ಕ್ಷಣ ಮಾತ್ರದಲ್ಲಿ ಸಣ್ಣ ಮೊತ್ತದ ಸಾಲ ನೀಡಲು ಅಣಬೆ ರೀತಿಯಲ್ಲಿ ಹಲವು ಹೊಸ ಸಂಸ್ಥೆಗಳು ಮತ್ತು ಡಿಜಿಡಲ್ ಆ್ಯಪ್ಗಳು ಹುಟ್ಟಿಕೊಂಡಿವೆ. ಇಂತಹವುಗಳನ್ನು ನಂಬಿ ಸಣ್ಣ ಮೊತ್ತದ ಸಾಲ ಪಡೆಯುವ ಅನೇಕ ಜನರು ಅತಿ ಹೆಚ್ಚು ಬಡ್ಡಿದರ, ಹೆಚ್ಚಿನ ಕಂತು ಮತ್ತಿತರ ದೊಡ್ಡ ತೊಂದರೆಗಳ ಬಗ್ಗೆ ಅರಿವಿಲ್ಲದೇ ಸಿಲುಕುತ್ತಾರೆ.
ಮಾನಸಿಕ ಹಿಂಸೆ ನೀಡುವ ಇಂತಹ ಸಾಲದ ಸುಳಿಯಲ್ಲಿ ಸಂತ್ರಸ್ತರು ಬೀಳಲು ಪ್ರಮುಖ ಕಾರಣ ಅಕ್ರಮ ಸಾಲ ಸಂಸ್ಥೆಗಳು. ಈ ಹಿನ್ನೆಲೆಯಲ್ಲಿ ಸಾಲ ಪಡೆಯುವಾಗ ಅಗತ್ಯ ಮತ್ತು ಅನಗತ್ಯ ಅಂಶಗಳ ಬಗ್ಗೆ ಗಮನಹರಿಸಿ. ತುರ್ತು ಹಣದ ಸಾಲ ಪಡೆಯುವ ಸಂದರ್ಭದಲ್ಲಿ ಸಾಕಷ್ಟು ಜಾಗ್ರತೆವಹಿಸಬೇಕು. ಕೋವಿಡ್-19 ನಂತರ ಅನೇಕರು ಆದಾಯದ ಮೂಲಕ ಕಳೆದುಕೊಂಡಿದ್ದು, ಆರ್ಥಿಕ ಅವಶ್ಯಕತೆ ಪಡೆಯುವವರ ಸಂಖ್ಯೆ ಹೆಚ್ಚಳಗೊಂಡಿದೆ.
ಇಂತಹ ಸಾಲ ಸಂಸ್ಥೆಗಳು ಇಂತಹ ಜನರನ್ನು ಬಂಡವಾಳವಾಗಿಸಿಕೊಂಡು, ಅನಧಿಕೃತವಾಗಿ ಸಾಲ ನೀಡುತ್ತಿವೆ. ಮೂರು ಸಾವಿರದಿಂದ 3 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತಿದೆ. ಬಳಿಕ ಈ ಸಂಸ್ಥೆ ಅಥವಾ ಆ್ಯಪ್ಗಳು ಸಾಲದಾತರಿಗೆ ಬಡ್ಡಿರೂಪದಲ್ಲಿ ಸಾಕಷ್ಟು ಹಿಂಸೆ ನೀಡುತ್ತಿದೆ. ಸಾಲ ಪಡೆಯುವ ವೇಳೆ ಸಾಲದಾತರು ಈ ಕಾರಣದಿಂದ ಸಂಸ್ಥೆ ಮತ್ತು ಆ್ಯಪ್ಗಳ ಪೂರ್ವ ಪರಿಶೀಲನೆ ನಡೆಸಬೇಕಿದೆ.
ಭಾರತದಲ್ಲಿ ಆರ್ಬಿಐ ಪ್ರಮಾಣೀಕರಿಸಿದ ಆರ್ಥಿಕ ಸಂಸ್ಥೆಗಳು ಮಾತ್ರ ಸಾಲ ನೀಡಬಹುದಾಗಿದೆ. ಡಿಜಿಟಲ್ ಲೋನ್ನಲ್ಲಿ ಪಡೆಯುವಾಗಲೂ ಸಹ ಈ ಆ್ಯಪ್ಗಳು ಆರ್ಬಿಐ ಪ್ರಮಾಣೀಕೃತವೇ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಬೇಕಿದೆ. ಸಂಸ್ಥೆಗಳ ರಿಜಿಸ್ಟರ್ ನಂಬರ್ಗಳನ್ನು ಆರ್ಬಿಐ ವೆಬ್ಸೈಟ್ ಮೂಲಕ ಪರೀಕ್ಷಿಸಬಹುದು. ಸಾಲ ನೀಡುವಾಗ ನಮ್ಮ ಕೆವೈಸಿ ನೀಡುವ ಹಾಗೇ ಸಾಲದಾತರೂ ಅದರ ಪರಿಶೀಲಿಸಬೇಕು.
ಈಗಿನ ದಿನಗಳಲ್ಲಿ ಸಾಲ ನೀಡುವ ಆ್ಯಪ್ಗಳು ಕ್ರೆಡಿಟ್ ಸ್ಕೋರ್ ಅಥವಾ ಆದಾಯದ ಪ್ರೂಫ್ಗಳನ್ನು ಸಲ್ಲಿಸುವುದು ಬೇಡ ಎಂಬ ಸಂದೇಶವನ್ನು ರವಾನಿಸುತ್ತವೆ. ಈ ರೀತಿಯ ಆ್ಯಪ್ಗಳು ಖಂಡಿತವಾಗಿ ವಂಚನೆ ಜಾಲವಾಗಿರುತ್ತದೆ. ಇದು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಕದಿಯುತ್ತವೆ. ಈ ಹಿನ್ನೆಲೆಯಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಎಲ್ಲರ ಜೊತೆ ಹಂಚಿಕೊಳ್ಳಬೇಡಿ. ಕೆಲವೊಮ್ಮೆ ಅವರು ಸಾಲ ನೀಡುವ ಸಂಸ್ಥೆಗಳಿಂದ ಕರೆ ಮಾಡಿರುವುದಾಗಿ ತಿಳಿಸಿ ನಿಮ್ಮ ಬ್ಯಾಂಕ್ ಖಾತೆ ನಂಬರ್, ಕ್ರೆಡಿಟ್, ಡೆಬಿಟ್,ಕಾರ್ ನಂಬರ್ ಸೇರಿದಂತೆ ಎಲ್ಲಾ ಮಾಹಿತಿಯನ್ನೂ ಪಡೆಯುತ್ತವೆ. ಇಂತಹವುಗಳಿಗೆ ಅಪ್ಪಿ-ತಪ್ಪಿ ಮಾಹಿತಿ ನೀಡಬೇಡಿ. ಅಲ್ಲದೇ, ನಿಮ್ಮ ಖಾತೆಯಲ್ಲಿ ಹಣ ಇಡುವುದಾಗಿ ತಿಳಿಸಿ, ಪಿನ್ ಮತ್ತು ಒಟಿಪಿಯನ್ನು ಇವು ಪಡೆಯುತ್ತವೆ. ಹೀಗಾಗಿ ಎಚ್ಚರವಹಿಸುವುದು ಅವಶ್ಯಕ.
ಸಂಸ್ಥೆಗಳು ಸಾಲ ನೀಡುವ ಮುನ್ನ ಸಂಸ್ಥೆಯ ನೀತಿ ನಿಯಮಗಳನ್ನು ತಿಳಿಸಬೇಕು ಎಂದು ಆರ್ಬಿಐ ಮಾರ್ಗದರ್ಶನ ನೀಡಿದೆ. ಆದರೆ, ಕೆಲವು ಮೋಸದ ಆ್ಯಪ್ಗಳು ಈ ನಿಯಮವನ್ನು ಪಾಲಿಸುವುದಿಲ್ಲ. ಅವು ಅತಿ ಹೆಚ್ಚಿನ ಬಡ್ಡಿ ಮತ್ತು ಹೆಚ್ಚಿನ ಕಂತನ್ನು ವಿಧಿಸುತ್ತದೆ. ಸಾಲ ಪಡೆಯುವ ಮುನ್ನವೇ ಈ ಬಗ್ಗೆ ಪರಿಶೀಲನೆ ನಡೆಸಬೇಕು.
ಸಾಲ ನೀಡುವ ಆ್ಯಪ್ಗಳ ವಿಳಾಸ ಮತ್ತು ಯಾವ ಬ್ಯಾಂಕ್ನೊಂದಿಗೆ ಅವರು ಸಂಬಂಧ ಹೊಂದಿದ್ದಾರೆ ಎಂಬುದು ಸಾಲದಾತರು ಅರಿಯಬೇಕು. ವೆಬ್ಸೈಟ್ ಇಲ್ಲದ ಡಿಜಿಟಲ್ ಆ್ಯಪ್ಗಳು ಅನುಮಾನಾಸ್ಪದವಾಗಿರುತ್ತವೆ. ಇವು ಕೆವೈಸಿ ಬಗ್ಗೆ ನಂಬಿಕೆ ಹೊಂದಿರುವುದಿಲ್ಲ. ಸಾಲ ನೀಡುವ ಮುನ್ನ ಅವು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ, ಬ್ಯಾಂಕ್ ಅಥವಾ ಎಬಿಎಫ್ಸಿ ಸಾಲ ನೀಡುವ ಮುನ್ನ ಕೆಲವಕ್ಕೆ ಶುಲ್ಕ ಹೊಂದಿರುತ್ತವೆ.
ಇದನ್ನೂ ಓದಿ:ವೈಯಕ್ತಿಕ ಸಾಲ ತುರ್ತು ಸಂದರ್ಭಕ್ಕೆ ಮಾತ್ರ, ಭೋಗ ಜೀವನಕ್ಕಿದು ಮಾರಕ