ಜಿನೆವಾ: ಸ್ವಿಟ್ಜರ್ಲೆಂಡ್‌ನ ಸೆಂಟ್ರಲ್ ಬ್ಯಾಂಕ್ ಗುರುವಾರ ಬಡ್ಡಿ ದರವನ್ನ 1/2 ಪಾಯಿಂಟ್ ಹೆಚ್ಚಿಸಿದೆ. ಸುಮಾರು 15 ವರ್ಷಗಳ ನಂತರ ಮೊದಲ ಬಾರಿಗೆ ಬಡ್ಡಿ ದರ ಹೆಚ್ಚಳ ಮಾಡಲಾಗಿದ್ದು, ವಿಶ್ವಾದ್ಯಂತ ಆಹಾರ ಮತ್ತು ಇಂಧನ ಬೆಲೆಗಳು ಹೆಚ್ಚುತ್ತಿರುವ ಕಾರಣ ಹಣದುಬ್ಬರದ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಏರಿಕೆ ಮಾಡಿದೆ.
ದರ ಏರಿಕೆ ಶುಕ್ರವಾರದಿಂದ ಜಾರಿಗೆ ಬರಲಿದೆ. ಸ್ಥಿರ ಕರೆನ್ಸಿ ಎಂದು ಪರಿಗಣಿಸಲಾದ ಸ್ವಿಸ್ ಫ್ರಾಂಕ್, ಮಾರುಕಟ್ಟೆಗಳಲ್ಲಿ ಯೂರೋ ಮತ್ತು ಅಮೆರಿಕ ಡಾಲರ್ ವಿರುದ್ಧ ಜಿಗಿದಿದೆ. ಸೈಟ್ ಡಿಪಾಸಿಟ್ ಮೇಲಿನ ದರವನ್ನು ಅರ್ಧ ಪಾಯಿಂಟ್‌ನಿಂದ 0.25 ಪ್ರತಿಶತಕ್ಕೆ ಹೆಚ್ಚಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.