ಕರ್ನಾಟಕ

karnataka

ETV Bharat / business

ಕುಟುಂಬ ಆರೋಗ್ಯ ರಕ್ಷಣೆಗಿರಲಿ ಒಂದಕ್ಕಿಂತ ಹೆಚ್ಚು ಹೆಲ್ತ್​ ಇನ್ಸೂರೆನ್ಸ್​ ಪಾಲಿಸಿ.. - ಫ್ಯಾಮಿಲಿ ಫ್ಲೋಟರ್ ಪಾಲಿಸಿ

ವಯಸ್ಸು 30 ವರ್ಷ ದಾಟಿದ ನಂತರ ಮಧುಮೇಹ ಮತ್ತು ರಕ್ತದೊತ್ತಡದಂತಹ ವಿವಿಧ ದೀರ್ಘಕಾಲದ ಕಾಯಿಲೆಗಳು ಬರುವುದು ಸಹಜವಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳು ಸಾಮಾನ್ಯವಾಗುತ್ತಿವೆ. ಈ ಸವಾಲುಗಳ ಹಿನ್ನೆಲೆಯಲ್ಲಿ ಆರೋಗ್ಯ ವಿಮಾ ಪಾಲಿಸಿಗಳನ್ನು ಆಯ್ಕೆಮಾಡುವಾಗ ನಾವು ಬಹಳ ಜಾಗರೂಕರಾಗಿರಬೇಕು.

ಕುಟುಂಬ ಆರೋಗ್ಯ ರಕ್ಷಣೆಗಿರಲಿ ಒಂದಕ್ಕಿಂತ ಹೆಚ್ಚು ಹೆಲ್ತ್​ ಇನ್ಸೂರೆನ್ಸ್​ ಪಾಲಿಸಿ
Take two or more insurance policies to cover your entire family in health emergencies

By

Published : Oct 18, 2022, 4:09 PM IST

ಹೈದರಾಬಾದ್: ಕುಟುಂಬದಲ್ಲಿನ ಯಾವುದಾದರೂ ಸದಸ್ಯರಿಗೆ ಹಠಾತ್ತಾಗಿ ಅನಾರೋಗ್ಯ ಉಂಟಾದಾಗ, ಅಂಥ ಖರ್ಚು-ವೆಚ್ಚಗಳನ್ನು ನಿಭಾಯಿಸಲು ನಾವು ಸಿದ್ಧತೆ ಮಾಡಿಕೊಂಡಿರದಿದ್ದಲ್ಲಿ ಆಗ ತೀವ್ರ ಹಣಕಾಸಿನ ಒತ್ತಡ ಎದುರಿಸಬೇಕಾಗುತ್ತದೆ. ಅಂಥ ಅನಿರೀಕ್ಷಿತ ಸಂದರ್ಭಗಳಲ್ಲಿ ನಾವು ನಮ್ಮ ಆರೋಗ್ಯವನ್ನು ಮರಳಿ ಪಡೆಯುವವರೆಗೆ ರಕ್ಷಣೆ ಪಡೆಯಲು ಸಾಕಷ್ಟು ಮೊತ್ತದ ವಿಮೆ ಹೊಂದಿರುವುದು ಅಗತ್ಯ. ಇದಕ್ಕಾಗಿ ಮುಂಚಿನಿಂದಲೇ ತಯಾರಿ ಮಾಡಿಕೊಂಡು ಒಂದಿಷ್ಟು ಹಣ ತೆಗೆದಿಡಬೇಕಾಗುತ್ತದೆ. ಇಂಥ ಸಂದರ್ಭಗಳನ್ನು ಎದುರಿಸಲು ಆರೋಗ್ಯ ವಿಮಾ ಪಾಲಿಸಿ ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಆದರೆ ವಿಮೆ ಆಯ್ಕೆಮಾಡುವಾಗ ನಾವು ಬಹಳ ಜಾಗರೂಕರಾಗಿರಬೇಕು ಮತ್ತು ಆ ವಿಮೆ ಆರೋಗ್ಯ ತುರ್ತು ಸಂದರ್ಭಗಳಲ್ಲಿ ನಮ್ಮ ರಕ್ಷಣೆಗೆ ಬರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ವಯಸ್ಸಾದಂತೆ ಅನಾರೋಗ್ಯಕ್ಕೀಡಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅದರಲ್ಲೂ ಯುವಕರು ಸೇರಿದಂತೆ ಎಲ್ಲ ವಯೋಮಾನದವರಲ್ಲಿಯೂ ಜೀವನಶೈಲಿ ರೋಗಗಳು ಹೆಚ್ಚಾಗುತ್ತಿವೆ. ವಯಸ್ಸು 30 ವರ್ಷ ದಾಟಿದ ನಂತರ ಮಧುಮೇಹ ಮತ್ತು ರಕ್ತದೊತ್ತಡದಂತಹ ವಿವಿಧ ದೀರ್ಘಕಾಲದ ಕಾಯಿಲೆಗಳು ಬರುವುದು ಸಹಜವಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳು ಸಾಮಾನ್ಯವಾಗುತ್ತಿವೆ. ಈ ಸವಾಲುಗಳ ಹಿನ್ನೆಲೆಯಲ್ಲಿ ಆರೋಗ್ಯ ವಿಮಾ ಪಾಲಿಸಿಗಳನ್ನು ಆಯ್ಕೆಮಾಡುವಾಗ ನಾವು ಬಹಳ ಜಾಗರೂಕರಾಗಿರಬೇಕು.

ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳ ದೃಷ್ಟಿಯಿಂದ ನೋಡಿದರೆ, ನಾವು ಆರೋಗ್ಯ ವಿಮೆಯನ್ನು ಪಡೆಯಬೇಕಾದ ಮೊತ್ತ ಎಷ್ಟಿರಬೇಕೆಂಬುದು ಪ್ರಮುಖ ಅಂಶವಾಗಿದೆ. ಈಗಾಗಲೇ, ನಮ್ಮಲ್ಲಿ ಹಲವರು ತಾವು ಕೆಲಸ ಮಾಡುವ ಕಂಪನಿಗಳಿಂದ ಗುಂಪು ವಿಮಾ ಪಾಲಿಸಿಗಳನ್ನು ಪಡೆಯುತ್ತಿದ್ದಾರೆ. ಆದರೆ ಇದರ ಜೊತೆಗೆ ನಮ್ಮದೇ ಆದ ಪಾಲಿಸಿಯನ್ನು ತೆಗೆದುಕೊಳ್ಳಬೇಕು. ಇದಕ್ಕೂ ಮೊದಲು, ನಾವು ವೈಯಕ್ತಿಕ ಪಾಲಿಸಿಗೆ ಹೋಗಬೇಕೇ ಅಥವಾ ಇಡೀ ಕುಟುಂಬವನ್ನು ಕವರ್ ಮಾಡುವ ಪಾಲಿಸಿ ಪಡೆಯಬೇಕೇ ಎಂಬುದನ್ನು ನಿರ್ಧರಿಸಬೇಕು. ವಿಮಾ ಕಂಪನಿಗಳು ನೀಡುವ ಫ್ಯಾಮಿಲಿ ಫ್ಲೋಟರ್ ಪಾಲಿಸಿಗಳನ್ನು ಪರಿಗಣಿಸಬಹುದು.

ಅದೇ ಸಮಯದಲ್ಲಿ, ನಾವು ನಮ್ಮ ಇಡೀ ಕುಟುಂಬದ ಆರೋಗ್ಯ ಪ್ರೊಫೈಲ್‌ನ ಒಟ್ಟಾರೆ ಚಿತ್ರಣವನ್ನು ಪರಿಶೀಲಿಸಿ, ಅಸ್ತಿತ್ವದಲ್ಲಿರುವ ಕಾಯಿಲೆಗಳು ಯಾವುದಾದರೂ ಇದ್ದರೆ ಪಟ್ಟಿ ಮಾಡಬೇಕು. ಕಾಲಾನಂತರದಲ್ಲಿ ವೈದ್ಯಕೀಯ ಹಣದುಬ್ಬರ ಹೆಚ್ಚಾಗುತ್ತದೆ. ನಾವು ಆರೋಗ್ಯ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳಬೇಕಾದ ಒಟ್ಟು ಮೊತ್ತವನ್ನು ಆಯ್ಕೆಮಾಡುವಾಗ ಇದನ್ನು ಗಣನೆಗೆ ತೆಗೆದುಕೊಳ್ಳಬೇಕು. ಜೀವನದ ಕೊನೆಯವರೆಗೂ ನಮಗೆ ರಕ್ಷಣೆ ನೀಡುವ ಪಾಲಿಸಿಯೇ ಶ್ರೇಷ್ಠ. ಅಲ್ಲದೆ, ಕ್ಲೈಮ್‌ಗಳನ್ನು ಪಾವತಿಸುವಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಕಂಪನಿಗಳನ್ನು ಆಯ್ಕೆ ಮಾಡುವುದು ಅವಶ್ಯಕ.

ನಾವು ಸರಿಯಾದ ಸಮಯದಲ್ಲಿ ಸರಿಯಾದ ಪಾಲಿಸಿಯನ್ನು ತೆಗೆದುಕೊಂಡಾಗ ಮಾತ್ರ ಅದು ನಮಗೆ ಪ್ರಯೋಜನಕ್ಕೆ ಬರುತ್ತದೆ. ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ಅದರ ನಿಯಮಗಳು ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಪಾಲಿಸಿಯು ಯಾವುದೇ ಷರತ್ತುಗಳು ಅಥವಾ ಉಪ ಮಿತಿಗಳಿಲ್ಲದೆ ವೆಚ್ಚವನ್ನು ಭರಿಸುವಂತಿರಬೇಕು. ಆಸ್ಪತ್ರೆಯ ಕೊಠಡಿ ಶುಲ್ಕ, ಐಸಿಯು ಮತ್ತು ಚಿಕಿತ್ಸೆಗೆ ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಮಾತ್ರ ಪಾವತಿಸಲಾಗುವುದು ಎಂದು ಕೆಲ ಪಾಲಿಸಿಗಳು ಹೇಳುತ್ತವೆ. ಇಂಥ ಪಾಲಿಸಿಗಳನ್ನು ಕೊಳ್ಳದಿರುವುದೇ ಲೇಸು.

ಪಾಲಿಸಿದಾರರು ಯಾವುದೇ ಕ್ಲೈಮ್ ಮಾಡದ ವರ್ಷದಲ್ಲಿ ನೋ ಕ್ಲೈಮ್ ಬೋನಸ್ ಸಿಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪಾಲಿಸಿಯು ಆಸ್ಪತ್ರೆಯ ಪೂರ್ವ ಖರ್ಚು ಮತ್ತು ಡಿಸ್ಚಾರ್ಜ್ ನಂತರದ ವೆಚ್ಚಗಳನ್ನು ಸಹ ಒಳಗೊಂಡಿರಬೇಕು. ಸುಧಾರಿತ ವೈದ್ಯಕೀಯ ಚಿಕಿತ್ಸಾ ವಿಧಾನಗಳಿಗೆ ಕ್ಲೈಮ್‌ಗಳನ್ನು ಪಾವತಿಸಬೇಕು. ವಿದೇಶದಲ್ಲಿ ಚಿಕಿತ್ಸೆ ಪಡೆಯಲು ಸೌಲಭ್ಯ ಕಲ್ಪಿಸಬೇಕು. ಹೆಚ್ಚು ನೆಟ್‌ವರ್ಕ್ ಆಸ್ಪತ್ರೆಗಳನ್ನು ಹೊಂದಿರುವ ವಿಮಾ ಕಂಪನಿಗಳಿಗೆ ಆದ್ಯತೆ ನೀಡಬೇಕು.

ಇದನ್ನೂ ಓದಿ: ಆರೋಗ್ಯ ವಿಮೆ ಇದೆ ಅಂತ ಆಸ್ಪತ್ರೆ ದಾಖಲಾಗುವ ಮುನ್ನ ಎಚ್ಚರ! ಸೋಂಕಿತ ವ್ಯಕ್ತಿಯ ಸಲಹೆ..

ABOUT THE AUTHOR

...view details