ಕರ್ನಾಟಕ

karnataka

ETV Bharat / business

ಹೆಚ್ಚುತ್ತಿರುವ ಇಎಂಐಗಳನ್ನು ನಿಭಾಯಿಸಲು ಇಲ್ಲಿವೆ ಸುಲಭ ಉಪಾಯಗಳು! - ನಿಮ್ಮ ಮಾಸಿಕ ಗಳಿಕೆಯ ಒಂದು ಭಾಗವನ್ನು ಮೀಸಲಿಡಬೇಕು

ಬಡ್ಡಿ ದರ ಏರಿಕೆಯ ಪರಿಣಾಮ ಇಎಂಐಗಳ ದರದಲ್ಲಿ ಹೆಚ್ಚಾಗಲಿದೆ. ಈ ಉದ್ದೇಶಕ್ಕಾಗಿ ನಿಮ್ಮ ಮಾಸಿಕ ಗಳಿಕೆಯ ಒಂದು ಭಾಗವನ್ನು ಮೀಸಲಿಡಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ನೀವು ಸಿದ್ಧತೆ ಮಾಡಿಕೊಳ್ಳಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಈಗಿನ ವ್ಯವಹಾರಗಳನ್ನು ಸರಿದೂಗಿಸಿಕೊಳ್ಳಬೇಕಾಗಿದೆ.

Smart ways to reduce EMI burden
ಹೆಚ್ಚುತ್ತಿರುವ ಇಎಂಐಗಳನ್ನು ನಿಭಾಯಿಸಲು ಇಲ್ಲಿವೆ ಸುಲಭ ಉಪಾಯಗಳು!

By

Published : Jun 6, 2022, 7:25 AM IST

Updated : Jun 6, 2022, 7:33 AM IST

ಹೈದರಾಬಾದ್​: ರೆಪೋ ದರ ಏರಿಕೆ ಎಂದರೆ ಸಾಲದ ಬಡ್ಡಿ ದರ ಏರಿಕೆ ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ದೇಶದಲ್ಲಿ ಹಣದುಬ್ಬರವು ಶೇಕಡಾ ಆರರ ಆಸುಪಾಸಿನಲ್ಲಿದೆ. ಹೀಗಾಗಿ ಏರುತ್ತಿರುವ ಬೆಲೆ ಏರಿಕೆ ನಿಯಂತ್ರಣಕ್ಕೆ ಆರ್​ಬಿಐ ರೆಪೋ ದರ ಏರಿಕೆ ಮಾಡಿದೆ. ಕಳೆದ ಕೆಲ ವರ್ಷಗಳಿಂದ ಆರ್​ಬಿಐ ರೆಪೋ ದರದಲ್ಲಿ ಏರಿಕೆ ಮಾಡಿರಲಿಲ್ಲ. ಜನರ ಕೈಯಲ್ಲಿ ಹಣದ ಹರಿವು ಹೆಚ್ಚಾಗಲು ಇದು ಒಂದು ಕಾರಣವಾಗಿತ್ತು.

ಇದೀಗ ರೆಪೋ ದರ ಏರಿಕೆ ಮಾಡಿರುವುದರಿಂದ ಸಹಜವಾಗೇ ಸಾಲದ ಮೇಲಿನ ಬಡ್ಡಿದರಗಳು ಏರಿಕೆ ಕಂಡಿವೆ. ಸಾಲಗಾರರು ಉಳಿತಾಯ ಮತ್ತು ಹೂಡಿಕೆ ಯೋಜನೆಗಳನ್ನು ಯೋಜಿಸುವ ಮೂಲಕ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿರಬೇಕಿದೆ. ಸ್ಥಿರ ಠೇವಣಿದಾರರಿಗೆ ಇದು ವರದಾನವಾಗಿದ್ದರೂ, ಸಾಲಗಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ ಮಾಡಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಇತರ ವೆಚ್ಚಗಳು ಆತಂಕಕಾರಿ ಅಂಶಗಳಾಗಿ ಪರಿಣಮಿಸಿದ್ದು, ಜೀವನ ನಡೆಸುವುದು ಕಷ್ಟ ಕಷ್ಟ ಎಂಬಂತಾಗಿದೆ. ಈಗ, ಹಣಕಾಸು ಸಂಸ್ಥೆಗಳು ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ. ಹೀಗಾಗಿ ಸಹಜವಾಗೇ ಸಾಲದ ಮೇಲಿನ EMI ದರ ಹೆಚ್ಚಾಗುವಂತೆ ಮಾಡಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕದಿದ್ದರೆ, ಮುಂದಿನ ದಿನಗಳಲ್ಲಿ ರೆಪೋ ದರಗಳು ಮತ್ತಷ್ಟು ಏರಿಕೆಯಾಗುವ ಸೂಚನೆಗಳಿವೆ.

ಖರ್ಚುಗಳನ್ನು ನಿಗ್ರಹಿಸುವುದು ಹೇಗೆ?:ಬಡ್ಡಿ ದರ ಏರಿಕೆಯ ಪರಿಣಾಮ ಇಎಂಐಗಳ ದರದಲ್ಲಿ ಹೆಚ್ಚಾಗಲಿದೆ. ಈ ಉದ್ದೇಶಕ್ಕಾಗಿ ನಿಮ್ಮ ಮಾಸಿಕ ಗಳಿಕೆಯ ಒಂದು ಭಾಗವನ್ನು ಮೀಸಲಿಡಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ನೀವು ಸಿದ್ಧತೆ ಮಾಡಿಕೊಳ್ಳಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಈಗಿನ ವ್ಯವಹಾರಗಳನ್ನು ಸರಿದೂಗಿಸಿಕೊಳ್ಳಬೇಕಾಗಿದೆ.

ಭಾಗಶಃ ಮರುಪಾವತಿ:ಸಾಮಾನ್ಯವಾಗಿ ಬ್ಯಾಂಕುಗಳು EMI ಗಳನ್ನು ಹೆಚ್ಚಿಸುವ ಬದಲು ಸಾಲದ ಅವಧಿಯನ್ನು ವಿಸ್ತರಿಸುತ್ತವೆ. ಆದ್ದರಿಂದ, ಇದು ಸದ್ಯಕ್ಕೆ ನಿಮ್ಮ ಮಾಸಿಕ ಬಜೆಟ್ ಮೇಲೆ ಹೊರೆಯಾಗುವುದಿಲ್ಲ. ಆದರೆ, ಅವಧಿ ವಿಸ್ತರಿಸುವುದರಿಂದ ಬಡ್ಡಿಯ ಹೊರೆ ಪ್ರಮಾಣಾನುಗುಣವಾಗಿ ಹೆಚ್ಚಾಗುತ್ತದೆ ಎಂಬುದನ್ನು ನಾವು ಮರೆಯಬಾರದು.

ವಾಸ್ತವವಾಗಿ EMI ಗಳನ್ನು ಹೆಚ್ಚಿಸಲು ನೀವು ಬ್ಯಾಂಕ್‌ಗಳನ್ನು ಕೇಳಬಹುದು. ನೀವು ಅವಧಿ ವಿಸ್ತರಿಸಲು ಬಯಸಿದರೆ, ಬಡ್ಡಿ ಹೊರೆ ಕಡಿಮೆ ಮಾಡಲು ಪ್ರತಿ ವರ್ಷ ಹೆಚ್ಚುವರಿ EMI ಅನ್ನು ಪಾವತಿಸುವುದು ಉತ್ತಮ. ಬೋನಸ್‌ಗಳು, ತೆರಿಗೆ ಮರುಪಾವತಿಗಳು ಅಥವಾ ಖರ್ಚುಗಳನ್ನು ನಿಗ್ರಹಿಸಿದ ನಂತರ ಉಳಿಸಿದ ಹಣದ ಮೂಲಕ ನೀವು ಮಾಡುವ ಹೆಚ್ಚುವರಿ ಗಳಿಕೆಯ ಮೂಲಕ ನೀವು ಹೀಗೆ ಮಾಡಬಹುದು. ಈ ಮೂಲಕ, ನಿಮ್ಮ ಸಾಲವನ್ನು ನೀವು ಬೇಗನೆ ಕಟ್ಟಲು ಸಾಧ್ಯವಾಗುತ್ತದೆ.

ಸಾಲದ ವರ್ಗಾವಣೆ: ಇಎಂಐ ನಿಮ್ಮ ಪಾವತಿ ಸಾಮರ್ಥ್ಯ ಮೀರುತ್ತಿದ್ದರೆ, ನಿಮ್ಮ ಸಾಲವನ್ನು ಪುನರ್​​ ರಚಿಸಲು ನೀವು ಬ್ಯಾಂಕ್ ಕೇಳಬಹುದು. ನಂತರ ಬ್ಯಾಂಕ್ ನಿಮಗೆ ಹೊಸ ಮತ್ತು ಕೈಗೆಟುಕುವ EMI ಆಯ್ಕೆಯನ್ನು ನೀಡುತ್ತದೆ. ಇಲ್ಲವಾದರೆ, ನೀವು ಕಡಿಮೆ ಬಡ್ಡಿ ದರಗಳೊಂದಿಗೆ ಸಾಲಗಳನ್ನು ನೀಡುವ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ನಂತರ ಸಾಲವನ್ನು ವರ್ಗಾಯಿಸಬೇಕು. ಅದು ನಿಮ್ಮ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಆಯಕಟ್ಟಿನ ಹೂಡಿಕೆ: ಭವಿಷ್ಯದಲ್ಲಿ ಬಡ್ಡಿದರಗಳು ಹೆಚ್ಚಾಗುತ್ತವೆ ಎಂಬ ಅರಿತುಕೊಳ್ಳುವುದು ಅತಿ ಅವಶ್ಯಕವಾಗಿದ್ದು, ಇದರ ಆಧಾರದ ಮೇಲೆ ಮುಂದಿನ ಜೀವನ ನಿರ್ವಹಣೆ ಹಾಗೂ ಆರ್ಥಿಕ ಸಬಲತೆಗಾಗಿ ಯೋಜನೆ ರೂಪಿಸಿಕೊಳ್ಳಬೇಕಿದೆ. ಹೆಚ್ಚುವರಿ ಬಡ್ಡಿದರಗಳನ್ನು ನಿಭಾಯಿಸಲು ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಪ್ರಾರಂಭಿಸಬೇಕು.

ಉದಾಹರಣೆಗೆ, ನಿಮ್ಮ ಅಡಮಾನದ ಮೇಲೆ ನೀವು ಶೇ 6.5 ಬಡ್ಡಿದರವನ್ನು ಪಾವತಿಸುತ್ತಿದ್ದೀರಿ ಎಂದು ತಿಳಿದುಕೊಳ್ಳುವುದಾದರೆ, ಅದು ಈಗ ಶೇ 6.9 ರಷ್ಟು ಆಗಲಿದೆ ಎಂದು ಭಾವಿಸುವುದಾದರೆ, ಹೆಚ್ಚುವರಿ 0.4 ರಷ್ಟು ಅಗತ್ಯವಿರುವ ಮೊತ್ತವನ್ನು ಅಲ್ಪಾವಧಿಯ ಸಾಲ ನಿಧಿಗಳಲ್ಲಿ ಹೂಡಿಕೆ ಮಾಡಬೇಕು. ಬಡ್ಡಿದರಗಳು ಹೆಚ್ಚಾದಾಗ ಈ ಹಣವನ್ನು ಬಳಸಿಕೊಳ್ಳಬಹುದು ಅಥವಾ ಈ ಹೂಡಿಕೆಯನ್ನು ಇತರ ಪ್ರಮುಖ ವೆಚ್ಚಗಳಿಗೆ ಬಳಸಿಕೊಳ್ಳಬಹುದು.

ಹೆಚ್ಚಿನ ಬಡ್ಡಿದರದ ಸಾಲಗಳು. ಒಂದಕ್ಕಿಂತ ಹೆಚ್ಚು ಸಾಲ ಇದ್ದರೆ ಆಗ ನಾವು ಎಚ್ಚರಿಕೆಯಿಂದ ಇರಬೇಕು. ಅದಕ್ಕಾಗಿ ಉತ್ತಮ ಯೋಜನೆಯನ್ನು ರೂಪಿಸಿಕೊಳ್ಳಬೇಕು. ನಿಮ್ಮ ಸಾಲಗಳನ್ನು ತೀರಿಸಲು ಉತ್ತಮ ಪ್ಲಾನ್​ ಮಾಡಿಕೊಂಡು, ನಿರ್ದಿಷ್ಟವಾಗಿ, ಹೆಚ್ಚಿನ ಬಡ್ಡಿ ದರದ ಸಾಲಗಳನ್ನು ತ್ವರಿತವಾಗಿ ತೀರಿಸುವಂತೆ ನೋಡಿಕೊಳ್ಳಬೇಕು.

ಇದನ್ನು ಓದಿ:ಭಾರತ-ವಿಯೆಟ್ನಾಂ ರಾಜತಾಂತ್ರಿಕಗೆ 50 ವರ್ಷ : ಭಾರಿ ನಿರೀಕ್ಷೆ ಹುಟ್ಟು ಹಾಕಿದ ಸಚಿವ ರಾಜನಾಥ್​​​ ಪ್ರವಾಸ

Last Updated : Jun 6, 2022, 7:33 AM IST

For All Latest Updates

ABOUT THE AUTHOR

...view details