ಮುಂಬೈ(ಮಹಾರಾಷ್ಟ್ರ):ಹೂಡಿಕೆದಾರರಿಂದ ಅನಿರೀಕ್ಷಿತ ಪ್ರತಿಕ್ರಿಯೆಯೊಂದಿಗೆ ಹೊಸ ದಾಖಲೆ ಸೃಷ್ಟಿಸಿರುವ ಟಾಟಾ ಟೆಕ್ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಷೇರುಗಳು ಇಂದು ಷೇರುಪೇಟೆಯಲ್ಲಿ ಲಿಸ್ಟ್ ಆಗಿವೆ. ವಿಶೇಷವೆಂದರೆ, ಎಲ್ಲರ ನಿರೀಕ್ಷೆಯಂತೆ ಷೇರುಗಳು ಬಂಪರ್ ಬೆಲೆಗೆ ಲಿಸ್ಟಿಂಗ್ ಆದವು. ಇಶ್ಯೂ ಬೆಲೆಗೆ ಹೋಲಿಸಿದರೆ ಷೇರುಗಳು ಶೇ.140ರಷ್ಟು ಲಾಭದೊಂದಿಗೆ ವಹಿವಾಟು ಆರಂಭಿಸಿದ್ದು ಷೇರು ಮಾರುಕಟ್ಟೆ ತಜ್ಞ ಹುಬ್ಬೇರಿಸಿತು.
ಟಾಟಾ ಟೆಕ್ ಐಪಿಒ: ಟಾಟಾ ಟೆಕ್ ಐಪಿಒ ಇಶ್ಯೂ ಬೆಲೆ ₹500 ಮತ್ತು ಈ ಷೇರು ಇಂದು ಮುಂಬೈ ಷೇರು ಮಾರುಕಟ್ಟೆಯಲ್ಲಿ (ಬಿಎಸ್‌ಇ) ₹1,200 ರ ಸಮೀಪದಲ್ಲಿ ಪಟ್ಟಿ ಮಾಡಲಾಯಿತು. ಲಿಸ್ಟಿಂಗ್‌ನಲ್ಲಿಯೇ ಪ್ರತಿ ಷೇರಿಗೆ ₹700 ಲಾಭವಾಗಿರುವುದು ಗಮನಾರ್ಹ. ಈ ಲೆಕ್ಕಾಚಾರದಂತೆ, ಐಪಿಒದಲ್ಲಿ ಷೇರುಗಳನ್ನು ಹಂಚಿಕೆ ಮಾಡಿದವರು ಪ್ರತಿ ಲಾಟ್ (30 ಷೇರುಗಳು) ಮೇಲೆ 15 ಸಾವಿರ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಮುಖೇನ ಲಿಸ್ಟಿಂಗ್ ಬೆಲೆಯಲ್ಲಿ 21 ಸಾವಿರ ರೂಪಾಯಿ ಲಾಭ ಗಳಿಸಿದ್ದಾರೆ. ನಂತರ ಷೇರುಗಳು ಬಿಎಸ್‌ಇಯಲ್ಲಿ 1,400 ರೂಪಾಯಿಯ ನಂತರ ತುಸು ಇಳಿಕೆ ಕಂಡು ಬೆಳಿಗ್ಗೆ 10:37ರ ಸುಮಾರಿಗೆ 1,303.80 ರೂಪಾಯಿಯ ಸಮೀಪ ವಹಿವಾಟು ನಡೆಸುತ್ತಿತ್ತು.