ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಟ್ವಿಟರ್ನಲ್ಲೂ ಶೇ.9.2 ರಷ್ಟು ಹೂಡಿಕೆ ಮಾಡಿದ್ದಾರೆ. ಇದರ ಭಾಗವಾಗಿ ಅವರು ಶೇ.73.5 ಕೋಟಿ ಮೌಲ್ಯದ ಷೇರುಗಳನ್ನು ಪಡೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಹೂಡಿಕೆ ಮಾಡಿದ ತರುವಾಯ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲೇ ಟ್ವಿಟರ್ ಷೇರುಗಳು ಶೇ.25ರಷ್ಟು ಏರಿಕೆ ಕಂಡಿವೆ.
ಯಶಸ್ವಿ ಉದ್ಯಮಿಯಾದ ಎಲಾನ್ ಮಸ್ಕ್ ಈ ಹಿಂದೆ ಅನೇಕ ಬಾರಿ ಟ್ವಿಟರ್ನ ಸಾಮರ್ಥ್ಯ ಮತ್ತು ಅದರ ವಾಕ್ಸ್ವಾತಂತ್ರ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಅವರೇ ಟ್ವಿಟರ್ನಲ್ಲಿ ಹೂಡಿಕೆ ಮಾಡಿದ್ದಾರೆ. ಅಲ್ಲದೇ ದೂರಗಾಮಿ ಆಲೋಚನೆಯಿಂದ, ಟ್ವಿಟರ್ಗೆ ಹೊಸ ರೂಪ ತರುವ ನಿಟ್ಟಿನಲ್ಲಿ ಹೂಡಿಕೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.