ನವದೆಹಲಿ: ಯಾವುದೇ ಪರ್ಯಾಯ ತಲುಪುವ ಸ್ಥಳವಿಲ್ಲದೇ ಹಾರಾಟ ನಡೆಸುವ ವಾಣಿಜ್ಯ ವಿಮಾನ ಕಾರ್ಯಾಚರಣೆ ತಿಳಿದುಕೊಳ್ಳಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್(ಎಸ್‌ಒಪಿ) ರೂಪಿಸುವಂತೆ ಎಲ್ಲಾ ವಿಮಾನ ನಿರ್ವಾಹಕರಿಗೆ ಕೇಳಿದೆ.
ಸುತ್ತೋಲೆಯಲ್ಲೇನಿದೆ?: ಫೆ. 20ರಂದು ಈ ಸಂಬಂಧ ಸುತ್ತೋಲೆ ಹೊರಡಿಲಾಗಿದೆ. ಕಾರ್ಯಾಚರಣೆಗಳನ್ನು ಏರೋಡ್ರಾಮ್ ಪ್ರಕಾರ ಸ್ಥಾಪಿಸಬೇಕು. ಯಾವುದೇ ಪರ್ಯಾಯ ತಲುಪುವ ನಿರ್ದಿಷ್ಟ ಸ್ಥಳವಿಲ್ಲದೇ ಹಾರಾಟ ನಡೆಸುವ ಕಾರ್ಯವಿಧಾನ ತಿಳಿದುಕೊಳ್ಳಲು ವಿಮಾನ ಕಾರ್ಯಚಾರಣೆ ನಡೆಸುವ ಸಿಬ್ಬಂದಿಗೆ ಮಾರ್ಗದರ್ಶನ ನೀಡಬೇಕು. ಇದಕ್ಕೆ ಡಿಜಿಸಿಎ ಅನುಮೋದಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಜಾಗತಿಕ ಆರ್ಥಿಕತೆ ವೇಗವಾಗಿ ಬದಲಾಗುತ್ತಿದ್ದು, ಅಂತಾರಾಷ್ಟ್ರೀಯ ವಾಯು ಸಾರಿಗೆ ಉದ್ಯಮ ಹೊಸ ಟ್ರೆಂಡ್ ಅನ್ನು ಬೇಗ ಅಳವಡಿಸಿಕೊಳ್ಳುತ್ತಿದೆ. ಇದು ಸ್ಪರ್ಧಾತ್ಮಕ ಮಾರುಕಟ್ಟೆ ಪರಿಸ್ಥಿತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.
ಪರಿಣಾಮಕಾರಿ ಕಾರ್ಯಾಚರಣೆಗೆ ಒತ್ತು: ವಾಯುಯಾನದಲ್ಲಿ ತಂತ್ರಜ್ಞಾನದ ವಿಶ್ವಾಸಾರ್ಹತೆ ನಿರಂತರವಾಗಿ ಹೆಚ್ಚುತ್ತಿದೆ. ಆರ್ಥಿಕ ಮತ್ತು ಪರಿಸರ ದೃಷ್ಟಿಯಿಂದ ಇಂಧನವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ನಿರ್ವಾಹಕರನ್ನು ಒತ್ತಾಯಿಸುವುದನ್ನು ಮುಂದುವರಿಸುತ್ತದೆ. ಪರಿಣಾಮವಾಗಿ, ಎಲ್ಲಾ ಆಪರೇಟರ್‌ಗಳು, ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳನ್ನು ಸದುಪಯೋಗ ಪಡಿಸಿಕೊಳ್ಳುವವರು ಮತ್ತು ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸಲು ಹೊಸ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವವರು ಸೇರಿದಂತೆ, ತಮ್ಮ ಹೂಡಿಕೆಯ ಮೇಲೆ ಲಾಭವನ್ನು ಪಡೆಯುವ ಅವಕಾಶವನ್ನು ನೀಡಬೇಕು ಎಂದು ತಿಳಿಸಲಾಗಿದೆ. ಈ ಸುತ್ತೋಲೆಯ ಮೂಲಕ ಯಾವುದೇ ನಿರ್ದಿಷ್ಟ ಸ್ಥಳವಿಲ್ಲದೇ ವಿಮಾನಗಳ ಹಾರಾಟ ನಿರ್ವಹಿಸಲಿ ಪ್ರತಿ ಏರೋಡ್ರೋಮ್‌ಗೆ ನಿಗದಿತ ಕಾರ್ಯವಿಧಾನವನ್ನು ಸ್ಥಾಪಿಸಬೇಕು ಎಂದು ಡಿಜಿಸಿಎ ಸೂಚನೆ ನೀಡಿದೆ.