ಹೈದರಾಬಾದ್:ನಾವು ಗಳಿಸಿದ್ದೆಲ್ಲವನ್ನೂ ಖರ್ಚು ಮಾಡಿದರೆ ನಮ್ಮ ಭವಿಷ್ಯವೇನು?. ಆರ್ಥಿಕ ಭದ್ರತೆ ಮತ್ತು ಸ್ವಂತ ಮನೆಯಂತಹ ಕನಸುಗಳನ್ನು ನಾವು ಹೇಗೆ ಸಾಧಿಸಬಹುದು?. ಪ್ರತಿಯೊಬ್ಬರೂ ಈ ಬಗ್ಗೆ ಒಂದಿಲ್ಲ ಒಂದು ಬಾರಿ ಯೋಚಿಸಿಯೇ ಇರುತ್ತೇವೆ. ಮತ್ತು ಇಂತಹ ಸಮಸ್ಯೆಯನ್ನೂ ಎದುರಿಸಿರುತ್ತೇವೆ.
ನೀವು ಉಳಿತಾಯ ಮಾಡಿಲ್ಲವೇ? ಹಾಗಾದರೆ ಈಗಿನಿಂದಲೇ ಆ ಬಗ್ಗೆ ಯೋಚನೆ ಮಾಡಿ ಮುಂದುವರೆಯಿರಿ. ನಿಮ್ಮ ಮಾಸಿಕ ಗಳಿಕೆಯಲ್ಲಿ ಒಂದು ಸಣ್ಣ ಮೊತ್ತವನ್ನು ತಪ್ಪದಂತೆ ಕ್ರಮಬದ್ಧತೆಯೊಂದಿಗೆ ಉಳಿಸುವ ಅಭ್ಯಾಸ ಬೆಳೆಸಿಕೊಳ್ಳಿ. ವಿಮಾ ಪ್ರೀಮಿಯಂ, ಗೃಹ ಸಾಲದ ಬಡ್ಡಿ ಮತ್ತು ಅಂತಹ ಎಲ್ಲ ವ್ಯವಹಾರ ಅಥವಾ ಉಳಿತಾಯಗಳು ವೆಚ್ಚಗಳೇ ಆಗಿವೆ. ಆದರೂ ನಮ್ಮ ಗಳಿಕೆಯ ಸ್ವಲ್ಪ ಭಾಗವನ್ನು ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ಹಣವನ್ನು ಕೂಡಿಟ್ಟು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ.
ವ್ಯವಸ್ಥೆ ಹೂಡಿಕೆ ಮುಂದಿನ ಭವಿಷ್ಯಕ್ಕೆ ರಹದಾರಿ:ಈಗಿಗ ಜನ ವ್ಯವಸ್ಥಿತ ಹೂಡಿಕೆ ಯೋಜನೆ SIP ಮ್ಯೂಚುವಲ್ ಫಂಡ್‌ನಲ್ಲಿ ಹೆಚ್ಚಾಗಿ ಹೂಡಿಕೆ ಮಾಡುತ್ತಿದ್ದಾರೆ. ಇದು ಸುರಕ್ಷಿತ ಎಂಬ ಭಾವನೆ ಹಲವರಲ್ಲಿದೆ. ಇದು ನಿಜ ಕೂಡಾ. ಆದರೆ, ಇದೊಂದೆ ಹೂಡಿಕೆಗೆ ಇರುವ ಏಕೈಕ ಮಾರ್ಗವಲ್ಲ. ಬ್ಯಾಂಕ್ ಠೇವಣಿಗಳು, ಸುಕನ್ಯಾ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ಮಾರುಕಟ್ಟೆ ಲಿಂಕ್ಡ್ ವಿಮೆಗಳಲ್ಲಿ ನಮ್ಮ ಉಳಿತಾಯದ ಹಣ ಹೂಡಿಕೆ ಮಾಡಿ ಭವಿಷ್ಯದಲ್ಲಿ ಉತ್ತಮ ಲಾಭವನ್ನು ಗಳಿಸಬಹುದು.
ಷೇರುಗಳು, ಇಟಿಎಫ್‌ಗಳು, ಚಿನ್ನದ ನಿಧಿಗಳು ಸೇರಿದಂತೆ ವಿವಿಧ ಮೂಲಗಳಲ್ಲಿ ನಿಮ್ಮ ಹಣವನ್ನು ಎಚ್ಚರಿಕೆಯಿಂದ ಹಾಗೂ ಸಂಪೂರ್ಣ ಮಾಹಿತಿಯೊಂದಿಗೆ ಹೂಡಿಕೆ ಮಾಡಬಹುದು. ಹಣಕಾಸಿನ ಅಗತ್ಯತೆಗಳು ಮತ್ತು ಸಾಮರ್ಥ್ಯವನ್ನು ನೋಡಿಕೊಂಡು ಯಾವುದರಲ್ಲಿ ಹೂಡಬೇಕು ಹಾಗೂ ಯಾವ ಯೋಜನೆ ಉತ್ತಮ ಲಾಭ ತಂದುಕೊಡುತ್ತವೆ ಎಂಬುದನ್ನು ನೋಡಿಕೊಂಡು - ತಿಳಿದುಕೊಂಡು ಹಣ ತೊಡಗಿಸಬೇಕು. ಈ ಆಯ್ಕೆ ಮಾಡುವಾಗ, ಅಪಾಯ, ನಿರೀಕ್ಷಿತ ಆದಾಯ ಮತ್ತು ಉದ್ದೇಶ ಸ್ಪಷ್ಟವಾಗಿರಬೇಕು.
ಗಳಿಕೆ ಮಾಡುತ್ತಿದ್ದರೆ ಕಡ್ಡಾಯವಾಗಿ ಒಂದಿಷ್ಟು ಉಳಿತಾಯ ಒಳಿತು:ನಾವು ನಮ್ಮ ಗಳಿಕೆಯನ್ನು ಪ್ರಾರಂಭಿಸಿದ ತಕ್ಷಣ ಹೂಡಿಕೆ ಪ್ರಾರಂಭಿಸಬೇಕು. ಅದನ್ನು ನಾವು ನಮ್ಮ ನಿವೃತ್ತಿಯವರೆಗೂ ಮುಂದುವರಿಸಬೇಕು. 30 ವರ್ಷಗಳವರೆಗೆ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಸಾಕು, ನಾವು 30 ವರ್ಷಗಳ ನಂತರ 1.4 ಕೋಟಿ ರೂಗಳನ್ನು ಗಳಿಸಬಹುದು. (ಈ ಲೆಕ್ಕ ಶೇ 18 ಪ್ರತಿಶತ ವಾರ್ಷಿಕ ಬಡ್ಡಿದರದಲ್ಲಿ ಮಾಡಲಾಗಿದೆ)
ಸ್ಪಲ್ಪ ಯೋಚಿಸಿ ಹಾಗೂ ಸ್ಮಾರ್ಟ್ ಆಗಿ ಹಣ ಹೂಡಿಕೆ ಮಾಡಿದರೆ ಎಲ್ಲರೂ ಮಿಲಿಯನೇರ್ ಆಗಬಹುದು. SIP ಯೋಜನೆಯ ಹಿಂದಿನ ತಂತ್ರವೆಂದರೆ ಹೆಚ್ಚುವರಿ ಸಣ್ಣ ಮೊತ್ತವನ್ನು ವ್ಯವಸ್ಥಿತವಾಗಿ ನಿರ್ದಿಷ್ಟ ಅವಧಿಯಲ್ಲಿ ಹೂಡಿಕೆ ಮಾಡುವುದು. ಈ ಹೂಡಿಕೆಗಳನ್ನು ಅಡೆತಡೆಯಿಲ್ಲದೇ ಮಾಡಲು ನಿರ್ದಿಷ್ಟ ಹಣಕಾಸಿನ ಉದ್ದೇಶಗಳನ್ನು ಅದಕ್ಕೆ ಲಿಂಕ್ ಮಾಡಬೇಕು.