ಮುಂಬೈ : ಭಾರತೀಯ ಷೇರು ಮಾರುಕಟ್ಟೆಗಳು ಬುಧವಾರದಂದು (ಸೆಪ್ಟೆಂಬರ್ 6 ರಂದು) ಸತತ ನಾಲ್ಕನೇ ದಿನ ಸಕಾರಾತ್ಮಕ ಟಿಪ್ಪಣಿಯಲ್ಲಿ ಕೊನೆಗೊಂಡಿವೆ. ಸೆನ್ಸೆಕ್ಸ್ 100.26 ಪಾಯಿಂಟ್ ಅಥವಾ ಶೇಕಡಾ 0.15 ರಷ್ಟು ಏರಿಕೆ ಕಂಡು 65,880.52 ಕ್ಕೆ ತಲುಪಿದೆ ಮತ್ತು ನಿಫ್ಟಿ 36.10 ಪಾಯಿಂಟ್ ಅಥವಾ ಶೇಕಡಾ 0.18 ಏರಿಕೆ ಕಂಡು 19,611 ಕ್ಕೆ ತಲುಪಿದೆ.
ನಿಫ್ಟಿಯಲ್ಲಿ ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್, ದಿವಿಸ್ ಲ್ಯಾಬೊರೇಟರೀಸ್, ಭಾರ್ತಿ ಏರ್ಟೆಲ್, ಸಿಪ್ಲಾ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಹೆಚ್ಚು ಲಾಭ ಗಳಿಸಿದರೆ, ಆಕ್ಸಿಸ್ ಬ್ಯಾಂಕ್, ಹಿಂಡಾಲ್ಕೊ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್ ಮತ್ತು ಎನ್ಟಿಪಿಸಿ ನಷ್ಟ ಅನುಭವಿಸಿದವು. ವಲಯವಾರು ನೋಡುವುದಾದರೆ ಎಫ್ ಎಂಸಿಜಿ ಸೂಚ್ಯಂಕ ಶೇ 1ರಷ್ಟು ಏರಿಕೆ ಕಂಡರೆ, ಫಾರ್ಮಾ, ತೈಲ ಮತ್ತು ಅನಿಲ ಮತ್ತು ವಿದ್ಯುತ್ ಸೂಚ್ಯಂಕಗಳು ತಲಾ ಶೇ 0.5ರಷ್ಟು ಏರಿಕೆ ಕಂಡಿವೆ. ಮತ್ತೊಂದೆಡೆ, ಲೋಹ, ರಿಯಾಲ್ಟಿ ಮತ್ತು ಬ್ಯಾಂಕ್ ಸೂಚ್ಯಂಕಗಳು ಶೇಕಡಾ 0.4 ರಿಂದ 1 ರಷ್ಟು ಕುಸಿದವು.
ಇದನ್ನೂ ಓದಿ : 90 ಡಾಲರ್ ದಾಟಿದ ಕಚ್ಚಾತೈಲ ಬೆಲೆ; ಸೌದಿ ಅರೇಬಿಯಾದಿಂದ ಉತ್ಪಾದನೆ ಕಡಿತದ ಎಫೆಕ್ಟ್
ಸುಮಾರು 1869 ಷೇರುಗಳು ಲಾಭ ಗಳಿಸಿದವು ಮತ್ತು 1659 ಷೇರುಗಳು ಕುಸಿದವು. 142 ಷೇರುಗಳು ಬದಲಾಗಲಿಲ್ಲ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಒಂದೇ ರೀತಿಯ ವಹಿವಾಟಿನೊಂದಿಗೆ ಕೊನೆಗೊಂಡವು. ಮಿಶ್ರ ಜಾಗತಿಕ ಸೂಚನೆಗಳ ನಡುವೆ ಸೆಪ್ಟೆಂಬರ್ 6 ರ ಮುಂಜಾನೆಯ ವಹಿವಾಟಿನಲ್ಲಿ ಮಾರುಕಟ್ಟೆಯು ಸಮತಳದಿಂದಲೇ ಪ್ರಾರಂಭವಾಯಿತು. ಆರಂಭದಲ್ಲಿ ಸೆನ್ಸೆಕ್ಸ್ 49.99 ಪಾಯಿಂಟ್ ಅಥವಾ ಶೇಕಡಾ 0.08 ರಷ್ಟು ಏರಿಕೆ ಕಂಡು 65,830.25 ಕ್ಕೆ ತಲುಪಿತ್ತು ಮತ್ತು ನಿಫ್ಟಿ 14.20 ಪಾಯಿಂಟ್ ಅಥವಾ ಶೇಕಡಾ 0.07 ರಷ್ಟು ಏರಿಕೆ ಕಂಡು 19,589.10 ಕ್ಕೆ ತಲುಪಿದೆ.
ಭಾರತದ ಲಘು ಆಹಾರ ತಯಾರಕ ಕಂಪನಿ ಹಲ್ದಿರಾಮ್ ನಲ್ಲಿ ಕನಿಷ್ಠ 51 ಪ್ರತಿಶತದಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಕಂಪನಿಯು ಮಾತುಕತೆ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಷೇರುಗಳು ಶೇಕಡಾ 4.11 ರಷ್ಟು ಏರಿಕೆಯಾಗಿ 881.05 ರೂ.ಗೆ ತಲುಪಿವೆ.
ಭಾರತೀಯ ರೂಪಾಯಿ ಬುಧವಾರ 10 ಪೈಸೆ ಕುಸಿದು ಪ್ರತಿ ಡಾಲರ್ಗೆ 83.13 ಕ್ಕೆ ಕೊನೆಗೊಂಡಿತು. ಬುಧವಾರ ಮುಂಜಾನೆ ಭಾರತೀಯ ಕರೆನ್ಸಿ ಪ್ರತಿ ಡಾಲರ್ಗೆ 83.02 ರಲ್ಲಿ ಪ್ರಾರಂಭವಾಯಿತು.
ಇದನ್ನೂ ಓದಿ : ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಎಫ್ಡಿ; ಅಲ್ಪಾವಧಿ ಹೂಡಿಕೆಗಾಗಿ ಯಾವುದು ಬೆಸ್ಟ್?