ನವದೆಹಲಿ: ಟಾಟಾ ಮೋಟಾರ್ಸ್ ಷೇರು ಮೌಲ್ಯ ಕಳೆದ ಒಂದು ವರ್ಷದಲ್ಲಿ ದ್ವಿಗುಣಗೊಂಡಿರುವುದು ಗಮನಾರ್ಹವಾಗಿದೆ. ಟಾಟಾ ಮೋಟಾರ್ಸ್ ಷೇರು ಶುಕ್ರವಾರ 802 ರೂ.ಗಳ ಹೊಸ ಗರಿಷ್ಠ ಮಟ್ಟ ತಲುಪಿದೆ. ಈ ಷೇರಿನ 52 ವಾರಗಳ ಕನಿಷ್ಠ ಬೆಲೆ 381 ರೂ. ಆಗಿದೆ. ಟಾಟಾ ಮೋಟಾರ್ಸ್ ನಿಫ್ಟಿ ಆದಾಯಕ್ಕಿಂತ ಶೇಕಡಾ 79.6 ರಷ್ಟು ಹೆಚ್ಚು ಆದಾಯ ನೀಡಿರುವುದು ವಿಶಿಷ್ಟವಾಗಿದೆ.
"ಈ ವರ್ಷ ನಾವೀನ್ಯತೆ ಮತ್ತು ಪ್ರಗತಿಗೆ ನಾವು ಬದ್ಧರಾಗಿರುವುದನ್ನು ನಮ್ಮ ಆರ್ಥಿಕ ಫಲಿತಾಂಶಗಳು ಸ್ಪಷ್ಟವಾಗಿ ತೋರಿಸಿವೆ. 2023 ರಲ್ಲಿ, ಟಾಟಾ ಗ್ರೂಪ್ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಬಂಡವಾಳೀಕರಣವು ಶೇಕಡಾ 32 ರಷ್ಟು ಹೆಚ್ಚಾಗಿದೆ, ಇದು ಸೆನ್ಸೆಕ್ಸ್ನ ದರಕ್ಕಿಂತ ಎರಡು ಪಟ್ಟು ಅಂದರೆ, ಶೇಕಡಾ 17 ರಷ್ಟು ಹೆಚ್ಚಾಗಿದೆ" ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ 2024 ರ ಹೊಸ ವರ್ಷದ ಸಂದರ್ಭದಲ್ಲಿ ಗ್ರೂಪ್ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
"ಈ ಕಠಿಣ ಜಾಗತಿಕ ಸನ್ನಿವೇಶದಲ್ಲಿ ನಮ್ಮ ಸಂಸ್ಥೆ 2023 ರಲ್ಲಿ ಪ್ರಶಂಸನೀಯ ಪ್ರದರ್ಶನ ನೀಡಿದೆ. ಸರಳೀಕರಣ, ಸಿನರ್ಜಿ, ಸ್ಕೇಲ್, ಸುಸ್ಥಿರತೆ, ಪೂರೈಕೆ ಸರಪಳಿ ಮತ್ತು ಎಐ ತತ್ವಗಳನ್ನು ಅನುಸರಿಸಿ ನಮ್ಮ ಕಾರ್ಯಾಚರಣೆಗಳು ನಮ್ಮ ಕಂಪನಿಗಳ ಪ್ರಗತಿಗೆ ಕೊಡುಗೆ ನೀಡಿದೆ" ಎಂದು ಅವರು ಹೇಳಿದ್ದಾರೆ.