ಕರ್ನಾಟಕ

karnataka

ETV Bharat / business

Stock market : ಸೆನ್ಸೆಕ್ಸ್ 168 & ನಿಫ್ಟಿ 38 ಪಾಯಿಂಟ್​ ಕುಸಿತ

ಭಾರತದ ಷೇರು ಮಾರುಕಟ್ಟೆ ಸೋಮವಾರ ಇಳಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿದೆ.

Stock markets snap record-breaking run on profit-taking
Stock markets snap record-breaking run on profit-taking

By ETV Bharat Karnataka Team

Published : Dec 18, 2023, 7:42 PM IST

ಮುಂಬೈ : ಕಳೆದ ವಾರದಲ್ಲಿ ದಾಖಲೆಯ ಏರಿಕೆ ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿ ಇಂದು ಇಳಿಕೆ ಕಂಡು ಬಂದ ನಂತರ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಕುಸಿದವು. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 168.66 ಪಾಯಿಂಟ್ಸ್ ಅಥವಾ ಶೇಕಡಾ 0.24 ರಷ್ಟು ಕುಸಿದು 71,315.09 ರಲ್ಲಿ ಕೊನೆಗೊಂಡಿದೆ. ನಿಫ್ಟಿ 38 ಪಾಯಿಂಟ್ ಅಥವಾ ಶೇಕಡಾ 0.18 ರಷ್ಟು ಕುಸಿದು 21,418.65 ಕ್ಕೆ ತಲುಪಿದೆ.

ಸೆನ್ಸೆಕ್ಸ್ ಷೇರುಗಳ ಪೈಕಿ ಪವರ್ ಗ್ರಿಡ್, ಐಟಿಸಿ, ಜೆಎಸ್​ಡಬ್ಲ್ಯೂ ಸ್ಟೀಲ್, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಮಹೀಂದ್ರಾ & ಮಹೀಂದ್ರಾ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ. ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಎಚ್​ಸಿಎಲ್ ಟೆಕ್, ಹಿಂದೂಸ್ತಾನ್ ಯೂನಿಲಿವರ್, ಬಜಾಜ್ ಫೈನಾನ್ಸ್ ಮತ್ತು ಮಾರುತಿ ಲಾಭ ಗಳಿಸಿದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಶುಕ್ರವಾರ 9,239.42 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸುವ ಮೂಲಕ ಖರೀದಿಯ ವೇಗವನ್ನು ಮುಂದುವರಿಸಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ - ಅಂಶಗಳು ತಿಳಿಸಿವೆ.

ಏಷ್ಯಾದ ಮಾರುಕಟ್ಟೆಗಳಲ್ಲಿ, ಟೋಕಿಯೊ, ಶಾಂಘೈ ಮತ್ತು ಹಾಂಕಾಂಗ್​ ಕೆಳಮಟ್ಟದಲ್ಲಿ ಕೊನೆಗೊಂಡರೆ, ಸಿಯೋಲ್ ಏರಿಕೆಯಲ್ಲಿ ಕೊನೆಗೊಂಡಿತು. ಯುರೋಪಿಯನ್ ಮಾರುಕಟ್ಟೆಗಳು ಮಿಶ್ರ ಟಿಪ್ಪಣಿಯಲ್ಲಿ ವಹಿವಾಟು ನಡೆಸುತ್ತಿವೆ. ಜಾಗತಿಕ ತೈಲ ಬೆಂಚ್​ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.29 ರಷ್ಟು ಇಳಿದು ಬ್ಯಾರೆಲ್​ಗೆ 76.33 ಡಾಲರ್​ಗೆ ತಲುಪಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್ (ಡಬ್ಲ್ಯುಟಿಐ) ಕ್ರೂಡ್ ಫ್ಯೂಚರ್ಸ್ ಶೇಕಡಾ 0.50 ರಷ್ಟು ಕುಸಿದು 71.07 ಡಾಲರ್​ಗೆ ತಲುಪಿದೆ.

ಆಮದುದಾರರಿಂದ ಡಾಲರ್ ಬೇಡಿಕೆ ಮತ್ತು ದೇಶೀಯ ಷೇರು ಪೇಟೆಗಳಲ್ಲಿನ ದೌರ್ಬಲ್ಯದ ಮಧ್ಯೆ ಭಾರತೀಯ ರೂಪಾಯಿ ಸೋಮವಾರ ಅಮೆರಿಕನ್​ ಡಾಲರ್ ಎದುರು 6 ಪೈಸೆ ಕುಸಿದಿದೆ. ರೂಪಾಯಿ ತನ್ನ ಹಿಂದಿನ 83.00 ಕ್ಕೆ ಹೋಲಿಸಿದರೆ ಡಾಲರ್ ಎದುರು 83.06 ಕ್ಕೆ ಕೊನೆಗೊಂಡಿತು. ಶುಕ್ರವಾರದಂದು ರೂಪಾಯಿ 33 ಪೈಸೆ ಏರಿಕೆಯಾಗಿ ಡಾಲರ್​ ಎದುರು 83.00 ರಲ್ಲಿ ಸ್ಥಿರವಾಗಿತ್ತು. ರೂಪಾಯಿ ತನ್ನ ನ್ಯಾಯಯುತ ಮೌಲ್ಯದತ್ತ ಸಾಗುತ್ತಿದೆ ಎಂದು ವಿಶ್ಲೇಷಕರು ಅಂದಾಜು ಮಾಡಿದ್ದಾರೆ. ಆರು ಕರೆನ್ಸಿಗಳ ವಿರುದ್ಧ ಡಾಲರ್​ನ ಮೌಲ್ಯವನ್ನು ಸೂಚಿಸುವ ಡಾಲರ್ ಸೂಚ್ಯಂಕವು ಶೇಕಡಾ 0.05 ರಷ್ಟು ಕುಸಿದು 102.50 ರಲ್ಲಿ ವಹಿವಾಟು ನಡೆಸುತ್ತಿದೆ.

ಇದನ್ನೂ ಓದಿ : ಜನವರಿಯಲ್ಲಿ ಬ್ಯಾಂಕುಗಳೊಂದಿಗೆ ಸಂಸದೀಯ ಸಮಿತಿ ಸಭೆ; ಮತ್ತೆ ಮುನ್ನೆಲೆಗೆ ಬಂದ ವಿಲೀನ ವಿಚಾರ

ABOUT THE AUTHOR

...view details