ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಬಹುತೇಕರು ತಮ್ಮ ಸ್ವಂತ ವಾಹನಗಳಲ್ಲಿ ದೂರದ ಪ್ರಯಾಣ ಬೆಳೆಸುವುದನ್ನು ಇಷ್ಟ ಪಡುತ್ತಿದ್ದಾರೆ. ವಿನೋದ, ವೈಯಕ್ತಿಕ ಅನುಕೂಲತೆ ಮತ್ತು ಸಮಯ ನಿರ್ವಹಣೆಗಾಗಿ ವೈಯಕ್ತಿಕ ಸಾರಿಗೆಗೆ ಈಗೀಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಸ್ವಂತ ವಾಹನಗಳಲ್ಲಿ ತಮ್ಮಿಷ್ಟದ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಮತ್ತು ದೂರದ ಪ್ರಯಾಣಕ್ಕೆ ಇಷ್ಟ ಪಡುತ್ತಿದ್ದಾರೆ. ಅಂದ ಹಾಗೆ ದೂರದ ಪ್ರಯಾಣ ಬೆಳೆಸಬೇಕಾದರೆ ನಿಮ್ಮ ವಾಹನವನ್ನು ಸುಸ್ಥಿತಿಯಲ್ಲಿರುವುದು ಮುಖ್ಯ.
ಅಂತಹ ಪ್ರಯಾಣಕ್ಕೆ ಹೋಗುವ ಮೊದಲು, ನೀವು ಸರಿಯಾದ ವಾಹನ ವಿಮಾ ಪಾಲಿಸಿಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾದ ವಿಷಯ. ಇನ್ನು ನಮ್ಮದೇ ಸ್ವಂತ ವಾಹನದಲ್ಲಿ ಪ್ರಯಾಣ ಮಾಡುವುದು ಯಾವಾಗಲೂ ಖುಷಿ ನೀಡುತ್ತದೆ. ನಿಮ್ಮ ಸ್ವಂತ ಕಾರಿನಲ್ಲಿ ನೆಚ್ಚಿನ ತಾಣಗಳು, ಕಡಲತೀರಗಳು ಮತ್ತು ಸ್ಥಳೀಯ ಹಳ್ಳಿಗಳು ಮತ್ತು ಪಟ್ಟಣಗಳಿಗೆ ಹೋಗುವುದು ಸಿಹಿ ಅನುಭವವನ್ನು ನೀಡುತ್ತದೆ. ಆದರೆ ಹೀಗೆ ಪ್ರಯಾಣ ಬೆಳೆಸುವ ಮುನ್ನ ಆರ್ಥಿಕ ಭದ್ರತೆ ಇದೆಯಾ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಗೂ ಆರ್ಥಿಕ ಭದ್ರತೆಯನ್ನು ನೀವು ಖಚಿತಪಡಿಕೊಳ್ಳುವುದು ಅತಿ ಮುಖ್ಯ.
ಭವಿಷ್ಯದಲ್ಲಿ ಯಾವುದೇ ಸಮಸ್ಯೆಯನ್ನು ತಪ್ಪಿಸಲು, ನಿಮ್ಮ ವಾಹನವನ್ನು ಯಾವಾಗಲೂ ಸಮಗ್ರ ವಿಮಾ ಪಾಲಿಸಿ ಮತ್ತು ಪೂರಕ ಪಾಲಿಸಿಗಳೊಂದಿಗೆ (ಆಡ್-ಆನ್) ಇರಿಸಿಕೊಳ್ಳಿ. ದುರದೃಷ್ಟಕರ ಅಪಘಾತಗಳು ಅಥವಾ ಕಾರ್ ರಿಪೇರಿ ಸಂದರ್ಭದಲ್ಲಿ ಆರ್ಥಿಕ ರಕ್ಷಣೆ ಒದಗಿಸಲು ಇವು ಉಪಯುಕ್ತವಾಗಿವೆ. ಆನ್-ರೋಡ್ ರಿಪೇರಿ ಸೌಲಭ್ಯಗಳನ್ನು ಒದಗಿಸಲು ವಿಮಾ ಕಂಪನಿಗಳು ಈಗ ಪೈಪೋಟಿಯಲ್ಲಿ ತೊಡಗಿವೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ನಿಮಗೆ ಸೂಕ್ತವಾದ ಪಾಲಿಸಿಯನ್ನು ಮಾಡಿಸಿ.
ವಿಮಾ ಪಾಲಿಸಿ ನಿಮ್ಮ ಹಣ ಉಳಿತಾಯ ಮಾಡುತ್ತೆ:ಎಂಜಿನ್ ನಿಮ್ಮ ಕಾರಿನ ಅತ್ಯಂತ ದುಬಾರಿ ಮತ್ತು ಪ್ರಮುಖ ಭಾಗವಾಗಿದೆ ಎಂಬುದು ಗಮನದಲ್ಲಿರಲಿ. ವಿಮಾ ಪಾಲಿಸಿ ಸ್ಥಗಿತದ ಸಂದರ್ಭದಲ್ಲಿ ಇಂಜಿನ್ ವೈಫಲ್ಯ ಸರಿದೂಗಿಸಲು 'ಎಂಜಿನ್ ಪ್ರೊಟೆಕ್ಷನ್ ಕವರ್' ಅನ್ನು ಬಳಸಬಹುದು. ಈ ಪೂರಕ ನೀತಿಯು ನಿಮ್ಮ ಪ್ರಯಾಣದ ಸಮಯದಲ್ಲಿ ಮಾತ್ರವಲ್ಲದೇ ವರ್ಷವಿಡೀ ಎಂಜಿನ್ ವೈಫಲ್ಯದ ಸಂದರ್ಭದಲ್ಲಿ ಸಹಾಯ ಮಾಡುತ್ತದೆ. ಇದು ಎಂಜಿನ್ ದುರಸ್ತಿ ಅಥವಾ ಹೊಸ ಎಂಜಿನ್‌ನ ಫಿಟ್‌ಮೆಂಟ್ ಶುಲ್ಕದ ವೆಚ್ಚವನ್ನು ಒಳಗೊಂಡಿರುತ್ತದೆ.