ ತ್ವರಿತ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಡಾ.ಸಿಂಗ್ ಹೇಳಿದರು.

2014 ರಲ್ಲಿ ಜೈವಿಕ ಆರ್ಥಿಕತೆಯಲ್ಲಿ ಹೂಡಿಕೆ ಮಾಡಲಾದ 10 ಕೋಟಿ ಈಗ ಅದು 400 ಪಟ್ಟು ಹೆಚ್ಚಳವನ್ನು ಕಂಡು 4200 ಕೋಟಿ ರೂಪಾಯಿಗಳಾಗಿದೆ. 25,000 ಕ್ಕೂ ಹೆಚ್ಚು ಉನ್ನತ ಕೌಶಲ್ಯದ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಸಚಿವರು ಮಾಹಿತಿ ನೀಡಿದರು. 8 ವರ್ಷಗಳ ಹಿಂದೆ 6 ಬಯೋಟೆಕ್ ಇನ್‌ಕ್ಯುಬೇಟರ್‌ಗಳು 2022 ರ ಹೊತ್ತಿಗೆ 75ಕ್ಕೆ ಏರಿಕೆಯಾಗಿವೆ. ಬಯೋಟೆಕ್ ಉತ್ಪನ್ನಗಳು 10 ರಿಂದ 700ಕ್ಕೂ ಹೆಚ್ಚಿವೆ ಎಂದರು.

ಇದನ್ನೂ ಓದಿ:ಇಬ್ಬರು ಐಐಟಿ ವಿದ್ಯಾರ್ಥಿಗಳಿಗೆ ವಾರ್ಷಿಕ 2 ಕೋಟಿ ವೇತನದ ಭರ್ಜರಿ ಆಫರ್!

ABOUT THE AUTHOR

...view details