ಕರ್ನಾಟಕ

karnataka

ETV Bharat / business

ಚಿನಿವಾರ ಪೇಟೆ ಸಮಾಚಾರ: ಇಂದಿನ ಚಿನ್ನ, ಬೆಳ್ಳಿ ಬೆಲೆ ಹೀಗಿದೆ.. - today gold rate in market

ಸತತ ಏರಿಕೆ ಕಾಣುತ್ತಿರುವ ಚಿನ್ನದ ದರದಲ್ಲಿ ಇಂದು ಅಲ್ಪ ಹೆಚ್ಚಳ ದಾಖಲಿಸಿದೆ. ಬೆಳ್ಳಿ ಕೂಡ 508 ರೂಪಾಯಿ ಹೆಚ್ಚಳವಾಗಿದೆ.

today-gold-rate
ಚಿನ್ನ

By

Published : Apr 11, 2022, 7:21 PM IST

ನವದೆಹಲಿ:ಸತತ ಏರಿಕೆ ಕಾಣುತ್ತಿರುವ ಚಿನ್ನ ಇಂದು ಕೂಡ ಅಲ್ಪ ಏರಿಕೆ ದಾಖಲಿಸಿದೆ. 10 ಗ್ರಾಂ ಚಿನ್ನಕ್ಕೆ 304 ರೂ. ಏರಿಕೆಯಾಗಿ 52,302 ರೂ.ಗೆ ತಲುಪಿದೆ. ಇದು ಹಿಂದಿನ ವಹಿವಾಟಿನಲ್ಲಿ 10 ಗ್ರಾಂಗೆ 51,998 ರೂ. ಇತ್ತು. ಬೆಳ್ಳಿ ಕೂಡ ಹಿಂದಿನ ವಹಿವಾಟಿಗಿಂತ 508 ರೂ. ಹೆಚ್ಚಳ ದಾಖಲಿಸಿ ಪ್ರತಿ ಕೆಜಿಗೆ 67,407 ರೂ.ಗೆ ಜಿಗಿದಿದೆ.

ಕಳೆದ ವಹಿವಾಟಿನಲ್ಲಿ ಅದು 66,899 ರೂ. ಇತ್ತು. ಇದಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಪ್ರತಿ ಔನ್ಸ್‌ ಚಿನ್ನ 1,953 ಡಾಲರ್ ಮತ್ತು ಬೆಳ್ಳಿಗೆ 24.93 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ABOUT THE AUTHOR

...view details