ವಾಷಿಂಗ್ಟನ್:ನಕಲಿ ಖಾತೆಗಳ ನಿಖರತೆಗಾಗಿ ನಿಂತಿದ್ದ ಟ್ವಿಟ್ಟರ್ ಖರೀದಿ ಒಪ್ಪಂದ ಕೊನೆಗೂ ಚುಕ್ತಾ ಆಗಿದ್ದು, ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಮೊದಲು ಆಫರ್ ಮಾಡಿದಂತೆಯೇ ಪ್ರತಿ ಷೇರಿಗೆ 54.20 ಡಾಲರ್ ನೀಡಿ ಖರೀದಿಸಲು ಒಪ್ಪಿದ್ದಾರೆ ಎಂದು ಟ್ವಿಟ್ಟರ್ ಅಧಿಕೃತವಾಗಿ ಘೋಷಿಸಿದೆ.
ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್ ಅನ್ನು 44 ಶತಕೋಟಿಗೆ ಖರೀದಿಸಲು ಎಲಾನ್ ಮಸ್ಕ್ ವರ್ಷಾರಂಭದಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಬಳಿಕ ನಕಲಿ ಖಾತೆಗಳ ವಿಚಾರಕ್ಕೆ ಒಪ್ಪಂದವನ್ನು ಕಡಿದುಕೊಳ್ಳುವುದಾಗಿ ಹೇಳಿದ್ದರು.
ಇದರ ವಿರುದ್ಧ ಟ್ವಿಟ್ಟರ್ ಕಾನೂನು ಹೋರಾಟ ನಡೆಸಿತ್ತು. ಶೇ.5 ಕ್ಕಿಂತ ನಕಲಿ ಖಾತೆಗಳಿವೆ ಎಂದು ಕಂಪನಿ ಮಾಹಿತಿ ನೀಡಿತ್ತು. ಆದರೆ, ಅದಕ್ಕಿಂತಲೂ ಹೆಚ್ಚಿವೆ ಎಂದು ಎಲಾನ್ ವಾದಿಸಿ ಒಪ್ಪಂದವನ್ನೇ ಮುರಿದುಕೊಳ್ಳುವುದಾಗಿ ಹೇಳಿದ್ದರು.