ಚೆನ್ನೈ:ವಿಶ್ವ ಆರ್ಥಿಕ ಹಿಂಜರಿತ, ಉಕ್ರೇನ್ ಯುದ್ಧ ಹೀಗೆ ನಾನಾ ಕಾರಣಗಳಿಂದ ಭಾರತ ರೂಪಾಯಿ ಡಾಲರ್ ವಿರುದ್ಧ ಕೃಶವಾಗುತ್ತಾ ಸಾಗುತ್ತಿದೆ. 75 ರೂ, ಆಜು ಬಾಜು ವ್ಯವಹಾರ ನಡೆಸುತ್ತಿದ್ದ ರೂಪಾಯಿ ಮೌಲ್ಯವೀಗ 5 ರೂ ಕುಸಿತ ಕಂಡು 80 ಹತ್ತಿರ ದಾಪುಗಾಲಿಟ್ಟಿದೆ.
ಇದು ಮುಂದಿನ ವಾರದ ವಹಿವಾಟಿನಲ್ಲಿ ರೂಪಾಯಿ ಡಾಲರ್ ವಿರುದ್ಧ 80 ರೂ. ಗೆ ಕುಸಿಯುವ ಸಾಧ್ಯತೆ ಇದೆ ಎಂದು ಎಲ್ಕೆಪಿಯ ಹಿರಿಯ ಅಧಿಕಾರಿ ಹೇಳಿದ್ದಾರೆ.