ಕರ್ನಾಟಕ

karnataka

ETV Bharat / business

ಭಾರತದ ಜಿಡಿಪಿ ಅಂಕಿ - ಅಂಶ ಶ್ಲಾಘಿಸಿದ ಉನ್ನತ ಆರ್ಥಿಕ ಪರಿಣತರು... - ಜಿಡಿಪಿ

ಭಾರತದ ಜಿಡಿಪಿ ಅಂಕಿ - ಅಂಶವನ್ನು ಉನ್ನತ ಆರ್ಥಿಕ ಪರಿಣಿತರು ಶ್ಲಾಘಿಸಿದ್ದು, ಮುಂದೆಯೂ ಕೂಡ ಗೂಳಿ ಓಟವನ್ನು ನಿರೀಕ್ಷಿಸುತ್ತಿದ್ದಾರೆ.

GDP
ಜಿಡಿಪಿ

By

Published : Jun 2, 2023, 8:28 PM IST

ನವದೆಹಲಿ: ಭಾರತೀಯ ಆರ್ಥಿಕತೆಯು 2022-23ರ ಆರಂಭದಲ್ಲಿ ಅಂದಾಜಿಸಲಾದ ವಿವಿಧ ತಜ್ಞರು ಮತ್ತು ಜಾಗತಿಕ ಏಜೆನ್ಸಿಗಳ ನಿರೀಕ್ಷೆಗಿಂತ ಹೆಚ್ಚು ಬೆಳವಣಿಗೆ ಕಂಡಿದೆ. ಈ ವಾರದ ಆರಂಭದಲ್ಲಿ ರಾಷ್ಟ್ರೀಯ ಅಂಕಿ-ಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ತಾತ್ಕಾಲಿಕ ಅಂದಾಜಿನ ಪ್ರಕಾರ, 2022-23ರ ಜಿಡಿಪಿ ಬೆಳವಣಿಗೆಯು ಶೇ.7.2ರಷ್ಟಾಗಿದ್ದು, ಇದು ಯೋಜಿತ ಶೇ.7ಕ್ಕಿಂತ ಅಧಿಕವಾಗಿದೆ.

2022-23ರ ಜಿಡಿಪಿ ಸಂಖ್ಯೆಗಳಲ್ಲಿ ಮೇಲ್ಮುಖವಾದ ಪರಿಷ್ಕರಣೆಯನ್ನು ಸರ್ಕಾರ ನಿರೀಕ್ಷಿಸುತ್ತದೆ. ಇದೇ ರೀತಿ ಉತ್ತಮ ಬೆಳವಣಿಗೆಯು ಒಂದು ವರ್ಷಕ್ಕೆ ಮಾತ್ರವಲ್ಲ ಪ್ರಸ್ತುತ ಹಣಕಾಸು ವರ್ಷ 2023-24ಕ್ಕೂ ಇದೇ ರೀತಿಯ ಚಿತ್ರಣವನ್ನು ಹಲವಾರು ತಜ್ಞರು ನಿರೀಕ್ಷೆ ಮಾಡಿದ್ದಾರೆ. ಭಾರತ ಸರ್ಕಾರವು 2023-24ಕ್ಕೆ ಶೇ6.5ರಷ್ಟು ಬೆಳವಣಿಗೆಯನ್ನು ಯೋಜಿಸಿದೆ. ವಿವಿಧ ಖಾಸಗಿ ಏಜೆನ್ಸಿಗಳು ಸಹ ಒಂದೇ ರೀತಿಯ ಸಂಖ್ಯೆಗಳನ್ನು ಅಥವಾ ಸ್ವಲ್ಪ ಕಡಿಮೆ ಎನ್ನುತ್ತಿವೆ.

ಬಲವಾದ ಜಾಗತಿಕ ವಿರೋಧಾಭಾಸ ಮತ್ತು ದೇಶೀಯ ಹಣಕಾಸು ನೀತಿ ಬಿಗಿಗೊಳಿಸುವಿಕೆಯ ಹೊರತಾಗಿಯೂ ವಿವಿಧ ಅಂತಾರಾಷ್ಟ್ರೀಯ ಏಜೆನ್ಸಿಗಳು 2023-24ರಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಮುನ್ಸೂಚನೆ ನೀಡಿವೆ. ಖಾಸಗಿ ಬಳಕೆಯಲ್ಲಿನ ದೃಢವಾದ ಬೆಳವಣಿಗೆ ಮತ್ತು ಖಾಸಗಿ ಹೂಡಿಕೆಯಲ್ಲಿ ನಿರಂತರ ಚೇತರಿಕೆಗೆ ಇದು ಬೆಂಬಲವಾಗಿದೆ.

ಉತ್ತಮ ಆಡಳಿತದ ಉಪಕ್ರಮಗಳ ಭಾಗವಾಗಿ ಬೆಂಬಲ ನೀತಿಗಳು ಮತ್ತು ಸುಧಾರಣೆಗಳಿಂದಾಗಿ ಭಾರತದ ಬೆಳವಣಿಗೆಯ ಸಾಮರ್ಥ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಜಿಡಿಪಿ ಅಂಕಿ - ಅಂಶಗಳು ಸ್ಪಷ್ಟವಾಗಿ ಪ್ರದರ್ಶಿಸುತ್ತವೆ ಎಂದು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ಐಸಿಸಿಐ) ಅಧ್ಯಕ್ಷ ಸುಭ್ರಕಾಂತ್ ಪಾಂಡಾ ಹೇಳಿದ್ದಾರೆ.

ಕೊಟಕ್ ಮಹೀಂದ್ರಾ ಅಸೆಟ್ ಮ್ಯಾನೇಜ್‌ಮೆಂಟ್‌ನ ಎಂಡಿ ನಿಲೇಶ್ ಶಾ ಮಾತನಾಡಿ, ಕಳೆದ ದಶಕದಲ್ಲಿ ಭಾರತದ ಹೆದ್ದಾರಿಗಳ ಜಾಲ ವಿಸ್ತರಣೆ ಮತ್ತು ಬಂದರುಗಳ ನಿರ್ವಹಣೆ ಸಾಮರ್ಥ್ಯ, ವಿಮಾನ ನಿಲ್ದಾಣಗಳು, ವಿದ್ಯುತ್ ಉತ್ಪಾದನೆಯಲ್ಲಿ ಭಾರಿ ಸುಧಾರಣೆ ಲಾಭಾಂಶವನ್ನು ನೀಡುತ್ತಿದೆ. ಈ ಬಾರಿಯ ಬೆಳವಣಿಗೆಯು ಹೂಡಿಕೆಯಿಂದ ನೇತೃತ್ವ ವಹಿಸಿದೆ. ಸರ್ಕಾರಿ ಮೂಲ ಹೂಡಿಕೆಗಳು ಮಾತ್ರವಲ್ಲದೇ ಖಾಸಗಿ ಬಂಡವಾಳ ವೆಚ್ಚ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಈ ಮೂಲಸೌಕರ್ಯ ಹೂಡಿಕೆಗಳು ಭಾರತದ ಬೆಳವಣಿಗೆಯನ್ನು ಉಳಿಸಿಕೊಳ್ಳುತ್ತವೆ ಮತ್ತು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವನ್ನು ಇರಿಸುತ್ತದೆ ಎಂದು ನಿಲೇಶ್ ಶಾ ಹೇಳಿದ್ದಾರೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಸಿಇಒ ಆಶಿಶ್ ಚೌಹಾನ್ ಪ್ರಕಾರ, 2023-24ರ ಮೊದಲ ಎರಡು ತಿಂಗಳಲ್ಲಿ ಭಾರತ ಉತ್ತಮ ಸಾಧನೆ ಮಾಡಲಿದೆ. ಆರ್ಥಿಕ ಚಟುವಟಿಕೆಗಳು ಮತ್ತು ಬಳಕೆ ಹೆಚ್ಚಾದಂತೆ ದೇಶವು ಉತ್ತಮವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ)ಯು ಭಾರತದ 2023-24ರ ಜಿಡಿಪಿ ಬೆಳವಣಿಗೆಯನ್ನು ಶೇ.6.5 ಅಥವಾ 6.7ರಷ್ಟು ನಿರೀಕ್ಷಿಸುತ್ತಿದೆ. ಸಿಐಐ ಅಧ್ಯಕ್ಷ ಆರ್.ದಿನೇಶ್ ಮಾತನಾಡಿ, ಸವಾಲಿನ ಜಾಗತಿಕ ಪರಿಸರದ ಮುಖಾಂತರ ಭಾರತೀಯ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ. ಮುಂಬರುವ ವರ್ಷದಲ್ಲಿ ಪ್ರಮುಖ ದೇಶೀಯ ಹಾದಿಯು ತಡೆಗಳನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇದು ಕೇವಲ ಒಂದು ವರ್ಷದ ಸಂಖ್ಯೆ ಅಲ್ಲ. ಇದು ಬಹುಶಃ ಸರ್ಕಾರವು ನಡೆಸುತ್ತಿರುವ ಸಂಪೂರ್ಣ ಉಪಕ್ರಮಗಳ ಒಟ್ಟುಗೂಡುವಿಕೆಯು ಹಿಂದೆಂದೂ ನೋಡಿರುವುದಕ್ಕಿಂತ ಹೆಚ್ಚಿನ ಕ್ರಮದ ಗಮನ ಹರಿಸುತ್ತಿದೆ ಎಂದು ಸೊರಿನ್ ಇನ್ವೆಸ್ಟ್‌ಮೆಂಟ್ಸ್‌ನ ಜನರಲ್ ಪಾಲುದಾರ ಸಂಜಯ್ ನಾಯರ್ ಹೇಳಿದ್ದಾರೆ. ಏಷ್ಯಾದ ಸಹವರ್ತಿಗಳಲ್ಲಿ ಭಾರತವು ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುವುದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ. ಈಗಿನ ಭಾರತ 2013ರಲ್ಲಿದ್ದ ಭಾರತಕ್ಕಿಂತ ಭಿನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

10 ವರ್ಷಗಳ ಅಲ್ಪಾವಧಿಯಲ್ಲಿ ಭಾರತವು ವಿಶ್ವ ಕ್ರಮಾಂಕದಲ್ಲಿ ಸ್ಥಾನಗಳನ್ನು ಗಳಿಸಿದೆ. 2023ರ ವೇಳೆಗೆ ಐಎಂಎಫ್, ವಿಶ್ವ ಬ್ಯಾಂಕ್, ಮೋರ್ಗಾನ್ ಸ್ಟಾನ್ಲಿ ಸಂಸ್ಥೆ ಸೇರಿ ಎಲ್ಲರೂ ನಾವು 7.6 ಟ್ರಿಲಿಯನ್​ ಡಾಲರ್​​ ಆರ್ಥಿಕತೆಯಾಗುತ್ತೇವೆ ಎಂದು ನಂಬುತ್ತಾರೆ. ಆದ್ದರಿಂದ ಮುಂದಿನ ಏಳು ವರ್ಷಗಳಲ್ಲಿ ಭಾರತವು ಮತ್ತೊಂದು ಭಾರತವನ್ನು ಸೇರಿಸಲಿದೆ. ಈ ವರ್ಷಗಳಲ್ಲಿ ಯುರೋಪ್‌ನ ಎಲ್ಲ ಜಾಗತಿಕ ಜಿಡಿಪಿಗೆ ಅದು ಹೆಚ್ಚು ಮಾಡುತ್ತದೆ ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನ ಅಧ್ಯಕ್ಷ ಜನಮೇಜಯ ಸಿನ್ಹಾ ಹೇಳಿದ್ದಾರೆ.

ಇದನ್ನೂ ಓದಿ:Explained: ಶೇ.7.2ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿದ ಭಾರತ.. ಇದಕ್ಕೆ ಪ್ರೇರೇಪಿಸಿದ ಅಂಶಗಳೇನಿರಬಹುದು!

ABOUT THE AUTHOR

...view details