ಹೈದರಾಬಾದ್: ಹೊಸ ಯುಗದ ಹಣಕಾಸು ಸಂಸ್ಥೆಗಳು ಎಲ್ಲ ವರ್ಗದ ಗ್ರಾಹಕರನ್ನು ತಲುಪುವ ಪ್ರಯತ್ನದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಲ್ಲ ರೀತಿಯ ಸಾಲಗಳು ಎಲ್ಲ ವರ್ಗದ ಜನರಿಗೆ ತಲುಪುವಂತೆ ಅನೇಕ ಪ್ರಯತ್ನ ಮಾಡುತ್ತಿವೆ. ಆದರೆ, ಸಾಲದ ವಿಷಯದಲ್ಲಿ ಈಗಲೂ ಕ್ರೆಡಿಟ್ ಕಾರ್ಡ್‌ಗಳು ತಮ್ಮ ಪ್ರಾಮುಖ್ಯತೆಯನ್ನು ಮುಂದುವರೆಸಿವೆ. ದೈನಂದಿನ ಜೀವನದಲ್ಲಿ ಇವುಗಳ ವ್ಯಾಪಕ ಬಳಕೆಯಿಂದಾಗಿ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ಅಗತ್ಯವೂ ಹೆಚ್ಚಾಗಿದೆ. ಇದೇನೇ ಇದ್ದರೂ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ಮೊದಲು ಅದರ ಬಗ್ಗೆ ಸಂಪೂರ್ಣವಾಗಿ ಸಂಶೋಧನೆ ಮಾಡಿ, ಕೆಲ ಮಹತ್ವದ ವಿಷಯಗಳನ್ನು ಅರಿತುಕೊಳ್ಳಲೇಬೇಕು.
ನೀವು ತೆಗೆದುಕೊಳ್ಳುವ ಕಾರ್ಡ್ ಪ್ರಯೋಜನ ತಿಳಿದುಕೊಳ್ಳಿ:ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಮುಂದೆ ಬರುತ್ತಿರುವ ಬ್ಯಾಂಕುಗಳ ಕಾರ್ಡ್‌ಗಳು ಯಾವೆಲ್ಲ ಪ್ರಯೋಜನಗಳನ್ನು ನೀಡುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ನೀವು ಹೆಚ್ಚು ಆನ್‌ಲೈನ್ ಶಾಪಿಂಗ್ ಮಾಡುವವರಾಗಿದ್ದರೆ, ಹೆಚ್ಚಿನ ರಿವಾರ್ಡ್ಸ್ ಮತ್ತು ಆಫರ್ಗಳನ್ನು ಹೊಂದಿರುವ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬಹುದು. ಗೃಹೋಪಯೋಗಿ ಉಪಕರಣಗಳನ್ನು ಖರೀದಿಸುವಾಗ ಯಾವುದೇ ಬಡ್ಡಿಯಿಲ್ಲದೆ ಮೊತ್ತವನ್ನು ಇಎಂಐಗಳಾಗಿ ಪರಿವರ್ತಿಸಲು ಇದು ಉಪಯುಕ್ತವಾಗಿದೆ.
ಕ್ರೆಡಿಟ್ ಕಾರ್ಡ್ ತೆಗೆದುಕೊಂಡ ನಂತರ, ನೀವು ತಪ್ಪದೇ ಸಕಾಲಿಕ ಪಾವತಿಗಳನ್ನು ಮಾಡಬೇಕು. ಇದರಲ್ಲಿ ಯಾವುದೇ ಲೋಪ ಮಾಡಿದರೆ ಭಾರೀ ದಂಡಕ್ಕೆ ಕಾರಣವಾಗುತ್ತದೆ. ಮಾಸಿಕ ಪಾವತಿಗಳಲ್ಲಿ ಕನಿಷ್ಠ ಬಾಕಿಯನ್ನು ಪಾವತಿಸಿದರೆ ಬಡ್ಡಿಯ ಹೊರೆ ಹೆಚ್ಚಾಗುತ್ತದೆ. ಸಕಾಲದಲ್ಲಿ ಬಿಲ್ ಪಾವತಿಸದಿದ್ದರೆ ಬಡ್ಡಿ ಮತ್ತು ದಂಡ ಹೆಚ್ಚುತ್ತದೆ. ಕ್ರೆಡಿಟ್ ಕಾರ್ಡ್ ಬಳಕೆದಾರರು ಲಭ್ಯವಿರುವ ಕ್ರೆಡಿಟ್‌ನ ಶೇಕಡಾ 30 ಕ್ಕಿಂತ ಹೆಚ್ಚು ಬಳಸದಂತೆ ಖಚಿತಪಡಿಸಿಕೊಳ್ಳಬೇಕು.