ಕರ್ನಾಟಕ

karnataka

ETV Bharat / business

ಮೊಬೈಲ್​ ಫೋನ್​, ಬಟ್ಟೆ ಖರೀದಿಗೇ ಹೆಚ್ಚು ಹಣ ವ್ಯಯಿಸುತ್ತಿದೆ ಭಾರತದ ಯುವ ಸಮುದಾಯ!

ಈಗಿನ ಭಾರತದ ಯುವ ಸಮೂಹ ಮೊಬೈಲ್ ಫೋನ್ ಮತ್ತು ಬಟ್ಟೆಗಳನ್ನು ಖರೀದಿಸಲು ಅತಿ ಹೆಚ್ಚು ಹಣ ಖರ್ಚು ಮಾಡುತ್ತಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಮೊಬೈಲ್​ ಫೋನ್​, ಬಟ್ಟೆ ಖರೀದಿಗೆ ಹೆಚ್ಚು ಹಣ ವ್ಯಯಿಸುತ್ತಿದೆ ಭಾರತದ ಯುವಸಮುದಾಯ!
77% of young Indians now spend the most on phones, apparels

By

Published : Apr 2, 2023, 12:26 PM IST

ನವದೆಹಲಿ : 18 ಮತ್ತು 34 ರ ನಡುವಿನ ವಯೋಮಾನದ ಭಾರತೀಯರು ಈಗ ಮೊಬೈಲ್ ಫೋನ್ ಮತ್ತು ಉಡುಪುಗಳ ಖರೀದಿಗಾಗಿ ಹೆಚ್ಚು ಹಣ (ಶೇ 77) ಖರ್ಚು ಮಾಡುತ್ತಾರೆ ಮತ್ತು ಅವರಲ್ಲಿ ಶೇಕಡಾ 65 ಕ್ಕಿಂತ ಹೆಚ್ಚು ಜನ ಅಂಥ ಖರೀದಿಗಳಿಗೆ ತಮ್ಮಲ್ಲಿನ ವೈಯಕ್ತಿಕ ಹಣವನ್ನು ಬಳಸುತ್ತಾರೆ ಎಂದು ವರದಿಯೊಂದು ಹೇಳಿದೆ. ಉಳಿದವರಲ್ಲಿ ಶೇ 26 ರಷ್ಟು ಜನರು ಸ್ನೇಹಿತರು ಮತ್ತು ಕುಟುಂಬದವರಿಂದ ಹಣಕಾಸಿನ ಸಹಾಯ ಪಡೆದು ಇವುಗಳನ್ನು ಖರೀದಿಸುತ್ತಾರೆ. ಶೇ 7 ರಷ್ಟು ಜನ ಸಾಲ ಮಾಡಿ ಮೊಬೈಲ್ ಮತ್ತು ಉಡುಪು ಖರೀದಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

ಶೇ 77 ರಷ್ಟು ಭಾರತೀಯ ಯುವಸಮೂಹವು ತಮ್ಮ ಹೆಚ್ಚಿನ ಸಮಯವನ್ನು ಶಾರ್ಟ್ ವಿಡಿಯೋ ನೋಡುವುದರಲ್ಲೇ ಕಳೆಯುತ್ತಿದ್ದಾರೆ. ಇನ್ನು ಶೇ 16 ರಷ್ಟು ಜನ ಸುದ್ದಿ ಮತ್ತು ಮನರಂಜನಾ ಚಾನೆಲ್‌ಗಳಲ್ಲಿ ಮತ್ತು ಶೇ 7 ರಷ್ಟು ಜನ ದೂರದರ್ಶನ ಮತ್ತು OTT ನೋಡುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಹೀಗೆ ಖರೀದಿ ಮಾಡುವ ಸುಮಾರು ಶೇ 60 ರಷ್ಟು ಯುವ ಸಮೂಹವು ಏನನ್ನು ಖರೀದಿಸಬೇಕೆಂಬ ವಿಷಯದಲ್ಲಿ ಶಾರ್ಟ್​ ವೀಡಿಯೊ, ಸೋಶಿಯಲ್ ಮೀಡಿಯಾ ಹಾಗೂ ಆನ್ಲೈನ್ ಪ್ಲಾಟ್​ಫಾರ್ಮ್, ಟಿವಿಗಳಿಂದ ಪ್ರಭಾವಿತರಾಗಿರುತ್ತಾರೆ.

ಆಫರ್​ಗಳು ಮತ್ತು ಡಿಸ್ಕೌಂಟ್​ಗಳ ಕಾರಣದಿಂದ ಅರ್ಧಕ್ಕಿಂತ ಹೆಚ್ಚಿನ ಯುವ ಸಮೂಹವು ಖರೀದಿಗೆ ಮುಂದಾಗುತ್ತಿದೆ. ಹಾಗೆಯೇ ಉತ್ಪನ್ನಗಳ ಗುಣಮಟ್ಟ, ಸುಲಭವಾಗಿ ಖರೀದಿಸುವಿಕೆ, ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸುವ ಸೌಲಭ್ಯ ಈ ಕಾರಣಗಳಿಂದಲೂ ಯುವ ಸಮುದಾಯ ಖರೀದಿಗೆ ಮುಂದಾಗುತ್ತಿದೆ. ಯುವ ಭಾರತವು ಇಂದು ನಿರ್ಭೀತವಾಗಿದ್ದು, ಆತ್ಮವಿಶ್ವಾಸದಿಂದ ಕೂಡಿದೆ. ಶಾರ್ಟ್​ ವೀಡಿಯೊ ಮಾದರಿಯು ಅವರ ಸೃಜನಶೀಲತೆಯನ್ನು ಇಡೀ ಜಗತ್ತಿಗೆ ಪ್ರದರ್ಶಿಸಲು ಅವರಿಗೆ ಮುಕ್ತ ವೇದಿಕೆಯನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಶಾರ್ಟ್ ವೀಡಿಯೊಗಳು ಮನರಂಜನಾ ವೀಡಿಯೊಗಳಾಗುತ್ತಿವೆ ಎಂದು ಶೇರ್‌ಚಾಟ್‌ ಮತ್ತು ಮೋಜ್​ನ ಮುಖ್ಯ ಕಂದಾಯ ಅಧಿಕಾರಿ ಉದಿತ್ ಶರ್ಮಾ ಹೇಳಿದರು.

300 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರು (MAUs) ಮತ್ತು 50 ಮಿಲಿಯನ್ ಕಂಟೆಂಟ್ ಕ್ರಿಯೇಟರ್ಸ್​ಗಳನ್ನು ಹೊಂದಿರುವ, Moj ದೇಶದಲ್ಲಿ ಅತ್ಯಂತ ಜನಪ್ರಿಯ ಶಾರ್ಟ್ ವೀಡಿಯೊ ಪ್ಲಾಟ್​ಪಾರ್ಮ್ ಆಗಿದೆ. ಭಾರತ್ ಯುವ ಸಮುದಾಯ ಪ್ರತಿ ದಿನ ಮೋಜ್‌ನಲ್ಲಿ 3 ಮಿಲಿಯನ್ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದೆ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ದಿನಕ್ಕೆ ಸರಾಸರಿ 34 ನಿಮಿಷಗಳನ್ನು ಕಳೆಯುತ್ತದೆ ಎಂದು ಕಂಪನಿ ಹೇಳಿದೆ.

ಓಲಾ ಎಲೆಕ್ಟ್ರಿಕ್ ಮಾರ್ಚ್ 2023 ರ ಒಂದೇ ತಿಂಗಳಲ್ಲಿ 27,000 ವಾಹನಗಳನ್ನು ಮಾರಾಟ ಮಾಡಿರುವುದಾಗಿ ಪ್ರಕಟಿಸಿದೆ. ಅಂದರೆ ಬೆಂಗಳೂರು ಮೂಲದ ಎಲೆಕ್ಟ್ರಿಕಲ್ ವೆಹಿಕಲ್ ಸ್ಟಾರ್ಟ್‌ಅಪ್ ಆಗಿರುವ ಓಲಾ ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ. ಓಲಾ ತನ್ನ ಪ್ರತಿಸ್ಪರ್ಧಿಗಳಿಗಿಂತ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ರ್ಯಾಂಡ್ ಎಕ್ಸ್​ಪೀರಿಯನ್ಸ್​ ಕೇಂದ್ರಗಳನ್ನು ಆರಂಭಿಸುವ ಮೂಲಕ ಓಲಾ ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ ಮತ್ತು ಪ್ರಸ್ತುತ ಇದು 400 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ.

ಇದನ್ನೂ ಓದಿ : ಪಾಕಿಸ್ತಾನದಲ್ಲಿ ಕಾರುಗಳ ಬೆಲೆ ಹೆಚ್ಚಳ: ಭಾರತಕ್ಕಿಂತ ಎಷ್ಟು ದುಬಾರಿ ಗೊತ್ತೇ?

ABOUT THE AUTHOR

...view details