ಬ್ಯಾಂಕಾಕ್:ಚಾಟ್ಜಿಪಿಟಿ ತಯಾರಕ ಓಪನ್ಎಐನ ಉಚ್ಚಾಟಿತ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ಕಂಪನಿಗೆ ಮರಳಿರುವುದು ಏಷ್ಯಾ ಷೇರು ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿದೆ. ಬುಧವಾರದ ವಹಿವಾಟಿನಲ್ಲಿ ಮುಂಬೈ ಮತ್ತು ಟೋಕಿಯೊ ಹೊರತುಪಡಿಸಿ ಇತರ ಪ್ರಮುಖ ಮಾರುಕಟ್ಟೆಗಳು ಕುಸಿತ ಕಂಡವು.
ಗರಿಷ್ಠ ಏರಿಕೆ ಕಾಣುತ್ತಾ ಸಾಗಿದ್ದ ವಾಲ್ಸ್ಟ್ರೀಟ್ ಷೇರುಗಳು ಕೂಡ ನಷ್ಟಕ್ಕೆ ಒಳಗಾದವು. ಅಮೆರಿಕದ ಫ್ಯೂಚರ್ಸ್ ಷೇರಿನಲ್ಲೂ ಬದಲಾವಣೆಯಾಗಿದ್ದು, ತೈಲ ಬೆಲೆಗಳು ಇಳಿದಿವೆ. ನಾಳೆ(ಗುರುವಾರ) ಅಮೆರಿಕ ಮತ್ತು ಜಪಾನ್ ಮಾರುಕಟ್ಟೆಗಳಿಗೆ ರಜಾದಿನಕ್ಕೂ ಮೊದಲು ವಹಿವಾಟು ಕುಸಿದಿದೆ.
ಓಪನ್-ಎಐನಲ್ಲಿ ಶೇ.56 ರಷ್ಟು ಹೂಡಿಕೆ ಮಾಡಿರುವ ಮತ್ತು ಅದರ ತಂತ್ರಜ್ಞಾನದ ಹಕ್ಕುಗಳನ್ನು ಹೊಂದಿರುವ ಮೈಕ್ರೋಸಾಫ್ಟ್, ಉಚ್ಚಾಟಿತ ಸಿಇಒ ಆಲ್ಟ್ಮ್ಯಾನ್ರನ್ನು ನೇಮಿಸಿಕೊಳ್ಳಲು ಮುಂದಾಗಿತ್ತು. ಬಳಿಕ ಓಪನ್ ಎಐ ನೌಕರರ ಒತ್ತಡ ಮತ್ತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ವಿರೋಧದಿಂದಾಗಿ ಓಪನ್ಎಐ ಆಲ್ಟ್ಮ್ಯಾನ್ರನ್ನು ಮರಳಿ ನೇಮಿಸಿಕೊಳ್ಳಲು ಒಪ್ಪಿದೆ. ಈ ಬಗ್ಗೆ ಸ್ವತಃ ಆಲ್ಟ್ಮ್ಯಾನ್ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆ ಷೇರು ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದೆ.
ನಷ್ಟಕ್ಕೀಡಾದ ಮಾರುಕಟ್ಟೆಗಳು:ಹಾಂಕಾಂಗ್ನ ಹ್ಯಾಂಗ್ಸೆಂಗ್ ಶೇಕಡಾ 0.4 ರಷ್ಟು ಕುಸಿದಿದೆ. ಶಾಂಘೈ ಕಾಂಪೋಸಿಟ್ ಸೂಚ್ಯಂಕವು ಶೇಕಡಾ 0.7 ರಷ್ಟು, ಆಸ್ಟ್ರೇಲಿಯಾದ SandP/ASX ಶೇಕಡಾ 0.1 ರಷ್ಟು, ತೈವಾನ್, ಥಾಯ್ಲೆಂಡ್ ಷೇರುಗಳೂ ಕುಸಿದವು. SandP 500 ಕಳೆದ 17 ದಿನಗಳಲ್ಲಿ ಮೂರನೇ ಬಾರಿಗೆ ನಷ್ಟಕ್ಕೆ ಶೇಕಡಾ 0.2 ಕುಸಿದಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಶೇಕಡಾ 0.2 ರಷ್ಟು, ನಾಸ್ಡಾಕ್ ಕೋಆರ್ಡಿನೇಷನ್ ಶೇಕಡಾ 0.6 ರಷ್ಟು ಕುಸಿತ ಕಂಡಿದೆ. ಜುಲೈ, ಅಕ್ಟೋಬರ್, ನವೆಂಬರ್ ತ್ರೈಮಾಸಿಕದಲ್ಲಿ ಗಳಿಕೆ ಮಾಡಿದ್ದ ಚಿಲ್ಲರೆ ವ್ಯಾಪಾರಿಗಳು ಮಿಶ್ರ ಅನುಭವ ಪಡೆದಿದ್ದಾರೆ. ಉತ್ತಮ ಲಾಭದ ಹೊರತಾಗಿಯೂ ಲೋವ್ಸ್ ಮಾರುಕಟ್ಟೆ ಶೇಕಡಾ 3.1 ರಷ್ಟು ಕುಸಿದಿದೆ. ಮಾರುಕಟ್ಟೆ ವಿಶ್ಲೇಷಕರ ಭವಿಷ್ಯವನ್ನ ಹುಸಿ ಮಾಡಿದ್ದ ಬೆಸ್ಟ್ ಬೈ ಶೇಕಡಾ 0.7 ರಷ್ಟು, ಡಿಕ್ನ ಸ್ಪೋರ್ಟಿಂಗ್ ಗೂಡ್ಸ್ 2.2 ರಷ್ಟು ನಷ್ಟ ಅನುಭವಿಸಿವೆ.