ಕರ್ನಾಟಕ

karnataka

ETV Bharat / business

ಟಾಟಾ ಗ್ರೂಪ್​ನಿಂದ ಬಿಗ್​ ಅಪ್​ಡೇಟ್! ಐಪಿಒಗೆ ಟಾಟಾ ಟೆಕ್ನಾಲಜೀಸ್ - ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ

ಟಾಟಾ ಟೆಕ್ನಾಲಜೀಸ್ ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆ. ಕಂಪನಿಯು ಮಾರ್ಚ್ 09 ರಂದು ಅಂದ್ರೆ ಇಂದು SEBI ಗೆ DRHP ಸಲ್ಲಿಸಿದೆ. ಈ ಕುರಿತು ವಿವರವಾದ ಮಾಹಿತಿ ಓದಿ.

Tata Technologies files for IPO  IPO will be purely an offer for sale  involve any fresh issue of shares  ಐಪಿಒಗೆ ಹೋದ ಟಾಟಾ ಟೆಕ್ನಾಲಜೀಸ್  ಟಾಟಾ ಗ್ರೂಪ್​ನಿಂದ ಬಿಗ್​ ಅಪ್​ಡೇಟ್  ಟಾಟಾ ಟೆಕ್ನಾಲಜೀಸ್ ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆ  SEBI ಗೆ DRHP ಅನ್ನು ಸಲ್ಲಿಸಿದೆ  ಟಾಟಾ ಮೋಟಾರ್ಸ್ ಅಂಗಸಂಸ್ಥೆ ಟಾಟಾ ಟೆಕ್ನಾಲಜೀಸ್  ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ  IPO ಸಂಪೂರ್ಣವಾಗಿ ಆಫರ್ ಫಾರ್ ಸೇಲ್
ಟಾಟಾ ಗ್ರೂಪ್​ನಿಂದ ಬಿಗ್​ ಅಪ್​ಡೇಟ್​

By

Published : Mar 10, 2023, 12:58 PM IST

ಮುಂಬೈ (ಮಹಾರಾಷ್ಟ್ರ): ಟಾಟಾ ಮೋಟಾರ್ಸ್ ಅಂಗಸಂಸ್ಥೆ ಟಾಟಾ ಟೆಕ್ನಾಲಜೀಸ್ ಸಾರ್ವಜನಿಕ ವಿತರಣೆಗೆ (ಟಾಟಾ ಟೆಕ್ನಾಲಜೀಸ್ ಐಪಿಒ) ಹೋಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ದಾಖಲೆಗಳನ್ನು ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ಗೆ ಸಲ್ಲಿಸಲಾಗಿದೆ. ಟಾಟಾ ಮೋಟಾರ್ಸ್ ಸೇರಿದಂತೆ ಇತರ ಇಬ್ಬರು ಹೂಡಿಕೆದಾರರು ಶೇ 23.6ರಷ್ಟು ಪಾಲು ಮಾರಾಟ ಮಾಡಲು ಸಿದ್ಧರಾಗಿದ್ದಾರೆ. 2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸೇವೆಗಳನ್ನು ಸಾರ್ವಜನಿಕ ವಿತರಣೆಗೆ ತಂದ ಟಾಟಾ ಗ್ರೂಪ್, 19 ವರ್ಷಗಳ ನಂತರ ಮತ್ತೆ ಮತ್ತೊಂದು ಕಂಪನಿಯನ್ನು ಐಪಿಒಗೆ ತರುತ್ತಿದೆ.

IPO ಸಂಪೂರ್ಣವಾಗಿ ಆಫರ್ ಫಾರ್ ಸೇಲ್ ಅಡಿಯಲ್ಲಿ ನಡೆಯಲಿದೆ. ಟಾಟಾ ಮೋಟಾರ್ಸ್ 8,11,33,706 ಷೇರುಗಳು, ಆಲ್ಫಾ ಟಿಸಿ ಹೋಲ್ಡಿಂಗ್ಸ್ 97,16,853 ಷೇರುಗಳು ಮತ್ತು ಟಾಟಾ ಕ್ಯಾಪಿಟಲ್ ಗ್ರೋತ್ ಫಂಡ್ 48,58,425 ಷೇರುಗಳನ್ನು ಹಿಂತೆಗೆದುಕೊಳ್ಳಲು ಸಿದ್ಧವಾಗಿದೆ. ಈ ಐಪಿಒ ಮೂಲಕ ಎಷ್ಟು ಹಣವನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂಬುದು ತಿಳಿದಿಲ್ಲ.

ಇತ್ತೀಚಿನ ಟಾಟಾ ಟೆಕ್ ಬೈಬ್ಯಾಕ್ ಪ್ರಕಾರ, ಕಂಪನಿಯ ಮೌಲ್ಯಮಾಪನವು ರೂ.16,080 ಕೋಟಿ ಎಂದು ಅಂದಾಜಿಸಲಾಗಿದೆ. ಅದರ ಪ್ರಕಾರ, ಇತ್ತೀಚಿನ IPO ಗಾತ್ರವು ರೂ.3,800 ಕೋಟಿಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. JM ಫೈನಾನ್ಶಿಯಲ್ ಲಿಮಿಟೆಡ್, BOFA ಸೆಕ್ಯುರಿಟೀಸ್ ಮತ್ತು ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ ಈ IPO ಗಾಗಿ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಟಾಟಾ ಟೆಕ್ನಾಲಜೀಸ್ ಉತ್ಪನ್ನ ಎಂಜಿನಿಯರಿಂಗ್ ಮತ್ತು ಡಿಜಿಟಲ್ ಸೇವೆಗಳ ಕಂಪನಿಯಾಗಿದೆ. ಸಿಇಒ ವಾರೆನ್ ಹ್ಯಾರಿಸ್ ನೇತೃತ್ವದಲ್ಲಿ ಕಂಪನಿಯು 11,000 ಜನರನ್ನು ನೇಮಿಸಿಕೊಂಡಿದೆ. ಇದು ಮುಖ್ಯವಾಗಿ ಟಾಟಾ ಮೋಟಾರ್ಸ್, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಟಾಟಾ ಗ್ರೂಪ್‌ನ ಇತರ ಕಂಪನಿಗಳಿಗೆ ಸೇವೆ ಸಲ್ಲಿಸುತ್ತದೆ.

ಟಾಟಾ ಮೋಟಾರ್ಸ್ ಮಾರ್ಚ್ 31, 2022 ರಂತೆ ಟಾಟಾ ಟೆಕ್ನಾಲಜೀಸ್‌ನಲ್ಲಿ 72.48 ಶೇ ಪಾಲನ್ನು ಹೊಂದಿದೆ. ಆಲ್ಫಾ ಟಿಸಿ ಹೋಲ್ಡಿಂಗ್ಸ್ ಶೇ. 8.96 ಮತ್ತು ಟಾಟಾ ಕ್ಯಾಪಿಟಲ್ ಗ್ರೋತ್ ಫಂಡ್ ಶೇ. 4.48 ಪಾಲನ್ನು ಹೊಂದಿವೆ. ಟಾಟಾ ಮೋಟಾರ್ಸ್ ಫೈನಾನ್ಸ್, ಟಾಟಾ ಎಂಟರ್‌ಪ್ರೈಸಸ್ ಓವರ್‌ಸೀಸ್, ಝೆಡ್ರಾ ಕಾರ್ಪೊರೇಟ್ ಸರ್ವಿಸಸ್ ಮತ್ತು ಪ್ಯಾಟ್ರಿಕ್ ರೇಮನ್ ಮೆಕ್‌ಗೋಲ್ಡ್ರಿಕ್ ಉಳಿದ ಪಾಲು ಹೊಂದಿವೆ.

ಡಿಸೆಂಬರ್ 31, 2022ಕ್ಕೆ ಕೊನೆಗೊಂಡ ಒಂಬತ್ತು ತಿಂಗಳುಗಳಲ್ಲಿ ಕಂಪನಿಯ ಆದಾಯವು 3,052.29 ಕೋಟಿ ರೂಪಾಯಿ ಮತ್ತು ನಿವ್ವಳ ಲಾಭ ರೂಪಾಯಿ 407 ಕೋಟಿ ತಲುಪಿತ್ತು. ಕಂಪನಿಯು 18 ಅಂತರಾಷ್ಟ್ರೀಯ ವಿತರಣಾ ಕೇಂದ್ರಗಳು ಮತ್ತು ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ (ER&D) ಸೇವೆಗಳು, ಡಿಜಿಟಲ್ ಎಂಟರ್‌ಪ್ರೈಸ್ ಸೇವೆಗಳು (DES), ಶಿಕ್ಷಣ ಕೊಡುಗೆಗಳು, ಮೌಲ್ಯವರ್ಧಿತ ಮರುಮಾರಾಟ ಮತ್ತು iProducts ಕೊಡುಗೆಗಳಲ್ಲಿ ವ್ಯವಹಾರಗಳನ್ನು ಹೊಂದಿದೆ.

ಸುಮಾರು 19 ವರ್ಷಗಳ ನಂತರ ಟಾಟಾ ಗ್ರೂಪ್‌ನ ಕಂಪನಿಯು ತನ್ನ ಐಪಿಒಗೆ ಹೋಗುತ್ತಿರುವುದು ಗಮನಾರ್ಹ. 2004 ರಲ್ಲಿ ಟಾಟಾ ಗ್ರೂಪ್‌ನ ಪ್ರಬಲ ಕಂಪನಿಯಾದ ಟಿಸಿಎಸ್‌ನ ಐಪಿಒಗೆ ಹೋಗಿತ್ತು. ಇದೀಗ 19 ವರ್ಷಗಳ ನಂತರ ಟಾಟಾ ಸಮೂಹದ ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಟೆಕ್ನಾಲಜಿಯ ಐಪಿಒಗೆ ಹೋಗುತ್ತಿದೆ. ಯಾವುದೇ ಕಂಪನಿಯು IPO ಮೂಲಕ ಸಾರ್ವಜನಿಕ ಹಣವನ್ನು ಸಂಗ್ರಹಿಸುತ್ತದೆ ಮತ್ತು ಕಂಪನಿಯ ಷೇರುಗಳನ್ನು ಸಾರ್ವಜನಿಕರಿಗೆ ನೀಡುವ ಹಕ್ಕು ಹೊಂದಿದೆ.

ಇದನ್ನೂ ಓದಿ:ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಚೀನಾ : ಅಧ್ಯಯನ ವರದಿ

ABOUT THE AUTHOR

...view details