ಸ್ಯಾನ್ ಫ್ರಾನ್ಸಿಸ್ಕೋ:ನಕಲಿ ಖಾತೆಗಳಿಗಾಗಿ ಟ್ವಿಟರ್ ಮತ್ತು ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್ ಮಧ್ಯೆ ನಡೆಯುತ್ತಿರುವ ಕಾದಾಟದಲ್ಲಿ ಮೈಕ್ರೋಬ್ಲಾಗಿಂಗ್ನ ಭದ್ರತಾ ವಿಭಾಗದ ಮುಖ್ಯಸ್ಥ ವಿಸ್ಲ್‌ಬ್ಲೋವರ್ ಪೀಟರ್ ಝಟ್ಕೊ ಉದ್ಯೋಗ ಕಳೆದುಕೊಂಡಿದ್ದಾರೆ. ಇವರು ಎಲಾನ್ ಮಸ್ಕ್ ಪಾಳಯ ಸೇರಿದ್ದು, ಟ್ವಿಟರ್ನ ದೋಷಗಳ ಬಗ್ಗೆ ಸಾಕ್ಷ ನೀಡಲು ಮುಂದಾಗಿದ್ದಾರೆ.
ಟ್ವಿಟರ್ನ ಭದ್ರತೆ ಮತ್ತು ನಕಲಿ ಖಾತೆಗಳ ಬಗ್ಗೆ ನಿಖರ ಮಾಹಿತಿ ನೀಡಿದ ಬಳಿಕ ಟ್ವಿಟರ್ ಖರೀದಿ ಪೂರ್ಣಕ್ಕೆ ಪಟ್ಟು ಹಿಡಿದಿರುವ ಎಲಾನ್ ಮಸ್ಕ್ ಮತ್ತು ಟ್ವಿಟ್ಟರ್ ಸಿಇಒ ಭಾರತೀಯ ಮೂಲಕದ ಪರಾಗ್ ಅನುರಾಗ್ ಮಧ್ಯೆ ಕಾದಾಟ ಜೋರಾಗಿದೆ. ಈ ಮಧ್ಯೆಯೇ ಸಂಸ್ಥೆಯಲ್ಲಿದ್ದುಕೊಂಡೇ ಮಸ್ಕ್ಗೆ ಸಹಾಯ ಮಾಡಿದ ಕಾರಣ ಝಟ್ಕೋರನ್ನು ಕೆಲಸದಿಂದ ವಜಾ ಮಾಡಲಾಗಿದೆ.