ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಟ್ವಿಟರ್ ಸ್ವಾಧೀನ ಒಪ್ಪಂದದಲ್ಲಿ ನಾಟಕೀಯ ಬೆಳವಣಿಗೆಗಳ ನಂತರ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಶುಕ್ರವಾರ ಮೈಕ್ರೋಬ್ಲಾಗಿಂಗ್ ದೈತ್ಯ ಟ್ವಿಟರ್ ನೇತೃತ್ವವನ್ನು ಅಧಿಕೃತವಾಗಿ ವಹಿಸಿಕೊಂಡಿದ್ದಾರೆ. 'ಚೀಫ್ ಟ್ವಿಟ್' ಆಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಮಾಡಿದ ಮೊದಲ ಕೆಲಸವೆಂದರೆ ಅದರ ಹಿಂದಿನ ಸಿಇಒ ಪರಾಗ್ ಅಗರ್ವಾಲ್ ಮತ್ತು ಇತರ ಮೂವರು ಉನ್ನತ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವಜಾಗೊಳಿಸಿದ್ದಾರೆ. ಅವರು ಈ ಹಿಂದೆ 'ಟ್ವಿಟರ್‌ನಲ್ಲಿ ಶೇ 75ರಷ್ಟು ಸಿಬ್ಬಂದಿಯನ್ನು ವಜಾ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು.
ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಮತ್ತು ಹಣಕಾಸು ಮುಖ್ಯಸ್ಥ ನೆಡ್ ಸೆಗಲ್ ಅವರು ಕಂಪನಿಯ ಸ್ಯಾನ್ ಫ್ರಾನ್ಸಿಸ್ಕೋ ಈಗಾಗಲೇ ಟ್ವಿಟರ್ನ ಪ್ರಧಾನ ಕಚೇರಿಯನ್ನು ತೊರೆದಿದ್ದಾರೆ. ಮಸ್ಕ್ ಅವರ ನಿರೀಕ್ಷಿತ ಒಪ್ಪಂದವನ್ನು ಮುಕ್ತಾಯಗೊಳಿಸಿದ ನಂತರ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅವರ ಕರ್ತವ್ಯದಿಂದ ಮುಕ್ತಗೊಳಿಸುತ್ತಿದ್ದು, ಶುದ್ಧೀಕರಣವನ್ನು ಪ್ರಾರಂಭಿಸಿದ್ದಾರೆ. ಕಾನೂನು ನೀತಿ, ಟ್ರಸ್ಟ್ ಮತ್ತು ಸುರಕ್ಷತೆಯ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನೂ ಆ ಸ್ಥಾನದಿಂದ ವಜಾ ಮಾಡಲಾಗಿದೆ.
ಇದನ್ನು ಓದಿ:ಕೈಯ್ಯಲ್ಲಿ ಸಿಂಕ್ ಹಿಡಿದು ಟ್ವಿಟರ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಎಲಾನ್ ಮಸ್ಕ್