ಕರ್ನಾಟಕ

karnataka

ETV Bharat / business

ಕಾಶ್ಮೀರದಲ್ಲಿ ಸುರಿದ ಆಲಿಕಲ್ಲು ಮಳೆ: ತೇವ ಹೆಚ್ಚಾಗಿ ನೆಲಕಚ್ಚಿದೆ ಸ್ಟ್ರಾಬೆರಿ ಬೆಳೆ - ಸ್ಟ್ರಾಬೆರಿ

ಸ್ಟ್ರಾಬೆರಿ ಕಟಾವಿಗೂ ಮುನ್ನವೇ ಮಳೆ ಸುರಿದು ರೈತರಿಗೆ ಸಂಕಷ್ಟ ತಂದೊಡ್ಡಿದೆ.

ನೆಲಕಚ್ಚಿದೆ ಸ್ಟ್ರಾಬೆರಿ ಬೆಳೆ
ನೆಲಕಚ್ಚಿದೆ ಸ್ಟ್ರಾಬೆರಿ ಬೆಳೆ

By

Published : May 30, 2023, 10:13 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) :ಸಾಮಾನ್ಯವಾಗಿ ಕಾಶ್ಮೀರದಲ್ಲಿ ಸ್ಟ್ರಾಬೆರಿ ಬೆಳೆಯನ್ನು ಏಪ್ರಿಲ್ ಆರಂಭದಿಂದ ಮೇ ಅಂತ್ಯದವರೆಗೆ ಹೊಲಗಳಲ್ಲಿ ಕಟಾವು ಮಾಡಲಾಗುತ್ತದೆ. ಈ ವರ್ಷವು ಕೂಡ ಉತ್ತಮ ಇಳುವರಿ ಬರುವ ಸಂತಸದಲ್ಲಿದ್ದ ರೈತರಿಗೆ ಆಲಿಕಲ್ಲು ಮಳೆ ಸುರಿದು ಗಾಯ ಮೇಲೆ ಬರೆ ಎಳೆದಂತಾಗಿದೆ. ಹೌದು, ಕೆಂಪಾಗಿ ಮಾಗಿದ ಸ್ಟ್ರಾಬೆರಿ ಬೆಳೆಯನ್ನು ಇನ್ನೇನು ಕಟಾವು ಮಾಡುವ ಹೊತ್ತಿಗೆ ಆಲಿಕಲ್ಲು ಮಳೆ ಸುರಿದು ಸಂಪೂರ್ಣ ಬೆಳೆ ನಾಶವಾಗಿ ಅಲ್ಲಿನ ರೈತರು ನಿರಾಶೆಗೊಂಡಿದ್ದಾರೆ.

ಸ್ಟ್ರಾಬೆರಿ ಕಟಾವಿಗೂ ಮುನ್ನವೇ ಮಳೆ ಸುರಿದು ರೈತರಿಗೆ ಸಂಕಷ್ಟ

ಈ ಬಗ್ಗೆ ಮಾತನಾಡಿರುವ ಶ್ರೀನಗರದ ಗಸ್ಸು ಗ್ರಾಮದ ಸ್ಟ್ರಾಬೆರಿ ಬೆಳೆಗಾರ, ಮಂಜೂರ್ ಅಹ್ಮದ್ ದಾರ್, ಮಳೆಯಿಂದಾಗಿ ಬೆಳೆ ನಾಶವಾಗಿ ಸುಮಾರು 20 ಪ್ರತಿಶತದಷ್ಟು ನಷ್ಟವಾಗಿದೆ. ರೈತರು ಈ ವರ್ಷ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದರು, ಆದರೆ, ಅಕಾಲಿಕ ಮಳೆಯು ಕಟಾವಿಗೆ ಮುನ್ನವೇ ಬೆಳೆ ಹಾನಿ ಮಾಡುವ ಮೂಲಕ ರೈತರ ಎಲ್ಲಾ ಭರವಸೆಗಳನ್ನು ಹುಸಿಗೊಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತಮ ಬೆಳೆ ಬಂದಿತ್ತು. ಆದರೆ ಮಳೆಯಿಂದಾಗಿ ಹಣ್ಣುಗಳು ಹಾಳಾಗಿದ್ದು, ಸಮಯಕ್ಕೆ ಸರಿಯಾಗಿ ಹಣ್ಣುಗಳನ್ನು ಮಂಡಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಈ ವೇಳೆ ಪ್ರತಿದಿನ ಇಲ್ಲಿಂದ ಸುಮಾರು 2000 ಕೆಜಿ ಸ್ಟ್ರಾಬೆರಿಗಳನ್ನು ಮಂಡಿಗಳಿಗೆ ಸಾಗಿಸಲಾಗುತ್ತದೆ ಎಂದು ಹೇಳಿದರು.

ಆಲಿಕಲ್ಲು ಮಳೆಯಿಮದಾಗಿ ಸ್ಟ್ರಾಬೆರಿ ಬೆಳೆ ನಾಶ

ಇದೇ ವೇಳೆ, ದಾರ್ ಅವರ ತಾಯಿ ಹಜರಾ ಮಾತನಾಡಿ, ನಾವು ವರ್ಷವಿಡೀ ಹೊಲದಲ್ಲಿ ಸ್ಟ್ರಾಬೆರಿಯನ್ನು ಬೆಳೆಯಲು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಸ್ಟ್ರಾಬೆರಿ ಬೆಳೆಯುವಾಗ ಸರಿಯಾಗಿ ಭೂಮಿಯನ್ನು ಸಿದ್ಧಪಡಿಸಿ, ಗೊಬ್ಬರವನ್ನು ಬೆರೆಸಬೇಕು, ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಚಿಮುಕಿಸಬೇಕು. ನಂತರ ಕಟಾವು ಮಾಡಿದ ಬೆಳೆಯನ್ನು ಪ್ಯಾಕ್ ಮಾಡಿ ಮಾರುಕಟ್ಟೆ ತೆಗೆದುಕೊಂಡು ಹೋಗಬೇಕು.

ಕೆಲವು ಖರೀದಿದಾರರು ಇಲ್ಲಿಗೆ ಖರೀದಿಸಲು ಬರುತ್ತಾರೆ. ಜ್ಯೂಸ್ ಮತ್ತು ಐಸ್ ಕ್ರೀಮ್ ಕಾರ್ಖಾನೆಗಳು, ಬೇಕರಿ ಮಾಲೀಕರು ನಮ್ಮಿಂದ ನೇರವಾಗಿ ಸ್ಟ್ರಾಬೆರಿ ಖರೀದಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅತಿವೃಷ್ಟಿಯಿಂದ ಬೆಳೆ ನೆಲಕಚ್ಚಿದೆ. ನಿರೀಕ್ಷಿತ ಪ್ರಮಾಣಕ್ಕಿಂತ ಲಾಭವಾಗಿಲ್ಲ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಬಳಿ ಪರಿಹಾರಕ್ಕಾಗಿ ಮನವಿ ಮಾಡಿದ್ದೇವೆ. ಆದರೆ ಅವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದರು.

ಭಾರತದಲ್ಲಿ ಮಹಾರಾಷ್ಟ್ರ ರಾಜ್ಯವು ಸ್ಟ್ರಾಬೆರಿ ಉತ್ಪಾದನೆಗೆ ಹೆಸರುವಾಸಿಯಾಗಿದೆ. ನಂತರ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಹಣ್ಣನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಭಾರತದಲ್ಲಿ ಸ್ಟ್ರಾಬೆರಿಯನ್ನು ವಾಣಿಜ್ಯ ಬೆಳೆಯಾಗಿ ಪ್ರಚಾರ ಮಾಡಲಾಗುತ್ತಿದೆ.

ಏಕೆಂದರೆ ಅಧಿಕೃತ ಅಂದಾಜಿನ ಪ್ರಕಾರ ಈ ಹಣ್ಣಿನಿಂದ ರೈತರು ವರ್ಷಕ್ಕೆ ಸರಾಸರಿ 3 ರಿಂದ 4 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಮತ್ತೊಂದು ಗಮನಿಸುವ ವಿಷಯವೆಂದರೆ ಸುಮಾರು 15 ವರ್ಷಗಳ ಹಿಂದೆ ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದ ಉಪನಗರದಲ್ಲಿರುವ ಗಸ್ಸು ಗ್ರಾಮದಲ್ಲಿ ಸ್ಟ್ರಾಬೆರಿ ಬೆಳೆಯನ್ನು ಪರಿಚಯಿಸಲಾಯಿತು. ಇಂದು ಸಾವಿರಕ್ಕೂ ಹೆಚ್ಚು ರೈತರು ಈ ಹಣ್ಣಿನ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ :ತಮಿಳುನಾಡಿನಲ್ಲೂ ಆವಿನ್​ vs ಅಮುಲ್​... ತಮಿಳರಿಂದ ಭಾರಿ ವಿರೋಧ!

ABOUT THE AUTHOR

...view details