ನವದೆಹಲಿ: ಭಾರತದಿಂದ ಈರುಳ್ಳಿ ರಫ್ತಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. 2022ರ ಏಪ್ರಿಲ್ನಿಂದ ಡಿಸೆಂಬರ್ವರೆಗೆ 523.8 ಮಿಲಿಯನ್ ಈರುಳ್ಳಿ ರಫ್ತು ಮಾಡಲಾಗಿದೆ. ವಾರ್ಷಿಕವಾಗಿ ಈ ರಫ್ತಿನ ಪ್ರಮಾಣದಲ್ಲಿ ಶೇ 16.3ರಷ್ಟು ಏರಿಕೆಯಾಗಿದೆ. ಭಾರತದಿಂದ ಈರುಳ್ಳಿ ರಫ್ತಿಗೆ ನಿಷೇಧ ಹೇರಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ಸ್ಪಷ್ಟಪಡಿಸಿದೆ.
ಯಾವುದೇ ನಿರ್ಬಂಧ ಹೇರಿಲ್ಲ: ಪ್ರಸ್ತುತ ಈರುಳ್ಳಿ ರಫ್ತಿಗೆ ಯಾವುದೇ ನಿರ್ಬಂಧ ಅಥವಾ ನಿಷೇಧ ಹೇರಿಲ್ಲ. ಈರುಳ್ಳಿ ವ್ಯಾಪಾರ ನೀತಿಯು ಉಚಿತ ವರ್ಗದ ಅಡಿಯಲ್ಲಿದೆ. ಬೇರೆ ದೇಶಕ್ಕೆ ಈರುಳ್ಳಿಗಳನ್ನು ನಮ್ಮ ದೇಶದಿಂದ ಕಳುಹಿಸುವುದಕ್ಕೆ ಯಾವುದೇ ಅಡೆತಡೆಗಳನ್ನು ವಿಧಿಸಿಲ್ಲ. ಈ ಸಂಬಂಧ ಯಾವುದೇ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಬೇಡಿ ಎಂದು ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆಗೆ ತಿರುಗೇಟು ನೀಡಿದ್ದಾರೆ.
ತಪ್ಪುದಾರಿಗೆ ಎಳೆಯಬೇಡಿ: ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ವಿಧಿಸಿರುವ ನಿಷೇಧವನ್ನು ಹಿಂಪಡೆಯುವಂತೆ ಆಗ್ರಹಿಸಿ ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಉತ್ತರಿಸಿರುವ ಕೇಂದ್ರ ವಾಣಿಕ್ಯ ಸಚಿವ ಪಿಯೂಷ್ ಗೋಯೆಲ್, ತಪ್ಪು ದಾರಿಗೆ ಎಳೆಯುತ್ತಿರುವ ಇಂತಹ ಹೇಳಿಕೆ ನೀಡುತ್ತಿರುವುದು ದುರದುಷ್ಟಕರ. 2022ರ ಜುಲೈನಿಂದ ಡಿಸೆಂಬರ್ವರೆಗೆ ಈರುಳ್ಳಿ ರಫ್ತು ಪ್ರತಿ ತಿಂಗಳು 40 ಮಿಲಿಯನ್ ಅಮೆರಿಕನ್ ಡಾಲರ್ ಮಾರ್ಕ್‌ಗಿಂತ ಹೆಚ್ಚಿದೆ. ಇದರಿಂದ ನಮ್ಮ ಅನ್ನದಾತರಿಗೆ ಪ್ರಯೋಜನಕಾರಿಯಾಗಿದೆ ಎಂದಿದ್ದಾರೆ.
ಮೋದಿ ಸರ್ಕಾರದ ಬೆಂಬಲ ಮತ್ತು ಸುಧಾರಣೆ ನೀತಿ ಹೊಂದಿದ್ದು, ಇದರಿಂದ ಕೃಷಿಕರು ತಮ್ಮ ಇಳುವರಿ ಹೆಚ್ಚಿಸಲು ಮತ್ತು ಉತ್ತಪನ್ನದ ಗುಣಮಟ್ಟ ಕಾಪಾಡಲು ಸಹಾಯಕವಾಗಿದೆ. ಭಾರತದಿಂದ ಅತಿ ಹೆಚ್ಚು ಈರುಳ್ಳಿ ರಫ್ತು ಮಾಡುತ್ತಿರುವ ಗೌರವಕ್ಕೆ ಮಹಾರಾಷ್ಟ್ರ ಪಾತ್ರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.