ಕರ್ನಾಟಕ

karnataka

ETV Bharat / business

ಟ್ವಿಟರ್​ ಬ್ಲೂಟಿಕ್​ಗೆ ಮಾಸಿಕ $8 ಹಣ: ಟ್ವಿಟರ್​ನಿಂದ ನಿಯಮ ಮರು ಜಾರಿ

ನೀಲಿಚುಕ್ಕಿ ಸೇವೆಗೆ ಹಣ ಪಾವತಿಸಬೇಕೆಂಬ ನಿಯಮವನ್ನು ಜಾರಿ ಮಾಡಲು ಟ್ವಿಟರ್ ಮತ್ತೆ ಮುಂದಾಗಿದೆ.

twitter-relaunching-subscriber-service
ಟ್ವಿಟರ್​ ಬ್ಲೂಟಿಕ್​ಗೆ ಮಾಸಿಕ 8 ಡಾಲರ್​ ಹಣ

By

Published : Dec 11, 2022, 11:50 AM IST

ನ್ಯೂಯಾರ್ಕ್:ಬ್ಲೂಟಿಕ್​ಗೆ ಹಣ ಪಾವತಿಸಬೇಕು ಎಂಬ ನಿಯಮ ಸಡಿಲಿಸಿದ್ದ ಟ್ವಿಟರ್​ ಇದೀಗ ಮತ್ತೆ ಚಂದಾದಾರಿಕೆ ಪಡೆಯುವ ಯೋಜನೆಯನ್ನು ಮರು ಜಾರಿ ಮಾಡುವುದಾಗಿ ಹೇಳಿದೆ. ಸಾಮಾನ್ಯ ಬಳಕೆದಾರರಿಗೆ ಮಾಸಿಕ 8 ಯುಎಸ್‌ ಡಾಲರ್​, ಐಫೋನ್​ಗೆ 11 ಡಾಲರ್​ ಪಾವತಿಸಲು ಕಂಪನಿ ಹೇಳಿದೆ.

ವಿಶ್ವದ ನಂಬರ್ 1 ಸಿರಿವಂತ ಎಲಾನ್​ ಮಸ್ಕ್​ ಮೈಕ್ರೋಬ್ಲಾಗಿಂಗ್​ ಟ್ವಿಟರ್​ ಅನ್ನು 44 ಶತಕೋಟಿ ಡಾಲರ್‌ಗೆ ಖರೀದಿಸಿದ ಬಳಿಕ ಬ್ಲೂಟಿಕ್​ ಸೇವೆಗೆ ಹಣ ಸಂದಾಯ ಮಾಡಬೇಕು ಎಂದು ಷರತ್ತು ವಿಧಿಸಿದ್ದರು. ಇದಕ್ಕೆ ವಿಶ್ವದೆಲ್ಲೆಡೆಯಿಂದ ಆಕ್ಷೇಪ ಕೇಳಿಬಂದಿತ್ತು. ಟ್ವಿಟರ್​​ ವಿರುದ್ಧ ಕೇಳಿಬಂದ ಈ ವಿರೋಧದಿಂದಾಗಿ ಅದರ ಷೇರು ಮೌಲ್ಯ ವಿಪರೀತ ಪ್ರಮಾಣದಲ್ಲಿ ಕುಸಿದಿತ್ತು.

ಅಷ್ಟೇ ಅಲ್ಲ ಮಸ್ಕ್​​ ಅವರ ಟೆಸ್ಲಾದ ಷೇರುಗಳೂ ಜಾರಿದ್ದವು. ಬಳಿಕ ಪ್ರೀಮಿಯಂ ಸೇವೆಯನ್ನು ಕೆಲಕಾಲ ತಾತ್ಕಾಲಿಕವಾಗಿ ಕೈಬಿಟ್ಟಿದ್ದರು. ಇದೀಗ ಮತ್ತೆ ಪ್ರೀಮಿಯಂ ಚಂದಾದಾರಿಕೆ ಮುಂದುವರಿಸುವುದಾಗಿ ಹೇಳಿರುವ ಕಂಪನಿ, ಸಾಮಾನ್ಯ ಬಳಕೆದಾರರಿಗೆ ತಿಂಗಳಿಗೆ 8 ಡಾಲರ್​ ಮತ್ತು ಐಫೋನ್ ಬಳಕೆದಾರರಿಗೆ ಮಾಸಿಕ 11 ಡಾಲರ್​ ವೆಚ್ಚ ಭರಿಸಬೇಕು. ಇದರಿಂದ ಚಂದಾದಾರರು ಕಡಿಮೆ ಜಾಹೀರಾತುಗಳ ಅಡಚಣೆ, ದೀರ್ಘ ವಿಡಿಯೊಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ ಎಂದು ಸಾಮಾಜಿಕ ಮಾಧ್ಯಮ ಕಂಪನಿ ಹೇಳಿದೆ.

ಇದನ್ನೂ ಓದಿ:ಸರ್ವರ್ ಡೌನ್ ಸಮಸ್ಯೆ ನಿವಾರಣೆ: ಗೂಗಲ್‌ ಜಿಮೇಲ್ ಸೇವೆ ಮರುಸ್ಥಾಪನೆ

ABOUT THE AUTHOR

...view details